ಪತಿಯೊಂದಿಗಿನ ಹಳೇಯ ಪೊಟೋ ಶೇರ್ ಮಾಡುವ ಮೂಲಕ ಪತಿಯ ಮೇಲಿನ ಪ್ರೀತಿ ತೋರಿದ ಮೇಘನಾ ರಾಜ್…! ಫೋಟೋ ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತೆ ಕಣ್ರೀ!

ಸ್ಯಾಂಡಲ್ವುಡ್ ನ ನಟಿ ಮೇಘನಾ ಸರ್ಜಾ ನಾಲ್ಕು ವರ್ಷಗಳ ಬಳಿಕ ಬಣ್ಣದ ಲೋಕಕ್ಕೆ ವಾಪಾಸ್ ಆಗಿದ್ದಾರೆ. ನಟ ಚಿರು ಸರ್ಜಾ ಮೃತಪಟ್ಟ ಬಳಿಕ ಮೇಘನಾ ರಾಜ್ ತಮ್ಮ ಮುದ್ದಿನ ಮಗ ರಾಯನ್ ನಲ್ಲೆ ಚಿರು ಅವರನ್ನು ಕಾಣುತ್ತಾ ಖುಷಿಯಿಂದ ಬದುಕುತ್ತಿದ್ದಾರೆ. ಸದ್ಯ ಮೇಘನಾ ಸಿನೆಮಾಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದರೆ. ಸಿನೆಮಾ ಕೆಲಸಗಳ ಜೊತೆಗೆ ತಮ್ಮ ಮುದ್ದಿನ ಮಗನ ಬೆಳವಣಿಗೆಯ ಕುರಿತು ಸಹ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿರುವ ಮೇಘನಾ ರಾಜ್ ಇದೀಗ ಚಿರು ಜೊತೆಗಿನ ಹಳೆಯ ರೊಮ್ಯಾಂಟಿಕ್ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ಸಿಕ್ಕಾಪಟ್ಟೆ ವೈ’ರಲ್ ಆಗಿದೆ.

ಪಂಚತಾರೆ ನಟಿ ಮೇಘನಾ ರಾಜ್ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ರಾಯನ್ ತುಂಟಾಟದ ವಿಡಿಯೋಗಳನ್ನು ಹಾಗೂ ಕೆಲವೊಂದು ಮೋಟಿವೇಶನ್ ಸಂದೇಶಗಳನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುಟ್ಟಿರುತ್ತಾರೆ. ಇನ್ನು ನಟಿ ಮೇಘನಾ ಹಂಚಿಕೊಂಡ ಫೋಟೋಗಳು ಕೂಡ ಸಕ್ಕತ್ ವೈ’ರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಮಗನೊಂದಿಗೆ ಆಟ ಆಡುವಂತಹ ವಿಡಿಯೋಗಳನ್ನು ಕೂಡ ಆಗಾಗ ಶೇರ್ ಮಾಡುತ್ತಿರುತ್ತಾರೆ.

ಜೀವನದಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಗಳನ್ನು ಎದುರಿಸುತ್ತಾ ಆಕೆ ಸಿನಿ ಕೇರಿಯರ್ ಮತ್ತೆ ಸಾಗಿಸುತ್ತಿದ್ದಾರೆ. ಸಿನೆಮಾಗಳ ಜೊತೆ ಜೊತೆಗೆ ಆಕೆ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಸಹ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವುಗಳ ಜೊತೆಗೆ ತಮ್ಮ ಅಭಿಮಾನಿಗಳ ಜೊತೆಗೆ ಸಂವಹನ ನಡೆಸುವ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಹ ಸಕ್ರಿಯಾವಾಗಿ ಬಳಸುತ್ತಾರೆ. ತಮ್ಮ ಕೇರಿಯರ್ ಬಗ್ಗೆ, ದಿನನಿತ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಅಮಾನಿಗಳಿಗೆ ಹತ್ತಿರವಾಗಿರುತ್ತಾರೆ.

ಇನ್ನು ನಟಿ ಮೇಘನಾ ರಾಜ್ ಇದೀಗ ತಮ್ಮ ಮುದ್ದಿನ ಪತಿ ಚಿರು ಜೊತೆಗಿನ ಹಳೆಯ ಬ್ಯೂಟಿಫುಲ್ ಅಂಡ್ ರೊಮ್ಯಾಂಟಿಕ್ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಚಿರು ಸರ್ಜಾ ಹಾಗೂ ಮೇಘನಾ ರಾಜ್ ಮದುವೆಯಾಗುವುದಕ್ಕೂ ಮುಂಚೆ ಮೇಘನಾ ರಾಜ್ ಮದುವೆಯಾಗುವುದಕ್ಕೂ ಮುಂಚೆ ತೆಗೆದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಈ ಮುದ್ದಾದ ಫೋಟೋ ನೋಡಿದ ಅಭಿಮಾನಿಗಳು ಕೂಡ ಈ ಫೋಟೋವನ್ನು ನೋಡಿ ಖುಷಿಯಾಗಿದ್ದಾರೆ. ತನ್ನ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ಚಿರು ಹಾಗೂ ಮೇಘನಾ ಸರ್ಜಾ ಅವರ ಹಳೆಯ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದು ಈ ಫೋಟೋ ಗೆ ನಾವು ಮಾತ್ರ ಎಂಬ ಕ್ಯಾಪ್ಟನ್ ಸಹ ಹಾಕಿದ್ದಾರೆ. ಇನ್ನೂ ಮೇಘನಾ ಸಹ ಚಿರು ಇಹಲೋಕ ತ್ಯಜಿಸಿದರೂ ಇನ್ನೂ ಚಿರು ನೆನಪಲ್ಲೇ ಮಗ ರಾಯನ್ ಸರ್ಜಾ ನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೂ ಇತ್ತೀಚಿಗಷ್ಟೇ ಮೇಘನಾ ರಾಜ್ ಅವರ ಎರಡನೇ ಮದುವೆಯ ಬಗ್ಗೆ ಕೆಲವೊಂದು ಸುದ್ಧಿಗಳು ಹರಿದಾಡುತ್ತಿದ್ದು. ಆದರೆ ಇನ್ನೂ ಮದುವೆಯಾಗಲ್ಲ ಎಂದೂ ಖಡಾಖಂಡಿತವಾಗಿ ಹೇಳಿದ್ದರು. ಸಂದರ್ಶನವೊಂದರಲ್ಲಿ ಈ ಸುಳ್ಳು ಸುದ್ಧಿಗಳಿಗೆ ನಟಿ ಉತ್ತರ ಕೊಟ್ಟಿದ್ದಾರೆ. ನಾನು ನಾಳೆ ಏನಾಗುತ್ತದೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ.

ಎಂದಿಗೂ ನಾನು ಮದುವೆಯ ಬಗ್ಗೆ ನನಗೆ ಕೇಳಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ನನ್ನ ಜೀವನ ಹೇಗಿರಬೇಕೆಂಬುದು ಕೂಡ ನಾನು ಚಿಂತೆ ಮಾಡಿಲ್ಲ ಎಂದು ಹೇಳುವ ಮೂಲಕ ಎರಡನೇ ಮದುವೆಯ ಬಗ್ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *