ನಟನೆಯ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಮುದ್ದು ಚೆಲುವೆ ನಟಿ ಜಯಪ್ರದಾ ಅವರು ಇನ್ನು ಸಹ ಸಿಂಗಲ್ ಆಗಿರಲು ಕಾರಣ ಏನು ಗೊತ್ತಾ?..

ಸ್ನೇಹಿತರೆ, ದಕ್ಷಿಣ ಭಾರತದ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಹದಿ ಹರೆಯದ ಹುಡುಗರ ಎದೆಯಲ್ಲಿ ಹಚ್ಚೆ ಹಾಕಿಸಿಕೊಂಡವರಲ್ಲಿ ನಟಿ ಜಯಪ್ರದಾ ಕೂಡ ಒಬ್ಬರು. ತಮ್ಮ ನಟನೆಯಿಂದ ಅದೆಷ್ಟೋ ಅಭಿಮಾನಿ ಬಳಗ ಸಂಪಾಡಿಸಿಕೊಂಡಿದ್ದರು. ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಬಾಷೆಗಳಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದರು. 70 -80 ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರ ಪೈಕಿಯಲ್ಲಿ ಇವರು ಕೂಡ ಒಬ್ಬರು.

ನಟಿ ಜಯಪ್ರದಾ ಅವರು ಮೂಲತಃ ಆಂಧ್ರಪ್ರದೇಶದ ರಾಜಮಂಡ್ರಿಯವರು. ಜಯಪ್ರದಾ ಅವರ ನಿಜವಾದ ಹೆಸರು ಲಲಿತಾ ರಾಣಿ. ಜಯಪ್ರದಾ ತಮ್ಮ 14ನೇ ವಯಸ್ಸಿನಲ್ಲಿ ತಮ್ಮ ಸ್ಕೂಲ್ ನ ಅನ್ಯುಲ್ ಪಂಕ್ಷನ್ ನಲ್ಲಿ ನೃತ್ಯ ಮಾಡುವಾಗ ಅಲ್ಲಿಗೆ ಆಗಮಿಸಿದ್ದ ನಿರ್ದೇಶಕರೊಬ್ಬರು ಅವರ ನೃತ್ಯ ನೋಡಿ ಫಿದಾ ಆಗಿ ತಮ್ಮ ಸಿನಿಮಾದಲ್ಲಿ ಜಯಪ್ರದಾ ಅವರಿಗೆ ಅವಕಾಶ ನೀಡುತ್ತಾರೆ. ತಮ್ಮ ಒಂದು ಸಿನಿಮಾದಲ್ಲಿ 3 ನಿಮಿಷದ ಹಾಡಿಗೆ ಜಯಪ್ರದಾ ಅವರಿಗೆ ನೃತ್ಯ ಮಾಡಲು ಹೇಳಿದಾಗ, ಜಯಪ್ರದಾ ಅವರು ಅದನ್ನು ಒಪ್ಪಿಕೊಳ್ಳುತ್ತಾರೆ. ಆ ಹಾಡಿಗೆ ಜಯಪ್ರದಾ ಅವರಿಗೆ 10 ರೂಪಾಯಿ ಸಂಭಾವನೆಯನ್ನು ಸಹ ನೀಡಲಾಗಿತ್ತು.

ಈ ಹಾಡಿನಲ್ಲಿ ನಟಿಸಿದ ಮೇಲೆ ಜಯಪ್ರದಾ ಅವರ ಲಕ್ ಚೇಂಜ್ ಆಗಿತು. ನಂತರ ಅನೇಕ ಸಿನಿಮಾ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿತು.
 ಕನ್ನಡದಲ್ಲಿ ಅವರು “ಸನಾದಿ ಅಪ್ಪಣ್ಣ” ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಕವಿರತ್ನ ಕಾಳಿದಾಸ, ಹುಲಿಯ ಹಾಲಿನ ಮೇವು, ಶಬ್ದವೇದಿ, ಈಬಂಧನ, ನಂತಹ ಅನೇಕ ಕನ್ನಡ ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಮನೆ ಮಗಳಾದರು.

ಜಯಪ್ರದಾ ಅವರ ನಂತರದ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಸಹ ಕಾಣಿಸಿಕೊಂಡರು. ನಂತರ ಅವರು ರಾಜಕೀಯದಲ್ಲಿ ಸಹ ಯಶಸ್ಸನ್ನು ಕಂಡರು. ಜಯಪ್ರದಾ ಅವರು ಸರಿಯಾಗಿ ಟ್ಯಾಕ್ಸ್ ಕಟ್ಟದೆ ಇರುವ ಕಾರಣ ಅವರ ಮೇಲೆ ಐ.ಟಿ ರೈಡ್ ಆಗುತ್ತದೆ, ನಂತರ ಜಯಪ್ರದಾ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಸಿನಿಮಾಗಳ ಅವಕಾಶಗಳು ಸಹ ಕಡಿಮೆಯಾಗುತ್ತದೆ. ಆ ಸಮಯದಲ್ಲಿ ಶ್ರೀಕಾಂತ್ ನಹಾತಾ ಜಯಪ್ರದಾ ಅವರಿಗೆ ಸಹಾಯ ಮಾಡುತ್ತಾರೆ.

ಮೊದಲು ಸ್ನೇಹಿತರಾಗಿದ್ದ ಇಬ್ಬರೂ ನಂತರ ಪ್ರೀತಿಸಲು ಶುರು ಮಾಡುತ್ತಾರೆ. ಆದರೆ ಶ್ರೀಕಾಂತ್ ನಹಾತಾ ಅವರು ಈಗಾಗಲೇ ಮದುವೆಯಾಗಿ ಮೂವರು ಮಕ್ಕಳು ತಂದೆಯಾಗಿರುತ್ತಾರೆ. ಆದರೆ ಈ ವಿಷಯಗಳು ಜಯಪ್ರದಾ ಅವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಶ್ರೀಕಾಂತ್ ನಹಾತಾ ಅವರ ಪ್ರೀತಿಯಲ್ಲಿ ಮುಳುಗಿದ್ದ ಜಯಪ್ರದಾ ಅವರು 1986ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸುದ್ದಿ ಎಲ್ಲರಿಗೂ ಶಾಕ್ ನೀಡಿತ್ತು. ಶ್ರೀಕಾಂತ್ ಅವರ ಮೊದಲ ಪತ್ನಿ ಈ ವಿಚಾರಕ್ಕೆ ಯಾವುದೇ ರೀತಿಯಲ್ಲಿ ವಿರೋಧಿಸಲಿಲ್ಲ.
ನಂತರ ದಿನಗಳಲ್ಲಿ ಶ್ರೀಕಾಂತ್ ಅವರು ತಮ್ಮ ಮೊದಲ ಪತ್ನಿ ಮನೆಯಲ್ಲಿ ಇರಲು ಶುರುಮಾಡುತ್ತಾರೆ. ಬರುಬರುತ್ತಾ ಜಯಪ್ರದಾ ಅವರು ಒಂಟಿಯಾಗುತ್ತಾರೆ. ನಂತರ ಜಯಪ್ರದಾ ಅವರು ತಮ್ಮ ತಂಗಿಯ ಮಗನನ್ನು ದತ್ತು ಪಡೆಯುತ್ತಾರೆ. ಹೀಗೆ ಅವರು ತೆಗೆದುಕೊಂಡ ಒಂದು ಸಣ್ಣ ನಿರ್ಧಾರ ಅವರ ಬದುಕನ್ನೇ ಬದಲಾಯಿಸಿಬಿಟ್ಟಿತು. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *