ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ದಾಖಲು, ಸಾಮಿ ಸಾಮಿ ಅಂತ ಕುಣಿದದ್ದೇ ತಪ್ಪಾಯ್ತಾ..? ಆಗಿದ್ದೇನು ನೋಡಿ..?

ನ್ಯಾಷನಲ್ ಕೃಶ್ ರಶ್ಮಿಕಾ ಮಂದಣ್ಣ ಅವರು ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಒಂದರ ಹಿಂದೆ ಒಂದು ಸಿನೆಮಾಗಳನ್ನು ಮಡುತ್ತಿದ್ದಾರೆ. ನಿಜ ಹೇಳಬೇಕು ಅಂದರೆ ಇದೀಗ ದಕ್ಷಿಣ ಭಾರತದಲ್ಲಿ ನಂಬರ್ ಒನ್ ನಾಯಕಿಯ ಪಟ್ಟವನ್ನು ಅಲಂಕಾರಿಸಿದ್ದಾರೆ. ಅಂತನೇ ಹೇಳಬಹುದು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಸೇರಿದಂತೆ ಇಡೀ ದಕ್ಷಿಣ ಭಾರತವನ್ನು ಆಳುತ್ತಿದ್ದಾರೆ. ಮೊದಲೆಲ್ಲಾ ಕೇವಲ ಕನ್ನಡ,ತಮಿಳು, ತೆಲುಗು ಸಿನೆಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಬಾಲಿವುಡ್ ಗು ಕೂಡ ಕಲಿಟ್ಟಿದ್ದು ಇದಾಗಲೇ ಎರಡು ಸಿನೆಮಾದಲ್ಲಿ ನಟಿಸಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ಅಮಿತಾ ಬುಚ್ಚನ್ ನಟನೆಯ ಗುಡ್ ಬೈ ಎಂಬ ಸಿನೆಮಾವು ಕೂಡ ಬಿಡುಗಡೆಗೆ ತಯಾರಾಗಿದೆ ಆದರೆ ಇದರ ಬೆನ್ನಲ್ಲೇ ಇದೀಗ ಇದ್ದಕ್ಕಿದ್ದ ಹಾಗೆ ರಶ್ಮಿಕಾ ಮಂದಣ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೌದು ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕೂ ರಶ್ಮಿಕಾಗೆ ಆಗಿದ್ದದರೂ ಏನು ಯಾಕೆ ಈ ರೀತಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದನ್ನು ನೋಡುವುದಾದರೆ.

ಸತತವಾಗಿ ಚಿತ್ರೀಕರಣದಲ್ಲಿ ತೊಡಗಿರುವ ಕಾರಣದಿಂದಾಗಿ ರಶ್ಮಿಕಾ ಮಂದಣ್ಣ ಅವರು ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರು ಹೈದರಾಬಾದ್ ನ ಆಸ್ಪತ್ರೆಗೆ ದಾಖಲಾಗಿದ್ದಾರೆ ಅರ್ಥ್ತೂ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಅವರು ರಶ್ಮಿಕಾ ಅವರಿಗೆ ಚಿಕಿತ್ಸೆ ನೀಡಿದ್ದು ತಮಾಷೆಯಾಗಿ ಪುಷ್ಪ ಸಿನೆಮಾದ ಸಾಮಿ ಸಾಮಿ ಹಾಡಿಗೆ ಸಕ್ಕತ್ ಸ್ಟೆಪ್ ಹಾಕಿ ಮೊಣಕಾಲಿಗೆ ಭಾರ ಹಾಕಿ ಡಾನ್ಸ್ ಮಾಡಿದ್ದಾರೆ. ಅದಕ್ಕಾಗಿ ಈ ನೋವು ಬಂದಿದೆ ಎಂದು ಬರೆದುಕೊಂಡಿದ್ದಾರೆ. ಮೊಣಕಾಲಿನ ನೋವು ಅತಿಯಾದ ಕಾರಣದಿಂದಾಗಿ ಚಿಕಿತ್ಸೆ ಪಡೆಯಲು ರಶ್ಮಿಕಾ ಮಂದಣ್ಣ ಬಂದಿದ್ದರು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ.

ಸದ್ಯ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಕೆಲವೇ ದಿನಗಳಲ್ಲಿ ಅವರು ಸರಿ ಹೋಗುತ್ತಾರೆ ಎಂದಿನಂತೆ ಮತ್ತೆ ಸಿನೆಮಾಗಳ ಶೋಟಿಂಗ್ ನಲ್ಲೂ ಅವರು ಭಾಗಿಯಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚು ಮೊಣಕಾಲಿಗೆ ಕೆಲಸ ಕೊಟ್ಟಿರುವ ಕಾರಣದಿಂದಾಗಿಯೇ ಈ ರೀತಿ ಆಗಿದೆ ಎಂದು ಡಾಕ್ಟರ್ ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸಿನೆಮಾ ಜರ್ನಿಯ ಯಶಸ್ವಿ ಜೊತೆ ಶರೀರಿಕವಾಗಿ ಸಾಕಷ್ಟು ಬಳಲಿದ್ದಾರೆ ರಶ್ಮಿಕಾ ಮಂದಣ್ಣ ಅದನ್ನು ಕೇಳಿದಂತಹ ಕೆಲವು ಅಭಿಮಾನಿಗಳು ಸಿನೆಮಾ ಕೆಲಸವನ್ನು ಬಿಟ್ಟು ಆರೋಗ್ಯದ ಕಡೆ ಹೆಚ್ಚು ಗಮನವನ್ನು ನೀಡಿ ಅಂತ ಹೇಳಿದ್ದಾರೆ.

ಆದರೆ ರಶ್ಮಿಕಾ ಮಂದಣ್ಣ ಅವರು ಮಾತ್ರ ಇದ್ಯಾವುದಕ್ಕೂ ಕೇರ್ ಮಾಡದೆ ನನಗೆ ನನ್ನ ಕೇರಿಯರ್ ಮುಖ್ಯ ಸಿನೆಮಾದಲ್ಲಿ ಇನ್ನೂ ಉನ್ನತ ಶಿಖರಕ್ಕೆ ಇರಬೇಕು ಅಂತ ಹೇಳಿಕೊಂಡಿದ್ದಾರಂತೆ. ಇದರ ಜೊತೆಗೆ ಆದಷ್ಟು ಶೀಘ್ರವಾಗಿ ನಾನು ಗುಣಮುಖವಾಗಿ ಅಲ್ಲಿ ಇದ್ದೇನೆ ಅಭಿಮಾನಿಗಳು ಆತಂಕ ಪಡಬೇಡಿ ಎಂದು ರಶ್ಮಿಕಾ ಮಂದಣ್ಣ ಅವರು ತಿಳಿಸಿದ್ದಾರೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಚಿಕಿತ್ಸೆ ಪಡೆಯುತ್ತಿರುವಂತಹ ಫೋಟೋಸ್ ಮತ್ತು ವಿಡಿಯೋ ಗಳು ವೈ’ರಲ್ ಅಗಿದ್ದು ಸಾಕಷ್ಟು ಚರ್ಚೆಗೆ ಒಳಗಾಗಿದೆ. ಏನೇ ಆಗಲಿ ನಮ್ಮ ಕೊಡಗಿನ ಕುವರಿ ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಎನ್ನೋದೇ ಅಭಿಮಾನಿಗಳ ಆಸೆ.

Leave a Reply

Your email address will not be published. Required fields are marked *