ಪ್ರೀತಿಯ ವೀಕ್ಷಕರೆ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ಅವರು ಇಡೀ ದೇಶದಲ್ಲಿಯೇ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿದ್ದರೂ ಹಾಗೂ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದರೂ ಕೂಡ ಸರಳತೆಗೆ ಕನ್ನಡಿ ಹಿಡಿದಂತೆ ಬದುಕಿ ತೋರಿಸಿದವರು. ಇಂದಿಗೂ ಕೂಡ ಸಾಕಷ್ಟು ಕಲಾವಿದರು ಮಾತ್ರವಲ್ಲದೆ ಅಭಿಮಾನಿಗಳು ಕೂಡ ಡಾ. ರಾಜಕುಮಾರ್ ನಡೆದು ಬಂದಂತೆ ಸರಳ ಹಾದಿಯನ್ನೇ ಪಾಲಿಸುತ್ತಾ ಅವರ ಹಾದಿಯಲ್ಲೇ ಹೋಗುತ್ತಿದ್ದಾರೆ.
ಹೀಗಿರುವಾಗ ಅದೊಂದು ದಿನ ಶಾಂತ ಮೂರ್ತಿ ಎಂದೇ ಕರೆಯಲ್ಪಡುವ ಅಣ್ಣಾವ್ರು ನನ್ನ ಮುಂದೆ ಮಾತನಾಡುವಾಗ ಹುಷಾರ್ ಎಂದು ಬಹಳನೇ ಕೋಪಗೊಂಡು ವಾರ್ನಿಂಗ್ ನೀಡಿದ್ದರಂತೆ. ಅಷ್ಟಕ್ಕೂ ಯಾರ ವಿರುದ್ಧ ಅಣ್ಣಾವ್ರು ಇಷ್ಟು ಗರಂ ಆಗಿದ್ದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸ್ನೇಹಿತರೆ, ಅಣ್ಣವ್ರಿಗೆ ಜಾತಿ ಪದ್ಧತಿ ಎಂದರೆ ಇಷ್ಟವಾಗುತ್ತಿರಲಿಲ್ಲ. ಯಾರನ್ನು ಅಣ್ಣಾವ್ರು ಜಾತಿ ಎಂಬ ವಿಷಯದಿಂದಾಗಿ ಭೇದಭಾವ ಮಾಡುತ್ತಲೇ ಇರಲಿಲ್ಲ. ಆದರೆ ಕೆಲವು ಕಿಡಿಗೇಡಿಗಳು ಸಮಾಜದ ಲ್ಲಿ ಹಾಗೂ ಸಿನಿಮಾರಂಗದಲ್ಲಿ ಇಲ್ಲಸಲ್ಲದ ಸುದ್ದಿಯನ್ನು ಅಣ್ಣಾವ್ರ ವಿರುದ್ಧ ಎತ್ತು ಕಟ್ಟುತ್ತಿದ್ದರು.
ಅದು ಜಾತಿ ವಿಷಯವಾಗಿ ಬಂದಿದ್ದೆ ಹೆಚ್ಚು, ಹೌದು ಗೆಳೆಯರೇ ಡಾ.ರಾಜಕುಮಾರ್ ಹೀಗೆ ಒಂದು ಸಿನಿಮಾದ ಶೂಟಿಂಗ್ ನಿಮ್ಮುತ್ತಾ ಚೆನ್ನೈನಲ್ಲಿ ಇದ್ದರು ಶೂಟಿಂಗ್ ಕೆಲಸಗಳನ್ನು ಮುಗಿಸಿ ಮಧ್ಯಾಹ್ನ ಎಲ್ಲರೊಂದಿಗೆ ಕುಳಿತು ಊಟ ಮಾಡುವುದು ಅಣ್ಣಾವ್ರ ಹವ್ಯಾಸವಾಗಿತ್ತು. ಹೀಗೆ ಎಲ್ಲರೂ ತಮ್ಮ ಶೂಟಿಂಗ್ ಅನುಭವಗಳನ್ನು ಮಾತನಾಡುತ್ತಾ ಊಟ ಮಾಡುತ್ತಿದ್ದರು ಆಗ ಯಾರೋ ಬೇಕಂತಲೇ ಅಣ್ಣಾವ್ರ ಪಕ್ಕದಲ್ಲಿ ಕುಳಿತು ಜಾತಿ ವಿಷಯದ ಕುರಿತು ಮಾತನಾಡತೊಡಗಿದರು. ಕೆಲ ಕಾಲ ಅಣ್ಣಾವ್ರು ಇದನ್ನು ಹೆಚ್ಚಾಗಿ ಕಿವಿಗೆ ಹಾಕಿಕೊಳ್ಳದೆ ಸುಮ್ಮನೆ ಕುಳಿತುಕೊಂಡಿದ್ದರು.
ಆದರೆ ಯಾವಾಗ ಜಾತಿ ಪದ್ಧತಿಯ ವಿಚಾರ ಅತಿರೇಖಕ್ಕೆ ಹೋಯಿತೋ ಆಗ ಅಣ್ಣಾವ್ರು ನೋಡಿ ಇದು ಇವತ್ತಿಗೆ ಕೊನೆ ಯಾರಾದರೂ ನನ್ನ ಮುಂದೆ ಕುಳಿತು ಜಾತಿ ಪದ್ಧತಿಯ ಪರ ಹಾಗೂ ವಿರೋಧದ ಕುರಿತು ಮಾತನಾಡಿದರೆ ನಾನು ಇಲ್ಲಿಗೆ ಬರುವುದನ್ನ ನಿಲ್ಲಿಸಬೇಕಾಗುತ್ತದೆ ಹುಷಾರ್. ದಯವಿಟ್ಟು ಇನ್ನ್ಯಾರು ಈ ವಿಚಾರವಾಗಿ ನನ್ನ ಮುಂದೆ ಮಾತನಾಡುವಂತಿಲ್ಲ ಎಂದು ಅಣ್ಣಾವ್ರು ಖಡಕಂಡಿತವಾಗಿ ವಾರ್ನಿಂಗ್ ನೀಡಿದ್ದರು. ಅಂದಿನಿಂದ ಯಾರು ಸಹ ಅಣ್ಣಾವ್ರು ಜೊತೆ ಕುಳಿತು ಜಾತಿ ವಿಷಯದ ಕುರಿತು ಚರ್ಚೆ ಮಾಡುತ್ತಲೇ ಇರಲಿಲ್ಲ. ಇಂತಹ ಮೇರು ವ್ಯಕ್ತಿತ್ವದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.