ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಹೊಸ ಮನೆಯ ಗೃಹಪ್ರವೇಶ..! ಅಬ್ಬಬ್ಬಾ ಎಷ್ಟು ಕೋಟಿ ಬೆಲೆ ಬಾಳುತ್ತೇ ನೋಡಿ!

ಲವ್ ಮಾಕ್ಟೇಲ್’ ಸಿನಿಮಾಗಳ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಮಿಲನಾ ನಾಗರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ದಂಪತಿಗೆ ಅನೇಕರು ಶುಭಾಶಯ ತಿಳಿಸುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅವರು ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಕಷ್ಟಪಟ್ಟು ಇಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಡಾರ್ಲಿಂಗ್ ಕೃಷ್ಣ, ಮಿಲನಾ ಇಬ್ಬರ ಕೈತುಂಬ ಸಿನಿಮಾಗಳಿದ್ದು, ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. 6 ವರ್ಷಗಳಿಗೂ ಅಧಿಕ ಕಾಲ ಪ್ರೀತಿಸಿದ ಈ ಜೋಡಿ ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಸಂಗೀತ ಸಂಯೋಜನೆ, ಛಾಯಾಗ್ರಹಣ ಬಿಟ್ಟು ಬೇರೆ ಎಲ್ಲ ಕೆಲಸವನ್ನು ಮಾಡಿತ್ತು. ಈ ಚಿತ್ರಕ್ಕೆ ದೊಡ್ಡ ಯಶಸ್ಸು ಸಿಕ್ಕಿತ್ತು. ಅದಾದ ನಂತರದಲ್ಲಿ ‘ಲವ್ ಮಾಕ್ಟೇಲ್ 2’ ಕೂಡ ದೊಡ್ಡ ಹಿಟ್ ಆಯ್ತು. ಅದಾದ ನಂತರದಲ್ಲಿ ಈ ಜೋಡಿಗೆ ಸಾಕಷ್ಟು ಆಫರ್‌ಗಳು ಅರಸಿ ಬಂದವು.

ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್. 1 ವಶೀಕರಣ ಸ್ಪೆಷಲಿಸ್ಟ್
ಪಂಡಿತ್ : ಶ್ರೀ ಆರ್. ಎನ್. ಜೋಷಿ
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಆರೋಗ್ಯ, ಮದುವೆ,ಗಂಡ -ಹೆಂಡತಿ ಕಲಹ, ಲೈಂಗಿಕ ಸಮಸ್ಯೆ, ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ 100ಕ್ಕೆ101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ
ಅಸಾಧ್ಯವಾದದ್ದು ಇಲ್ಲಿ ಸಾಧ್ಯ
8050846164

ಇನ್ನೂ ಇವರಿಬ್ಬರೂ ಮದುವೆ ಆಗಿ ಸುಮಾರು 1 ವರ್ಷಗಳ ಮೇಲೆ ಆಯಿತು. ಈಗ ಇವರಿಬ್ಬರೂ ಹೊಸ ಮನೆಯ ಗೃಹಪ್ರವೇಶವನ್ನು ಮಾಡಿದ್ದಾರೆ. ಹೌದು ತಮ್ಮ ಹೊಸ ಮನೆಯ ಗೃಹಪ್ರವೇಶ ಪೂಜೆಯನ್ನು ನೆರವೇರಿಸಿ ಕೆಲ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಸಾಕಷ್ಟು ಅಭಿಮಾನಿಗಳು ಖುಷಿಯಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಇನ್ನೂ ತಮ್ಮ ಹೊಸ ಮನೆಯ ಗೃಹಪ್ರವೇಶಕ್ಕೆ ಅಮೃತಾ ಅಯ್ಯಂಗಾರ್, ಸುಧಾ ಬೆಳವಾಡಿ ಇನ್ನೂ ಸಾಕಷ್ಟು ಕಲಾವಿದರು ಆಗಮನ ಮಾಡಿದ್ದರು. ನಟ ಡಾರ್ಲಿಂಗ್ ಕೃಷ್ಣ ಅವರು ಜೂನ್ 12 1985 ರಂದು ಮೈಸೂರಿನಲ್ಲಿ ಜನಿಸಿದ್ದಾರೆ. ಇವರು ಹೀರೋ ಆಗಿ ನಟಿಸುವ ಮುನ್ನ ಮೊದಲು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.

ಹಾಗೆಯೇ ಇವರು ಮೊದಲು ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಜಾಕಿ ಚಿತ್ರದಲ್ಲಿ ಸಿಐಡಿ ಆಫೀಸರ್ ಆಗಿ ನಟಿಸಿದ್ದಾರೆ. ಇದಾದ ಮೇಲೆ ಹುಡುಗರು, ಮದರಂಗಿ, ದೊಡ್ಮನೆ ಹುಡುಗ, ಕೋಟಿಗೊಬ್ಬ 3, ಲವ್ ಮಾಕ್ಟೃಲ್, ಲವ್ ಮಾಕ್ಟೈಲ್ 2 ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ವಿಶೇಷವಾಗಿ ಹೇಳಬೇಕು ಎಂದರೆ ಡಾರ್ಲಿಂಗ್ ಕೃಷ್ಣ ಅವರು ತಮ್ಮ ಲವ್ ಮಾಕ್ಟೈಲ್ ಮತ್ತು ಲವ್ ಮಾಕ್ಟೈಲ್ 2 ಚಿತ್ರಗಳನ್ನು ಸ್ವತಃ ಬರೆದು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಹಾಗೆಯೇ ಮಿಲನ ನಾಗರಾಜ್ ಅವರು ಏಪ್ರಿಲ್ 25 1989 ರಂದು ಹಾಸನದಲ್ಲಿ ಜನಿಸಿದ್ದಾರೆ.

ಇವರು ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿಕೊಂಡರು. ತದನಂತರ ಬೃಂದಾವನ, ಚಾರ್ಲಿ, ಲವ್ ಮಾಕ್ಟೈಲ್, ಲವ್ ಮಾಕ್ಟೈಲ್ 2, ವಿಕ್ರಾಂತ್ ರೋಣ ಇನ್ನೂ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Leave a Reply

Your email address will not be published. Required fields are marked *