ನಟಿ ಲೀಲಾವತಿ ಯೋಗಕ್ಷೇಮ ವಿಚಾರಿಸಿ, ಭರ್ಜರಿ ಬಿರಿಯಾನಿ ಪಾರ್ಟಿ ಮಾಡಿದ ಶ್ರುತಿ ಹಾಗೂ ಭಾರತಿ ವಿಷ್ಣುವರ್ಧನ್.. ನೋಡಿ ಕ್ಯೂಟ್ ವಿಡಿಯೋ

ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಅವರು ಸಿನಿಮಾರಂಗಕ್ಕಿಂತ ಹೆಚ್ಚಾಗಿ ಸಾಮಾಜಿಕ ಕೆಲಸಗಳ ಮೂಲಕ ಸುದ್ದಿಯಾಗುವುದೇ ಹೆಚ್ಚು. ಅಂದಹಾಗೆ, ಭೂಮಿ ತಾಯಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನು, ಹಿರಿಯ ನಟಿ ಲೀಲಾವತಿ ಅವರು 1937 ರಲ್ಲಿ ಬೆಳ್ತಂಗಡಿಯಲ್ಲಿ ಜನಿಸಿದ, ಇವರ ತಂದೆಯ ಹೆಸರು ಸುಬ್ಬಯ್ಯ. ಲೀಲಾವತಿ ಅವರು ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಸಹ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ನಾಗಕನ್ನಿಕೆ ಎನ್ನುವ ಚಿತ್ರದಲ್ಲಿ ಚಂಚಲ ಕುಮಾರಿ ಎನ್ನುವ ಚಿಕ್ಕ ಪಾತ್ರದ ಮೂಲಕ ನಟನಾ ಬದುಕನ್ನು ಶುರು ಮಾಡಿದರು. ತದನಂತರದಲ್ಲಿ ಮಹಾಲಿಂಗ ಭಗವತೀ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಕಂಪನಿಗೆ ಸೇರಿಕೊಂಡರು. ಇದಾದ ಮೇಲೆ ಇವರಿಗೆ 1958 ರಲ್ಲಿ ‘ಭಕ್ತ ಪ್ರಹ್ಲಾದ’ ಸಿನಿಮಾಕ್ಕೆ ನಟಿಸುವ ಅವಕಾಶವು ಸಿಕ್ಕಿತು. ಅದಲ್ಲದೇ ಲೀಲಾವತಿಯವರು ಕೊನೆಯದಾಗಿ ನಟಿಸಿದ ಸಿನಿಮಾ 2009 ರಲ್ಲಿ ಬಿಡುಗಡೆಯಾದ ‘ಯಾರದು’ ಸಿನಿಮಾ. ನಟನೆ ಮಾತ್ರವಲ್ಲದೇ ನಿರ್ಮಾಣದಲ್ಲಿಯೂ ಕೂಡ ಅನೇಕ ಸಿನಿಮಾಗಳು ತೆರೆಗೆ ಬಂದಿದೆ.

ಕಾಲೇಜ್ ಹೀರೋ, ಕನ್ನಡದ ಕಂದ, ಶುಕ್ರ ಮತ್ತು ಯಾರದು ಚಿತ್ರಗಳನ್ನು ನಿರ್ಮಾಣ ಸಹ ಮಾಡಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 50 ವರ್ಷದ ಸಿನಿ ಜೀವನದ ಅವಧಿಯಲ್ಲಿ ಸುಮಾರು 600 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಲೀಲಾವತಿಯವರನ್ನು ಮಗ ವಿನೋದ್ ರಾಜ್ ನೋಡಿಕೊಳ್ಳುತ್ತಿದ್ದಾರೆ. ಹಿರಿಯ ನಟಿ ಲೀಲಾವತಿಯವರ ಮನೆಗೆ ಚಂದನವನದ ನಟಿಯರು ಹೋಗಿ ಹಿರಿ ಜೀವದ ಜೊತೆಗೆ ಸಮಯ ಕಳೆಯುತ್ತಾರೆ.

ಈ ಹಿಂದೆ ನಟಿಯಾರಾದ ಶ್ರುತಿ, ಹೇಮಾ ಚೌಧರೀ ಹಾಗೂ ಭಾರತಿ ವಿಷ್ಣುವರ್ಧನ್ ಅವರು ತೆರಳಿ ಲೀಲಾವತಿಯವರ ಮನೆಯಲ್ಲಿ ಬಿರಿಯಾನಿ ಪಾರ್ಟಿ ಮಾಡಿದ್ದರು. ಹಿರಿ ಜೀವದ ಜೊತೆಗೆ ಈ ನಟಿಯರು ತಮ್ಮ ಅಮೂಲ್ಯ ಕ್ಷಣವನ್ನು ಕಳೆದಿದ್ದರು. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು, ಆ ಖುಷಿಯ ಕ್ಷಣವನ್ನು ನೀವಿಲ್ಲಿ ನೋಡಬಹುದು. ಇನ್ನು, ಕಷ್ಟ ಇದ್ದರು ದಾನ ಧರ್ಮದಲ್ಲಿ ಎತ್ತಿದ ಕೈ ಈ ತಾಯಿ ಮಗ.

ಲೀಲಾವತಿ ತಮ್ಮ ಸಿನಿ ಬದುಕಿನಲ್ಲಿ ದುಡಿದ ಹಣದಲ್ಲಿ ಜಮೀನು ತೋಟ ಖರೀದಿ ಮಾಡುತ್ತಿದ್ದರು. ಈ ಮೊದಲು ಚೆನ್ನೈನಲ್ಲಿಯೂ ಜಮೀನು ಖರೀದಿ ಮಾಡಿದ್ದರು. ಆದಾದ ಬಳಿಕ ಬೆಂಗಳೂರು ಸಮೀಪದ ಸೋಲದೇವನಹಳ್ಳಿಯಲ್ಲಿಯೂ ತೋಟ ಖರೀದಿ ಮಾಡಿದ್ದರು. ಕೆಲವು ತಿಂಗಳ ಹಿಂದೆ, ಚೆನ್ನೈ ನಲ್ಲಿರುವ ತಮ್ಮ ಜಮೀನನ್ನು‌ ಮಾರಾಟ ಮಾಡಿದ್ದರು. ಆ ಜಮೀನಿಂದ ಬಂದ ಹಣವನ್ನು ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಿಸಲು ಉಪಯೋಗಿಸಿಕೊಂಡಿದ್ದಾರೆ.
ಆಸ್ಪತ್ರೆ ಕಟ್ಟಲು ಮುಂದಾಗಿದ್ದು ಕೆಲವು ತಿಂಗಳ ಹಿಂದೆ ಐವತ್ತು ಲಕ್ಷ ರೂಪಾಯಿ ವೆಚ್ಛದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿ ಅದ್ದೂರಿಯಾಗಿ ಓಪನ್ ಕೂಡ ಮಾಡಿದ್ದಾರೆ. ತಾಯಿ ಲೀಲಾವತಿ ಅಮ್ಮನವರ ಆಸೆಯಂತೆ ಚೆನೈನಲ್ಲಿರುವ ತಮ್ಮ ಸ್ವಂತ ಜಮೀನನ್ನು ಮಾರಿದ ನಟ ವಿನೋದ್ ರಾಜ್ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಯೂ ನಿರ್ಮಾಣ ಮಾಡಿದ್ದಾರೆ.

ಕಳೆದ ಕೆಲವು ದಿನದ ಹಿಂದೆಯಷ್ಟೇ ಈ ಆರೋಗ್ಯ ಕೇಂದ್ರವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಉದ್ಘಾಟನೆ ಮಾಡಿದ್ದರು. ಒಟ್ಟಿನಲ್ಲಿ ಇಳಿ ವಯಸ್ಸಿನಲ್ಲಿ ಲೀಲಾವತಿಯವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಮೆಚ್ಚುವಂತಹ ಸಂಗತಿಯಾಗಿದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *