ತಾನು ಅನಾಥ ತನಗೆ ಯಾರು ಇಲ್ಲ ಹಿಂದಿಲ್ಲ ಮುಂದಿಲ್ಲ ಎಂದು ಹೇಳಿಕೊಂಡಿದ್ದ ಆಕೆ ನಾಲ್ಕೈದು ಮದುವೆಯನ್ನ ಇದೇ ಕಾರಣ ಮುಂದಿಟ್ಟುಕೊಂಡು ಆಗಿದ್ದಾಳೆ. ಆಕೆಯ ಮೇಲೆ ಅನುಕಂಪ ಮೂಡಿ ಯುವಕರು ಕೂಡ ಮದುವೆ ಆಗುತ್ತಿದ್ದರು ಮದುವೆಯಾಗಿ ಸಂಸಾರ ನಡೆಸುವ ಮೊದಲು ಆ ಮನೆಯಿಂದ ಹಣ ಆಭರಣ ದೋಚುವುದೇ ಆಕೆಯ ಕಾಯಕವಾಗಿತ್ತು. ಕೊನೆಗೂ ಪೊಲೀಸ್ ಬಂದಿ ಆಗಿರುವ ಆ ಖತರ್ನಾಕ್ ಲೇಡಿ ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಚೆನ್ನೈ ನ ಪಶ್ಚಿಮದ ತಾಂಬರಂ ನ ರಂಗನಾಥಪುರಂ ನಿವಾಸಿ ನಟರಾಜನ್ ಎನ್ನುವ 25 ವರ್ಷದ ಯುವಕನನ್ನ, ಅಭಿನಯ ಎನ್ನುವ 28 ವರ್ಷದ ಮಹಿಳೆ ವಿವಾಹವಾಗಿ ಕೊರೆಗೆ ಆತನ ಮನೆಯಿಂದ 15 ಸವರನ್ ಚಿನ್ನ ಹಾಗೂ 20ಸಾವಿರ ನಗದು ಹಣವನ್ನು ದೋಚಿಕೊಂಡು ಅಕ್ಟೋಬರ್ 19ರಂದು ದೋಚಿಕೊಂಡು ಮನೆಯಿಂದ ಪರಾರಿಯಾಗಿದ್ದಳು ಕೊನೆಗೆ ಪೊಲೀಸರಿಗೆ ದೂರು ನೀಡಿದ ನಂತರ, ನಾಪತ್ತೆಯಾಗಿದ್ದ ಅಭಿನಯ ಹುಡುಕಾಟ ನಡೆಸಿದ್ದಾರೆ ಪೊಲೀಸರು ಕೊನೆಗೂ ಪೊಲೀಸರಿಗೆ ಅತಿಥಿ ಆಗಿದ್ದಾಳೆ ಅಭಿನಯ. ನಟರಾಜ್ ನನ್ನು ಮದುವೆಯಾಗಿ ಮೋಸ ಮಾಡಿದ ಅಭಿನಯಗಳನ್ನು ತನಿಖೆ ಮಾಡಿದ ನಂತರ ಇನ್ನಷ್ಟು ಸ್ಪೋಟಕ ಮಾಹಿತಿಗಳು ಬಹಿರಂಗವಾಗಿದೆ ಅಭಿನಯ ಅವರ ಬಳಿ ಉಂಡೆನಾಮ ಹಾಕಿಸಿಕೊಂಡಿದ್ದು ನಟರಾಜ್ ಮಾತ್ರವಲ್ಲ ಇನ್ನು ಸಾಕಷ್ಟು ಮಂದಿ ಇದ್ದಾರೆ.
ಮಹಿಳೆಯ ಆಧಾರ್ ಕಾರ್ಡ್ ನೋಡಿದ ನಂತರ ಪೊಲೀಸರಿಗೆ ಆಕೆಯ ಅಸಲಿಯತ್ತು ಎಂದು ತಿಳಿದುಬಂದಿದೆ. ಆಕೆಯ ಹೆಸರಿನಲ್ಲಿ 32 ಸಿಮ್ ಕಾರ್ಡ್ ಬಳಕೆಯಾಗಿದೆ ಬೇರೆ ಬೇರೆ ಸಿಮ್ ನಿಂದ ಸಾಕಷ್ಟು ಜನರಿಗೆ ಮೋಸ ಮಾಡಿದ್ದಾಳೆ. ಸೆಮ್ಮಂಚೆರಿ ಏರಿಯಾದ ಹಾಸ್ಟೆಲ್ ಒಂದರಲ್ಲಿ ಇದ್ದ ಅಭಿನಯಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.
ಎಲ್ಲರಿಗೂ ಮೋಸ ಮಾಡುತ್ತಿದ್ದ ಅಭಿನಯ ಮಧುರೈ ಮೂಲದವಳು 10ನೇ ತರಗತಿವರೆಗೂ ಓದಿದ್ದಾಳೆ. 2011ರಲ್ಲಿ ಮನ್ನಾರ್ ಗುಡಿ ಬಳಿಯ ವಿಜಯ್ ಎಂಬವರನ್ನು ಹೀಗೆ ಮೋಸ ಮಾಡಿ ಮದುವೆಯಾಗಿ ಕೊನೆಗೆ ಆತನನ್ನ ಬಿಟ್ಟು ಬಂದಿದ್ದಳು. 2013ರಲ್ಲಿ ಸೆಂಥಿಲ್ ಕುಮಾರ್ ಎನ್ನುವವನ ಜೊತೆ ವಿವಾಹವಾಗಿದ್ದಾಳೆ ಇವರಿಬ್ಬರಿಗೂ ಒಂದು ಗಂಡು ಮಗುವು ಇದೆ. 2020ರಲ್ಲಿ ಪನ್ನೀರ್ ಸೆಲ್ವಂ ಎನ್ನುವ ಆಟೋ ಚಾಲಕನ ಜೊತೆ ವಿವಾಹವಾಗಿ ಕೇವಲ 10 ದಿನದ ಸಂಸಾರ ನಡೆಸಿದ್ದಾಳೆ. ಇನ್ನು ನಾಲ್ಕನೆಯದಾಗಿ ನಟರಾಜ್ ನನ್ನು ಮದುವೆಯಾಗಿ ಒಂದುವರೆ ತಿಂಗಳ ಕಾಲ ಸಂಸಾರ ನಡೆಸಿ ಆತನ ಮನೆಯಿಂದ ಹಣ ಚಿನ್ನ ದೋಚಿದ್ದಾಳೆ.
ಇನ್ನು ಈ ಖತರ್ನಾಕ್ ಲೇಡಿ ಅಭಿನಯ ಜೊತೆ ಆಕೆಯ 2ನೆಯ ಗಂಡ ಸೆಂಥಿಲ್ ಕುಮಾರ್ ಕೂಡ ಸೇರಿಕೊಂಡಿದ್ದ ಎನ್ನಲಾಗುತ್ತಿದೆ. ಆಕೆ ದೂಚಿದ ಚಿನ್ನವನ್ನು ಮಾರಿ ಇಬ್ಬರು ಚೆನ್ನಾಗಿ ಸಂಸಾರ ನಡೆಸುತ್ತಿದ್ದರು. ಮದುವೆಯಾಗಿದ್ದು ಹೊರತುಪಡಿಸಿ ಇನ್ನೂ ಕೆಲವು ಯುವಕರ ಜೊತೆ ಅಭಿನಯ ಇದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇದೀಗ ಅಭಿನಯ ಹಾಗೂ ಆಕೆಯ ಎರಡನೆಯ ಗಂಡ ಸೆಂಥಿಲ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಮೂರು ಸವರನ್ನು ಚಿನ್ನ ಹಾಗೂ 75,000ಗಳನ್ನು ವಶಪಡಿಸಿಕೊಂಡಿದ್ದಾರೆ.