ನಮಸ್ತೆ ಪ್ರೀತಿಯ ವೀಕ್ಷಕರೆ ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಅವರ ನಂತರದಲ್ಲಿ ಮಗ ದರ್ಶನ್ ಕೂಡ ದೊಡ್ಡ ಸ್ಟಾರ್ ನಟನಾಗಿ ಬೆಳೆದರು. ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಕೂಡ ನಿರ್ದೇಶಕನಾಗಿ ಒಳ್ಳೆಯ ಹೆಸರನ್ನು ಕೂಡ ಗಳಿಸಿದ್ದಾರೆ. ಈ ಮೂವರು ಹಿಂದೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದವರು ದರ್ಶನ್ ತಾಯಿ ಮೀನಾ ತೂಗುದೀಪ. ಚಿತ್ರರಂಗದ ಖ್ಯಾತ ಕಲಾವಿದ ತೂಗುದೀಪ ಶ್ರೀನಿವಾಸ್ ಅವರಿಗೆ ಕಿಡ್ನಿ ಸಮಸ್ಯೆಯಿತ್ತು.
ಎರಡು ಕಿಡ್ನಿಗಳು ವೈಫಲ್ಯವಾಗಿ ಸಾ’ವು ಬದುಕಿನ ಮಧ್ಯ ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಪತ್ನಿ ಮೀನಾ ತೂಗುದೀಪ ಅವರೇ ಗಂಡನಿಗೆ ಒಂದು ಕಿಡ್ನಿ ದಾನ ಮಾಡಿ ಅವರ ಪ್ರಾಣ ಉಳಿಸಿಕೊಂಡರು. ಕಿಡ್ನಿ ಕೊಟ್ಟ ಮೇಲೆ ತೂಗುದೀಪ ಶ್ರೀನಿವಾಸ ಮೊದಲಿನಂತೆ ಆಗ್ತಾರೆ ಎಂಬ ಬಹುದೊಡ್ಡ ಆಸೆ ಮನೆಯವರಲ್ಲಿತ್ತು. ಆ ಆಸೆ ಹೆಚ್ಚು ಕಾಲ ಉಳಿಯಲಿಲ್ಲ ಎನ್ನುವುದು ತೀರಾ ನೋವಿನ ಸಂಗತಿ. 52ನೇ ವಯಸ್ಸಿನಲ್ಲಿ ಹೃ-ದ-ಯಾ-ಘಾ-ತ-ದಿಂದ ಕಲಾವಿದ ಶ್ರೀನಿವಾಸ್ ಅಗಲಿದರು.
ಶ್ರೀನಿವಾಸ್ ಅವರು ಇದ್ದಾಗಲೇ ದರ್ಶನ್ ನೀನಂಸಂಗೆ ಹೋಗಿದ್ದರು. ಒಬ್ಬ ತಾಯಿಯಾಗಿ ನಾನು ಅವನಿಗಾಗಿ ಮಾಡಬಹುದಾದ ಎಲ್ಲಾ ಕರ್ತವ್ಯ ಮಾಡಿದ್ದೇನೆ, ನಂತರ ದಿನಕರ್ ಕೂಡ ಅದೇ ರೀತಿ ಹೆಸರು ಮಾಡಬೇಕು ಅಂತ ಕನಸು ಕಂಡೆ. ಚಿಕ್ಕ ವಯಸ್ಸಿನಿಂದಲೇ ಅವನಿಗೆ ಕಥೆ ಬರೆಯುವ ಆಸಕ್ತಿ ಇತ್ತು ನಾನು ಗಮನ ಕೊಟ್ಟಿರಲಿಲ್ಲ. ಸರ್ಕಾರಿ ಕೆಲಸ ಸಿಗಲಿ ಎಂದು ಬಯಸಿದ್ದೆ. ಆದರೆ ಅವನು ಜೊತೆ ಜೊತೆಯಲಿ ಸಿನೆಮಾ ಮಾಡಿ ಯಶಸ್ವಿಯಾದ ನಾನು ನಿರ್ಮಾಪಕಿ ಆದೆ. ತೂಗುದೀಪ ಪ್ರೊಡಕ್ಷನ್ ಮೂಲಕ ತಂದೆಯ ಹೆಸರನ್ನು ಚಿರಾಯುವಾಗಿ ಎಂದು ಮಕ್ಕಳ ಬಗ್ಗೆ ತಾಯಿ ಮೀನಾ ಹೆಮ್ಮೆಯಿಂದ ಮಾತನಾಡಿದ್ದಾರೆ.
ತೂಗುದೀಪ ಶ್ರೀನಿವಾಸ್ ಅವರ 2 ಕಿಡ್ನಿ ವೈಫಲ್ಯವಾದಾಗ ಮೀನಾ ಅವರು ಒಂದು ಕಿಡ್ನಿ ನೀಡಿದ್ದರು. ಕಿಡ್ನಿ ಕೊಟ್ಟ ಮೇಲೆ ಒಂದು ವರ್ಷ ಅವರು ನಮ್ಮ ಜೊತೆ ಚನ್ನಗಿ ಇದ್ದರು. ನಾನು ಕಿಡ್ನಿ ಕೊಡುವಾಗ ನಮ್ಮ ಮೂರು ಮಕ್ಕಳಿಗೆ ತುಂಬಾ ಬೇಜಾರಾಗಿತ್ತಂತೆ. ಆಪರೇಷನ್ ಆದ ಮೇಲೆ ನನಗೆ ಪ್ರೆಜ್ಞೆ ಬಂದಿದ್ದೆ ಮೂರು ದಿನದ ನಂತರ. ತೂಗುದೀಪ ಅವರಿಗೆ ಕೂಡಲೇ ಪ್ರೆಜ್ಞೆ ಬಂದಿದೆ, ಒಂದೇ ಆಸ್ಪತ್ರೆಯಲ್ಲಿ ಇದ್ದರು ನನಗೆ ಪತ್ರ ಬರೆದು, “ಮೀನಾ, ನಾನು ಚನ್ನಗಿದ್ದೇನೆ, ನಿನಗೆ ಪ್ರೆಜ್ಞೆ ಬಂತಾ ಎಂದು ಸಂದರ್ಶನದಲ್ಲಿ ನೆನಪಿಸಿ ಕೊಂಡಿದ್ದಾರೆ.
ಕಿಡ್ನಿ ವೈಫಲ್ಯ,, ತನ್ನ ಗಂಡನಿಗೆ ತನ್ನಲ್ಲಿದ್ದ ಎಲ್ಲಾ ಒಡವೆಗಳನ್ನು ಮಾರಿದ್ದ ಮೀನಾ ತೂಗುದೀಪ ಅಂದು ಪಟ್ಟ ಕಷ್ಟ ಹೇಳತೀರದು. ಅದು ಕಣ್ಣೀರಿನ ದಿನಗಳು ಎಂದು ಸಂದರ್ಶನ ಒಂದರಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಬಾವುಕಾರಾಗಿದ್ದರು. ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ಬೆಳೆಸಿ, ಪೋಷಿಸಿದ ಗಟ್ಟಿಗಿತ್ತಿ ಮೀನಾ ತೂಗುದೀಪ. ಇಂತಹ ಕಷ್ಟದ ದಿನಗಳಲ್ಲಿ ದರ್ಶನ್ ಹಾಲು ಮಾರಿ ನಂತರ ಸಿನೆಮಾ ರಂಗದಲ್ಲಿ ಲೈಟ್ ಬಾಯ್ ಆಗಿ ದುಡಿದು ತಾಯಿಗೆ ನೇರವಾಗಿದ್ದರು. ಇದು ನಿಜವಾದ ಮಕ್ಕಳ ಜವಾಬ್ದಾರಿ ಅಲ್ಲವೇ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.