ಕನ್ನಡದ ಕಣ್ಮಣಿ ಕರ್ನಾಟಕ ಜನತೆಯ ಮೆಚ್ಚಿನ ನಟ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ ಅಪ್ಪು ಅವರು ಸದಾ ತಮ್ಮ ಅರೋಗ್ಯದ ಬಗ್ಗೆ ಕಾಳಜಿ ತಮ್ಮ ದೇಹ ವನ್ನು ಕಟುಮಾಸ್ತಾಗಿ ಕಾಪಾಡಿಕೊಂಡು ಬಂದಿದ್ದರು ನಮ್ಮ ಅಪ್ಪು ಅವರು ಹೃ’ದ’ಯ’ದ’ಘಾ’ತದಿಂದ ನಮ್ಮನೆಲ್ಲ ಬಿಟ್ಟು ದೂರವಾಗಿದ್ದರೆ. ಅಪ್ಪು ಅವರ ಅಕಾಲಿಕ ಅಗಲಿಕೆ ನಂತರ ಪ್ರತಿಯೊಬ್ಬರಿಗೂ ಮನಸ್ಸಲ್ಲಿ ನಾಳೆ ನಮ್ಮ ಕಥೇನೂ ಹೀಗೆ ನಾವು ಇರುವಷ್ಟು ದಿನ ಯಲ್ಲರೊಂದಿಗೆ ಚನ್ನಾಗಿರೋಣ ಅನ್ನುವ ಭಾವನೆ ಬಂದಿರೋದಂತೂ ನಿಜ.
ನಾವು ಎಷ್ಟು ಸಂಪಾದನೆ ಮಾಡಿದರೇನು ನಮಗೆ ಹೆಸರಿದ್ದರೇನು. ವಿಧಿಯ ಆಟದ ಮುಂದೆ ಗೆಲ್ಲಲು ಯಾರಿಂದಾನು ಸಾಧ್ಯವಿಲ್ಲ ಅನ್ನುವ ಆತಂಕ ಯಲ್ಲರಲ್ಲೂ ಹುಟ್ಟಿದೆ.
ಅಪ್ಪು ಅವರು ಕೇವಲ ಅವರ ನಟನೆಯಿಂದ ಮಾತ್ರ ಅಲ್ಲ ಅವರ ಸೂಪರ್ ಡಾನ್ಸ್ ಮತ್ತು ಅವರ ಸುಂದರ ಕಂಠದ ಮೂಲಕ ಅವರು ಅಪಾರ ಅಭಿಮಾನಿಗಳ್ಳನ್ನು ಹೊಂದಿದ್ದರು. ಎಂದು ನಾವು ನೀವು ಅಂದುಕೊಂಡರೆ ಅದು ಖಂಡಿತ ತಪ್ಪು.
ನಿಜ ಯಾಕೆಂದರೆ ಯಾವ ನಟನಿಗೂ ಇರದ ಹೃದಯ ವೈಶಾಲ್ಯಾತೆ ಅವರಲ್ಲಿದು ಅವರು ನಮ್ಮ ಸಮಾಜಕ್ಕೆ ಬಡ ಬಗ್ಗರಿಗೆ ಯಾರು ಮಾಡದಂತಹ ಅಪಾರ ಕೊಡುಗೆ ನೀಡಿದ್ದಾರೆ. ಎಂದು ನಮಗೆಲ್ಲ ತಿಳಿದು ಬಂದಿದ್ದು ಅವರು ಸ್ವರ್ಗಸ್ತರಾದ ನಂತರ.
ಹೌದು ಬಡವರಿಗೆ ಅನಾಥರಿಗೆ ಒಂದು ಹೊತ್ತಿನ ಊಟ ಕೊಟ್ಟರೆ ಅದರ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಕಾಲ ಇದು. ಅದರ ನಡುವೆ ನಮ್ಮ ಅಪ್ಪು ಬಾಸ್ ನಿಜಕ್ಕೂ ದೇವರ ರೂಪ, ದೇವತಾ ಮನುಷ್ಯ ನಾಗಿ ನಮ್ಮ ಜನರ ಪಾಲಿಗೆ ನಿಂತ್ತಿದ್ದರು ಎನ್ನಬಹುದು. ಅವರು ಮಾಡೂರುವ ಸಮಾಜ ಮುಖಿ ಕಾರ್ಯಗಳು ಬಗ್ಗೆ ಬಡ ಕುಟುಂಬದವರಿಗೆ ಮಾಡಿರುವ ಸಹಾಯದ ಬಗ್ಗೆ ನಿರಾಶ್ರಿತರಿಗೆ ಅವರು ಕೊಟ್ಟ ಆಸರೆ ಎಲ್ಲವು ಗೊತ್ತಾಗುತ್ತಿರುವುದು ಅವರು ಅಗಲಿದ ನಂತರ.
ಮೈಸೂರಿನ ಶಾಂತಿಧಾಮದ ಸಾವಿರಾರು ಮಕ್ಕಳು ಭವಿಷ್ಯಕ್ಕೆ ದಾರಿ ದೀಪ ಆಗಿರುವ ನಮ್ಮ ಅಪ್ಪು ಈ ದೊಡ್ಮನೆ ಕುಟುಂಬದಿಂದ ಇಷ್ಟು ಬೇಗ ಕರೆಸಿಕೊಂಡಿರೋದು ದೇವರು ನಮಗೆ ನಿಜಕ್ಕೂ ಅನ್ಯಾಯ ಮಾಡಿಬಿಟ್ಟಿದಾನೆ.
ಅರೋಗ್ಯದ ಕಾಪಾಡಿಕೊಳ್ಳಲು ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತ ಡಾನ್ಸ್ ಮಾಡುತ್ತ ದಿನ ಪೂರ್ತಿ ಲವಲವಿಕೆಯಿಂದ ಇರುತಿದ್ದಾರು ಅಪ್ಪು ಅವರ ಸದಾ ನಗು ಮುಖದಿಂದಲೇ ಎಲ್ಲರ ಜೊತೆಗೆ ಬೆರೆಯುತ್ತಿದ್ದರು. ಇನ್ನು ಇತರ ನಟರ ಜೊತೆಗೆ ಮಗುವಿನಂತೆ ನಡೆದುಕೊಳ್ಳುತ್ತಿದ್ದರು. ಅವರಿಗೆ ಒಂದಿಷ್ಟು ಕೂಡ ಅಹಂ ಅನ್ನುವುದೇ ಅವರ ರಕ್ತದಲ್ಲಿ ಇರಲಿಲ್ಲ.
ಇದೀಗ ಅವರ ಪ್ರೀತಿಯ ಪತ್ನಿ ಅಶ್ವಿನಿ ಮಗಳು ದೃತಿ ಮತ್ತು ವಂದಿತಾ ಎನ್ನುವ ಮುದ್ದಿನ ಹೆಣ್ಣುಮಕ್ಕಳು ಹಾಗೂ ಇಬ್ಬರು ಅಣ್ಣಂದಿರನ್ನು ಹಾಗೂ ಕೋಟ್ಯಂತರ ಅಭಿಮಾನಿಗಳನ್ನು ಕನ್ನಡ ಚಿತ್ರರಂಗವನ್ನು ಬಡವಾಗಿಸಿ ಮಾಡಿ ಬಿಟ್ಟು ಹೋದರು. ಇನ್ನು ಅಪ್ಪು ಅವರು ಸರಿ ಸುಮಾರು 200 ಕೋಟಿಗೂ ಅಧಿಕ ಮೌಲ್ಯದ ಅಸ್ತಿ ಒಡೆಯರಾಗಿದ್ದರು.
ಈ ಇಷ್ಟೆಲ್ಲಾ ಆಸ್ತಿ ಅವರ ನಂತರ ಯಾರಿಗೆಲ್ಲ ಸೇರಲಿದೆ ಅನ್ನುವ ಪ್ರೆಶ್ನೆ ಸಹಜವಾಗಿ ಅನೇಕರ ಮನಸ್ಸಿನಲ್ಲಿ ಹರಿದಾಡುತ್ತಿರುವ ವಿಷಯ. ಈ ಅಸ್ತಿಯ ಜವಾಬ್ದಾರಿ ಪುನೀತ್ ಪತ್ನಿ ಮಕ್ಕಳು ಹಾಗೂ ಅಣ್ಣ ರಾಘಣ್ಣ ನಿಗೆ ಸಿಗಲಿದೆ ಎಂದು ಕೆಲ ಬಲ್ಲ ಮೂಲಗಳಿಂದ ನಮಗೆ ತಿಳಿದು ಬಂದಿದೆ. ಅದೇ ರೀತಿಯಾಗಿ ಅಪ್ಪು ಅವರ ಮೆಚ್ಚಿನ ಶಾಂತಿಧಾಮ ಆಶ್ರಮಕ್ಕೆ ಬರೋಬ್ಬರಿ ಎಂಟು ಕೋಟಿ ರೂಪಾಯಿ ಠೇವಣಿ ಇಡಲಾಗಿದೆ ಅನ್ನುವ ಮಾಹಿತಿ ಕೂಡ ಇದೇ ಅದೇ ರೀತಿಯಾಗಿ ಅಪ್ಪು ಅವರ ಪಿ. ಆರ್. ಕೆ ಪ್ರೊಡಕ್ಷನ್ ಸಂಸ್ಥೆ ಪತ್ನಿ ಅಶ್ವಿನಿ ಅವರು ನೋಡಿಕೊಂಡು ಹೊಗಳಿದ್ದಾರೆ.
ಸಾಧ್ಯ ಇದೀಗ ಅಪ್ಪು ಅವರ ಕನಸು ನನಸಾಗುವ ದಿನ ಹತ್ತಿರ ಬಂದಿದ್ದು ಮೊದಲೇ ತಿಳಿಸಿದಂತೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪಿ. ಆರ್. ಕೆ ಯೂಟ್ಯೂಬ್ ನಲ್ಲಿ ಗಂಧದಗುಡಿ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಟೀಸರ್ ಅಪ್ಪು ಅಭಿಮಾನಿಗಳು ಹಾಗೂ ಕರ್ನಾಟಕ ಜನತೆ ಅಪ್ಪು ಅವರನ್ನು ನೋಡಿ ಭಾವುಕರಾದರು. ನವೆಂಬರ್ 1 ರಂದು ಪುನೀತ್ ರಾಜಕುಮಾರ್ ಅವರು ಬಹಳ ಇಷ್ಟಪಟ್ಟು ನಿರ್ಮಿಸಿದ್ದ ಕರ್ನಾಟಕದ ವನ್ಯ ಸಂಪತ್ತಿನ ವಿವರ ಇರುವ ಗಂಧದಗುಡಿ ಸಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಬೇಕಿತ್ತು.
ಇದಕ್ಕಾಗಿ ಅಕ್ಟೋಬರ್ 27 ರಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ ಅವರಿಗೆ ಕರೆ ಮಾಡಿ ಕನ್ನಡ ರಾಜ್ಯೋತ್ಸವದಂದು ನಮ್ಮ ಡಾಕ್ಯುಮೆಂಟರಿಯನ್ನು ಬುಡುಗಡೆ ಮಾಡಿಕೊಡಬೇಕೆಂದು ಮನವಿ ಕೂಡ ಮಾಡಿದ್ದರು. ಆದರೆ ಅಕ್ಟೋಬರ್ 29 ರಂದು ಅಪ್ಪು ಅಗಲಿದ್ದು ಅಪ್ಪು ದಿಡೀರ್ ಅಗಲಿಕೆಯಿಂದ ರಾಜ್ಯದ ಜನರಿಗೆ ಮಾತ್ರವಾಲ್ಲದೆ ಇತರೆ ಚಿತ್ರರಂಗದ ಮಂದಿಗೆ ಕೂಡ ಶಾಕ್ ಆಗಿತ್ತು. ಇದೀಗ ಪುನೀತ್ ರಾಜಕುಮಾರ್ ಅನುಪಸ್ಥಿತಿಯಲ್ಲಿ ಗಂಧದಗುಡಿ ಟೈಟಲ್ ಟೀಸರ್ ಬಿಡುಗಡೆಯಾಗಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು