ನಟ ಅನಿರುದ್ಧ್ ರ ಮುಂದಿನ ಹೆಜ್ಜೆ ಅಭಿಮಾನಿಗಳಿಗೆ ಸರ್ಪ್ರೈಸ್..! ವಿಷಯ ತಿಳಿಯುತ್ತಲೇ ಕುಣಿದು ಕುಪ್ಪಳಿಸಿದ ಜನತೆ ನೋಡಿ!!

ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡ ಕಿರುತೆರೆ ಲೋಕದಲ್ಲಿ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಬೆಳ್ಳಿತೆರೆಯಿಂದ ಕಿರುತೆರೆಗೆ ಕಾಲಿಟ್ಟು ಸಾಕಷ್ಟು ಹೆಸರು ಮಾಡಿರುವ ನಟ ಅನಿರುದ್ದ್ ಜೊತೆ ಜೊತೆಯಲಿ ಧಾರಾವಾಹಿಯ ಪಾತ್ರ ಆರ್ಯವರ್ಧನ್ ಎಂದೇ ಖ್ಯಾತಿಯನ್ನು ಪಡೆದಿದ್ದರೆ. ಈ ಧಾರಾವಾಹಿ ಅನಿರುದ್ದ್ ಅವರಿಗೆ ವೃತ್ತಿ ಬದುಕಿನಲ್ಲಿ ಬಹುದೊಡ್ಡ ತಿರುವನ್ನೇ ನೀಡಿತ್ತು. ಹಾಗೂ ಈ ಧಾರಾವಾಹಿ ಮೂಲಕ ಅನಿರುದ್ದ್ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಹಿಟ್ಟಿಕೊಂಡಿತು.

ಅಷ್ಟೇ ಅಲ್ಲದೆ ಕಿರುತೆರೆ ಹಿಸ್ಟರಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಹೊರ ಹೊಮ್ಮಿದರು. ಆದರೆ ಇದೀಗ ಅನಿರುದ್ದ್ ಅವರು ತಮಗೆ ಕೀರ್ತಿ ತಂದುಕೊಟ್ಟ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಿದ್ದಿದ್ದಾರೆ. ಧಾರಾವಾಹಿಯ ನಿರ್ದೇಶಕ ಮತ್ತು ನಟ ಅನಿರುದ್ದ್ ನಡುವೆ ಬಿನ್ನಾಭಿಪ್ರಾಯ ಊಟದ ಕಾರಣ ಧಾರಾವಾಹಿ ತಂಡ ಅನಿರುದ್ದ್ ಅವರನ್ನು ಹೊರಹಕಿದ್ದಾರೆ. ಈ ವಿಚಾರವಾಗಿ ಕಳೆದ ಕೆಲ ವಾರಗಳಿಂದ ಸಾಕಷ್ಟು ವಿವಾದಗಳು ಕೂಡ ಸೃಷ್ಟಿಯಾಗಿತ್ತು.

ನಟ ಅನಿರುದ್ದ್ ನಿರ್ದೇಶಕರು ಹೇಳಿದ ಸೀನ್ ಗಳಲ್ಲಿ ಅಭಿನಯಿಸಲು ನಿರಾಕರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು ಹಾಗೂ ಈ ಕಾರಣಕ್ಕಾಗಿಯೇ ಮನಸ್ತಾಪ ಉಂಟಾಗಿ ಅನಿರುದ್ದ್ ಅವರನ್ನು ಧಾರಾವಾಹಿಯಿಂದ ಹೊರಗಿಟ್ಟು 2 ವರ್ಷಗಳು ಕಾಲ ಯಾವುದೇ ಸೀರಿಯಲ್ ಗಳಲ್ಲಿ ನಟಿಸುವ ಅವಕಾಶಗಳು ನೀಡಬಾರದು ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಹೀಗೆ ಭಾರಿ ವಿವಾದ ಎದ್ದ ನಂತರ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರಕ್ಕೆ ಕಾರ್ ಘಟನೆ ತೋರಿಸಲಾಗಿದ್ದು, ಕಡ್ಡಾಯವಾಗಿ ಮುಖ ಬದಲಾವಣೆ ಮಾಡಿಸಲೇಬೇಕು ಎಂಬ ಪ್ರಸಾರ ಮಾಡಲಾಗಿದೆ. ಈ ಮೂಲಕ ಅನಿರುದ್ದ್ ಮಾಡುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಬೇರೊಬ್ಬ ನಟ ಬರುವುದು ಖಚಿತವಾಗಿದ್ದು, ಈ ವೇಳೆ ಅನಿರುಧ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ನನ್ನ ಮೇಲೆ ತಮಗಿರೋ ಅಪಾರವಾದ ಪ್ರೀತಿಯನ್ನು ನೋಡಿ ನಾನು ತಲೆ ಬಾಗುತ್ತೇನೆ. ಈ ಕಷ್ಟದ ದಿನಗಳಲ್ಲಿ ತಾವು ಸಾವಿರಾರು ಸಂದೇಶಗಳು, ಹಾಗೂ ಬೇರೆ ಬೇರೆ ರೀತಿಯಲ್ಲಿ ನನ್ನ ಪರ ಬೆಂಬಲಕ್ಕೆ ನಿಂತಿದ್ದೀರಿ. ಅದಕ್ಕೆ ನಾನು ಚಿರಋಣಿ. ತಮ್ಮ ಪ್ರಯತ್ನಗಳಿಗೆ ತಾವು ಅಂದುಕೊಂಡಿರೋ ಫಲ ಸಿಗಲಿಲ್ಲ ಅಂತ ದಯವಿಟ್ಟು ನಿರಾಶೆಗೊಳ್ಳಬೇಡಿ. ಸ್ವಲ್ಪ ತಾಳ್ಮೆಯಿಂದ ಇರೋಣ, ತಮ್ಮ ಪ್ರೀತಿ, ಹೈರಿಕೆ, ಆಶೀರ್ವಾದ ಹಾಗೂ ಪ್ರಾರ್ಥನೆ ನನ್ನ ಮುಂದಿನ ಯೋಜನೆಗಳ ಮೇಲೂ ಇರುತ್ತೆ ಅನ್ನೋ ನಂಬಿಕೆ ನನಗಿದೆ. ತಮ್ಮೆಲ್ಲರನ್ನೂ ನಾನು ತುಂಬಾ ಪ್ರೀತಿಸುತ್ತೇನೆ. ಯಾವಾಗಲೂ ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ ಎಂದು ಬರೆದುಕೊಂಡಿದ್ದಾರೆ.

ಇನ್ನು ಇತ್ತ ಅಭಿಮಾನಿಗಳು ಅನಿರುದ್ದ್ ಅವರ ಈ ಪೋಸ್ಟ್ ಗೆ ಅವರ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡಿದ್ದು, ನೀವಿಲ್ಲದೆ ಜೊತೆ ಜೊತೆಯಲಿ ಶೂನ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆ ಪಾತ್ರಕ್ಕೆ ನಿಮ್ಮನ್ನು ಬಿಟ್ಟು ಬೇರೆ ಯಾರೂ ಸಹ ಸೂಟ್ ಆಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮತ್ತೊರ್ವ ಅಭಿಮಾನಿ ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದು ನೀವು ಸಹ ಸೃಜನ್ ಲೋಕೇಶ್ ರೀತಿ ನಿಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಹಾಗೂ ಇದಕ್ಕೆ ನಮ್ಮ ಬೆಂಬಲ ಮತ್ತು ಹಾರೈಕೆ ಯಾವಾಗಲೂ ಇರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೂ ಇನ್ನು ಕೆಲ ಅಭಿಮಾನಿಗಳು ಇದು ಆರ್ಯವರ್ಧನ್ ಅವರಿಗೆ ಉತ್ತಮ ಸಲಹೆ ಎಂದು ಕಾಮೆಂಟ್ ಎಂದು ಬೆಂಬಲಿಸಿದ್ದಾರೆ.

ಈ ಇಬ್ಬರಲ್ಲಿ ತಪ್ಪು ಯಾರದ್ದು ಎಂದು ಅರ್ಥವಾಗುತ್ತಿಲ್ಲ. ಮತ್ತೊರ್ವ ಅಭಿಮಾನಿ ಕಾಮೆಂಟ್ ಮಾಡಿದ್ದು ಇಬ್ಬರಲ್ಲಿ ತಪ್ಪು ಯಾರದ್ದು ಎಂಬುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ ಮ ಧಾರಾವಾಹಿ ತಂಡದವರು ಇಷ್ಟೆಲ್ಲ ಆದರೂ ಅನಿರುಧ್ ಅವರು ನಮಗೆ ಒಂದು ಫೋನ್ ಮಾಡಲಿಲ್ಲ ಅಂತಾರೆ ನೀವು ನೋಡಿದ್ರೆ ಕರೆಯಲಿಲ್ಲ ಅಂತೀರಾ, ಇಬ್ಬರಲ್ಲಿ ಯಾರಾದರೂ ಒಬ್ಬರಾದರೂ ಸೋಲಲಿಲ್ಲ ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ದ್ ಅವರ ಅಭಿನಯಕ್ಕೆ ಕಡ್ಡಾಯವಾಗಿ ಮುಕ್ತಾಯಗೊಂಡಿದ್ದು ಹರೀಶ್ ರಾಜ್ ಅವರು ಆರ್ಯವರ್ಧನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಅನಿರುದ್ದ್ ಅವರು ಅದಾಗಲೇ ನ್ಯೂಸ್ 18 ವಾಹಿನಿಯಲ್ಲಿ ವರದಿಗಾರನಾಗಿ ಮಳೆಯ ಸುದ್ದಿಯನ್ನು ರಿಪೋರ್ಟ್ ಮಾಡಿದ್ದು ಮುಂಬರುವ ದಿನಗಳಲ್ಲಿ ಸೃಜನ್ ಲೋಕೇಶ್ ಅವರಂತೆ ನಿರ್ಮಾಣ ಸಂಸ್ಥೆ ತೆರೆಯುವರೇ ಕಾದು ನೋಡಬೇಕಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *