ನಟಿ ಖುಷ್ಬು ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಕಟ್ಟಿಸಿದ್ದ ಭವ್ಯ ಬಂಗಲೆ ಮನೆಯನ್ನು ಅರ್ಜುನ್ ಸರ್ಜಾ ಅವರಿಗೆ ಮಾರಿದ್ದೇಕೆ? ನಂತರ ಅರ್ಜುನ್ ಸರ್ಜಾ ಎದುರಿಸಿದ ಸಂಕಷ್ಟಗಳು ಏನು ನೋಡಿ

ದಕ್ಷಿಣಭಾರತದ ಖ್ಯಾತ ನಟಿ ಖುಷ್ಬು ಅವರು 90ರ ದಶಕದಲ್ಲಿ ತಮ್ಮ ಅದ್ಭುತವಾದ ನಟನೆಯಿಂದ ಎಲ್ಲರ ಗಮನವನ್ನು ತನ್ನಕಡೆ ಸೆಳೆದು ಕೊಂಡಿದ್ದರು. ಅದೆಷ್ಟು ಸಿನೆಮಾಗಳು ಖುಷ್ಬು ಇದ್ದಾರೆ ಎಂಬ ಒಂದೇ ಒಂದು ಕಾರಣದಿಂದ ಸಿನೆಮಾ ಸೂಪರ್ ಹಿಟ್ ಕೂಡ ಆಗಿದೆ ಎಂದರೆ ಖಂಡಿತ ತಪ್ಪಾಗಲಾರದು. ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಯ ಸಿನೆಮಾಗಳಲ್ಲಿ ನಟಿ ಖುಷ್ಬು ಅವರು ನಟಿಸಿದ್ದಾರೆ. https://7hotnews.com/

ಮೊಟ್ಟ ಮೊದಲ ಬಾರಿಗೆ ಒಬ್ಬ ಭಾರತೀಯ ನಟಿ ದೇವಸ್ಥಾನವನ್ನು ಕಟ್ಟಿಸಿಕೊಂಡು ಗುರುತಿಸಿಕೊಂಡವರು ನಟಿ ಖುಷ್ಬು. ಈ ರೀತಿ ಪ್ರಖ್ಯಾತಿ ಪಡೆದುಕೊಂಡಿದ್ದ ಖುಷ್ಬು ಅವರು ತಾವು ಇಷ್ಟಪಟ್ಟು ಕಟ್ಟಿದ ಮನೆಯನ್ನು ಕೂಡ ಮಾರುವ ಪರಿಸ್ಥಿತಿಗೆ ಬರುತ್ತಾರೆ. ಹಾಗಾದರೆ ನಟಿ ಖುಷ್ಬು ಅವರಿಗೆ ಮನೆಯನ್ನು ಮಾರುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು ಹಾಗೂ ನಂತರ ಮತ್ತೆ ಯಾವ ರೀತಿ ಆರ್ಥಿಕವಾಗಿ ಮೇಲೆ ಸದೃಢರಾದರು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.

ಹೌದು ಚನ್ನೈನಲ್ಲಿ ನಟಿ ಖುಷ್ಬು ಅವರು ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಸುಂದರವಾಗಿ ಮನೆಯನ್ನು ಕಟ್ಟಿಸುತ್ತಾರೆ. ಆದರೆ ಮನೆಯನ್ನು ಕಟ್ಟಿಸಿದ ಕೆಲವೇ ವರ್ಷಗಳಲ್ಲಿ ನಟಿ ಖುಷ್ಬು ಅವರಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಇದರ ಜೊತೆಗೆ ಆ ಮನೆಯಲ್ಲಿ ಕೆಲವೊಂದು ವಿಚಿತ್ರ ಸಂಕಷ್ಟಗಳನ್ನು ಕೂಡ ಅನುಭವಿಸುತ್ತಾರೆ. ಆ ವಿಚಿತ್ರ ಅನುಭವಗಳು ಯಾವ ರೀತಿ ಇತ್ತು ಎಂದರೆ ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಹವುಗಳು ಕಾಣಿಸಿಕೊಳ್ಳುತ್ತಿರುತ್ತದೆ.

ಈ ರೀತಿಯಲ್ಲಿ ವಿಚಿತ್ರವಾಗಿ ಏಕೆ ಆಗುತ್ತಿದೆ ಎಂದು ಯೋಚನೆ ಮಾಡಿದಾಗ ಮನೆಯನ್ನು ಕಟ್ಟಬೇಕಾದರೆ ಆ ಜಾಗದಲ್ಲಿ ಒಂದು ಹುತ್ತಇರುತ್ತದೆ ಆದರೆ ಅದನ್ನು ಅವರು ಗಮನಿಸಿರುವುದಿಲ್ಲ. ಅದನ್ನು ತೆರುವುಗೊಳಿಸಿ ಆ ಜಾಗದಲ್ಲಿ ಭವ್ಯವಾದ ಬಂಗಲೆಯನ್ನು ನಟಿ ನಿರ್ಮಾಣ ಮಾಡಿಸುತ್ತಾರೆ. ಈ ಕಾರಣದಿಂದ ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದರ ಜೊತೆಗೆ ಸಿನೆಮಾದಲ್ಲಿದ್ದ ಪ್ರಖ್ಯಾತಿಯನ್ನು ಕೂಡ ಕಳೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಖುಷ್ಬು ಅವರು ಸಾಕಷ್ಟು ಸಾಲು ಸಾಲು ಸಿನೆಮಾಗಳು ಕೂಡ ಸೋತು ಸುಣ್ಣ ಆಗುತ್ತಾರೆ ಹಾಗೂ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಾರೆ.

ಆ ಸಮಯದಲ್ಲಿ ನಟಿ ಖುಷ್ಬು ಅವರು ಮನೆಯಲ್ಲಿ ಎದುರಿಸಿದ್ದ ಸಂಕಷ್ಟಗಳನ್ನು ನಟ ಅರ್ಜುನ್ ಸರ್ಜಾ ಅವರಿಗೆ ತಿಳಿಸಿ ನಂತರ ಮನೆಯನ್ನು ಅವರಿಗೆ ಸೇಲ್ ಮಾಡುತ್ತಾರೆ. ಮನೆಯನ್ನು ತೆಗೆದುಕೊಂಡ ಅರ್ಜುನ್ ಸರ್ಜಾ ಅರ್ಚಕರನ್ನು ಕರೆಸಿ ಕೆಲವೊಂದು ಹೋಮಗಳನ್ನು ಮಾಡಿ ಮನೆಗೆ ಕಾಲಿಡುತ್ತಾರೆ. ಇನ್ನು ಆ ಮನೆಗೆ ಬಂದ ಕೆಲವೇ ದಿನಗಳಲ್ಲಿ ಅರ್ಜುನ್ ಸರ್ಜಾ ಅವರ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ.

ಹಾಗೂ ಹಲವು ನಾನಾ ರೀತಿಯ ಸಂಕಷ್ಟಗಳನ್ನು ಅರ್ಜುನ್ ಸರ್ಜಾ ಅವರಿಗೆ ಎದುರಿಸುತ್ತಾರೆ. ಹಾಗೂ ಸಿನೆಮಾರಂಗದಲ್ಲಿ ಕೂಡ ಸಾಕಷ್ಟು ಏರು ಪೇರುಗಳನ್ನು ಅನುಭವಿಸುತ್ತಾರೆ. ಯಾವಾಗ ಈ ರೀತಿಯ ತೊಂದರೆಗಳು ಎದುರಾಯಿತೋ ಆಗ ಅರ್ಜುನ್ ಸರ್ಜಾ ಅವರು ಕೂಡ ಆ ಮನೆಯನ್ನು ಬಿಟ್ಟು ಹೊರ ಬರುತ್ತಾರೆ. ಈಗ ಆ ಮನೆಯ ಜಾಗದಲ್ಲಿ ಹುತ್ತ ಬೆಳೆದು ಎಲ್ಲರೂ ಆ ಹುಟ್ಟಕ್ಕೆ ಪೂಜೆ ಮಾಡುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *