ನಾನು ನಗುತ್ತಿರುವುದು ನಿನಗಾಗಿ ಮಾತ್ರ : ಮುದ್ದಿನ ಪತಿ ಚಿರು ಹುಟ್ಟು ಹಬ್ಬಕ್ಕೆ ಭಾವುಕ ಸಾಲು ಬರೆದು ವಿಶೇಷ ಫೋಟೋ ಹಂಚಿಕೊಂಡ ಮೇಘನಾ ರಾಜ್.

ನಮಸ್ತೆ ಪ್ರೀತಿಯ ವೀಕ್ಷಕರೆ ರಾಜಾಹುಲಿ ಖ್ಯಾತಿಯ ನಟಿ ಮೇಘನಾ ರಾಜ್ ಅವರು ಮತ್ತೆ ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು ಮಗನ ಲಾಲನೆ ಪಾಲನೆಯ ಜೊತೆಗೆ ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ ನಟಿ ಮೇಘನಾ ರಾಜ್. ಬದುಕಿನಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಮಗನಿಗಾಗಿ ಬದುಕು ಸಾಗಿಸುತ್ತಿದ್ದಾರೆ ಮೇಘನಾ. ಮೊನ್ನೆ ಅ.17ರಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ತನ್ನ ಮುದ್ದಿನ ಪತಿಯ ಹುಟ್ಟುಹಬ್ಬಕ್ಕೆ ಪತ್ನಿ ಮೇಘನಾ ರಾಜ್​ ಅವರು ವಿಶೇಷವಾದ ಒಂದು ಫೋಟೋ ಹಂಚಿಕೊಂಡಿದ್ದಾರೆ. ಹೌದು ತಮ್ಮ ಮದುವೆಯ ಫೋಟೋವನ್ನು ಶೇರ್ ಮಾಡಿಕೊಂಡಿರುವ ಮೇಘನಾ ರಾಜ್ ಅವರು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಈ ಫೋಟೋದ ಜೊತೆಗೆ ‘ನನ್ನ ಸಂತಸಕ್ಕೆ ಹುಟ್ಟುಹಬ್ಬದ ಶುಭಾಶಯಗಳು. ನಾನು ನಗುತ್ತಿರುವುದು ನಿಮಗಾಗಿ ಮಾತ್ರ. ನನ್ನ ಪ್ರೀತಿಯ ಪತಿ ಚಿರು. ಐ ಲವ್​ ಯೂ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಚಿರು ಹುಟ್ಟುದಿನದ ದಿನದ ಪ್ರಯುಕ್ತ ಅವರ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇನ್ನು, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ಅವರದ್ದು ಲವ್​ ಕಮ್​ ಅರೇಂಜ್​ ಮ್ಯಾರೇಜ್​.

ಹತ್ತು ಹನ್ನೆರಡು ವರ್ಷಗಳ ಕಾಲ ಪ್ರೀತಿಸಿದ್ದ ಅವರು ಎರಡೂ ಕುಟುಂಬದ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಯಾರ ಕೆಟ್ಟ ದೃಷ್ಟಿಯೂ ಈ ಜೋಡಿಗಳ ಮೇಲೆ ಬಿತ್ತೋ, ಆ ದೇವರು ಕೂಡ ಈ ಜೋಡಿಯನ್ನು ಜೊತೆಯಾಗಿ ಬಾಳಲು ಬಿಡಲಿಲ್ಲ. 2020ರ ಜೂನ್​ 7ರಂದು ಅವರು ಹೃ-ದ-ಯಾ-ಘಾ-ತ-ದಿಂದ ನಿ-ಧ-ನ ಹೊಂದಿದರು. ಆದಾದ ಬಳಿಕ ಮೇಘನಾ ರಾಜ್ ಮಡಿಲಿಗೆ ಪುಟ್ಟ ಕಂದನ ಆಗಮನವಾಯಿತು. ಇದೀಗ ಮೇಘನಾ ರಾಜ್ ಪಾಲಿಗೆ ಅವನೇ ಪ್ರಪಂಚವಾಗಿದ್ದಾನೆ.

ಅಂದಹಾಗೆ, ಇತ್ತೀಚೆಗಷ್ಟೇ ಭಾರತದ ಸಿನೆಮಾರಂಗದ ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ಒಂದಾದ ಫಿಲ್ಂ ಫೇರ್ ಅವಾರ್ಡ್ ಫಂಕ್ಷನ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಖ್ಯಾತ ನಾಮಾಂಕಿತ ನಟ-ನಟಿಯರು ಅವಾರ್ಡ್ ಫಂಕ್ಷನ್ ನಲ್ಲಿ ಪಾಲ್ಗೊಂಡಿದ್ದರು ಅದರಲ್ಲೂ ಸ್ಯಾಂಡಲ್ ವುಡ್ ನ ಕ್ಯೂಟ್ ನಟಿ ಮೇಘನಾ ರಾಜ್ ಸಂಭ್ರಮದಿಂದ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೇಘನಾ ರಾಜ್ ಅವರು, ಚಿರಂಜೀವಿ ಸರ್ಜಾ ಪರವಾಗಿ ಲೈಫ್ ಟೈಂ ಅಚೀವ್ಮೆಂಟ್ ಅವಾರ್ಡ್ ಕೂಡ ಸ್ವೀಕರಿಸಿದ್ದಾರೆ.

ಈ ಅವಾರ್ಡ್ ಸ್ವೀಕರಿಸುವುದಕ್ಕೂ ಮುನ್ನ ಮಾಧ್ಯಮದ ಜೊತೆಗೆ ‘ನನಗೆ ದೂರದ ಜರ್ನಿ ಅಂದ್ರೇ ಅಲರ್ಜಿ. ಹೀಗಾಗಿ ಅವಾರ್ಡ್ ಪ್ರೋಗ್ರಾಂಗಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ವರ್ಷ ಹೋಗಬೇಕಂದಿದ್ದೇ ಅವಾಗಲೇ ಅವಾರ್ಡ್ ಫಂಕ್ಷನ್ ಬೆಂಗಳೂರಿನಲ್ಲಿ ನಡೆದಿದೆ. ಖುಷಿಯಾಗ್ತಿದೆ ಎಂದಿದ್ದಾರೆ. ಅಂದಹಾಗೆ, ಚಿರು ಪರವಾಗಿ ಸ್ವೀಕರಿಸಿದ ಅವಾರ್ಡ್ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಮೇಘನಾ , ನೋಡು ಚಿರು ಫೈನಲ್ಲಿ ನಿನ್ನ ಬ್ಲ್ಯಾಕ್ ಲೇಡಿ ಮನೆಯಲ್ಲಿದ್ದಾಳೆ.

ನನಗೆ ಸರಿಯಾಗಿ ಕಾಣಿಸುತ್ತಿದೆ. ಒಂದೊಮ್ಮೆ ನೀವು ಈ ಅವಾರ್ಡ್ ಸ್ವೀಕರಿಸಿದರೇ ನಿಮ್ಮ ರಿಯಾಕ್ಷನ್, ಮುಖದ ಭಾವ ಏನಿರುತ್ತಿತ್ತು ಎಂಬುದನ್ನು ನಾನು ಈಗಲೂ ಹೇಳಬಲ್ಲೆ. ಇಂತ ಇನ್ನಷ್ಟು ಸಾಧನೆಗಳು ನಿಮ್ಮದಾಗಲಿ ಎಂದು ಮೇಘನಾ ಚಿರುಗಾಗಿ ಅವಾರ್ಡ್ ಜೊತೆ ಪೋಟೋ ಶೇರ್ ಮಾಡಿದ್ದು ಶುಭ ಹಾರೈಸಿದ್ದಾರೆ.
ಹೀಗೆ ಪ್ರತಿ ಕ್ಷಣವು ಚಿರುವನ್ನು ನೆನಪಿಸಿಕೊಳ್ಳುವ ಮೇಘನಾ ರಾಜ್, ಚಿರುವಿನ ಕನಸಿನಂತೆ ರಾಯನ್ ರಾಜ್ ನನ್ನು ಬೆಳೆಸುತ್ತಿದ್ದಾರೆ. ಮಗನಿಗಾಗಿ ಸಿನಿ ಕೆರಿಯರ್ ಅನ್ನು ಮತ್ತೆ ಆರಂಭ ಮಾಡಿದ್ದು, ಇದೀಗ ಮೇಘನಾ ರಾಜ್ ಅವರ ಕೈಯಲ್ಲಿ ಕೆಲವು ಸಿನಿಮಾಗಳಿದ್ದು, ಸಿನಿಮಾ ಶೂಟಿಂಗ್ ಎಂದು ಬ್ಯುಸಿಯಾಗಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *