ನಂಬರ್ ವನ್ ಆಕ್ಟರ್ ಯಶ್ ಅವರಿಗೆ ಫೋಟೋ ತೆಗೆಯುವುದು ಹೇಗೆಂದು ಹೇಳಿಕೊಟ್ಟ ರಾಧಿಕಾ ಪಂಡಿತ್.! ಆದರೆ ಯಶ್ ಮಾಡಿದ್ದೆ ಬೇರೆ ನೋಡಿ

ರಾಕಿಂಗ್ ಸ್ಟಾರ್ ಯಶ್ ಸದ್ಯ ತಮ್ಮ ಕುಟುಂಬದೊಂದಿಗೆ ಟೂರ್ ಎಂಜಾಯ್ ಮಾಡಿ ಸಮಯ ಕಳೆಯುತ್ತಿದ್ದಾರೆ. ಸ್ಯಾಂಡಲ್ವುಡ್ ನ ಕ್ಯೂಟ್ ಜೋಡಿಗಳಲ್ಲಿ ಒಂದಾದ ಯಶ್ ಮತ್ತು ರಾಧಿಕಾ ಪಂಡಿತ್ ಸದ್ಯ ರಜೆಯ ಮಜದಲ್ಲಿದ್ದಾರೆ. ಹೌದು, ಕೆಜಿಎಫ್ 2 ನಂತರ ಯಶ್ ಹೆಚ್ಚು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ, ಇದೀಗ ಈ ಸ್ಟಾರ್ ಜೋಡಿ ವಿದೇಶಕ್ಕೆ ಹಾರಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಯುರೋಪ್ ದೇಶದ ಪ್ರವಾಸದಲ್ಲಿದ್ದಾರೆ. ಪ್ರವಾಸದ ವೇಳೆ ತೆಗೆದ ಫೋಟೋಗಳನ್ನು ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣಗಳದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಫೋಟೋ ಎಲ್ಲೆಡೆ ಸಖತ್ ವೈ’ರಲ್ ಆಗಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 14 ವರ್ಷಗಳೆ ಕಳೆದಿದೆ. ಇವರಿಬ್ಬರೂ ‘ಮೊಗ್ಗಿನ ಮನಸ್ಸು’ ಸಿನೆಮಾ ಮೂಲಕ ಬೆಳ್ಳಿತೆರೆಗೆ ಆಗಮಿಸಿದರು. ಈ ಸಿನೆಮಾ ಕೂಡ ಸೂಪರ್ ಹಿಟ್ ಆಗಿತ್ತು. ಅಂದಿನಿಂದ ಈ ಜೋಡಿ ಸ್ಯಾಂಡಲ್ವುಡ್ ನಲ್ಲಿ ಸಖತ್ ಫೇಮಸ್ ಆಗಿತ್ತು. ಈ ಕುರಿತು ಫೋಟೋವನ್ನು ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

2008ರ ಜುಲೈನಲ್ಲಿ ತೆರೆಕಂಡ ಮೊಗ್ಗಿನ ಮನಸ್ಸು ಸಿನೆಮಾಗೆ ಈಗ 14ವರ್ಷಗಳು. ಮೊಗ್ಗಿನ ಮನಸ್ಸು ಸಿನೆಮಾಗೆ ಐದು ವಿಭಾಗಗಳಲ್ಲಿ ಫಿಲಂ ಫೇರ್ ಪ್ರಶಸ್ತಿ ದೊರಕಿತ್ತು. ಯಶ್ ಅವರಿಗೆ ಅತ್ತ್ಯುತ್ತಮ ಪೋಷಕ ನಟ, ರಾಧಿಕಾ ಅವರಿಗೆ ಅತ್ತ್ಯುತ್ತಮ ನಟಿ ಪ್ರಶಸ್ತಿ ದೊರಕಿತ್ತು. ಕೆಜಿಎಫ್ 2 ಸಿನೆಮಾವು ಬಿಡುಗಡೆಯಾಗಿ 3 ತಿಂಗಳು ಗಳು ಕಳೆಯುತ್ತಾ ಬಂದರೂ ಇನ್ನೂ ಅದರ ಅಬ್ಬರ ತಗ್ಗಿಲ್ಲ. ಕೆಲ ದಿನಗಳ ಹಿಂದೆ ಕೆಜಿಎಫ್ 2 ಭಾರತದ ಯಾವ ಚಿತ್ರವೂ ಮಾಡದ ದಾಖಲೆಯನ್ನು ಮಡಿದೆ.

ಇದರ ನಡುವೆ ಅಭಿಮಾನಿಗಳು ಯಶ್ ಅವರ ಮುಂದಿನ ಸಿನೆಮಾದ ಅಪ್ಡೇಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಇದೀಗ ಯಶ್ ಅವರು ಯುರೋಪ್ ಪ್ರವಾಸದ ಫೋಟೋಗಳಿಗೆ ಅಭಿಮಾನಿಗಳು ಯಶ್ 19 ಕುರಿತು ಮಾಹಿತಿಯನ್ನು ನೀಡುವಂತೆ ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಯಶ್ ಅವರ ಮುಂದಿನ ಸಿನೆಮಾದ ಕುರಿತು ಭಾರತೀಯ ಚಿತ್ರರಂಗವೇ ಕಾದು ಕುಳಿತಿದೆ.

ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳಿಗೆ ಐರಾ ಹಾಗೂ ಯಥರ್ವ್ ಹೆಸರಿನ ಎರಡು ಮುದ್ದಾದ ಮಕ್ಕಳಿದ್ದಾರೆ. ಮಕ್ಕಳ ಆರೈಕೆಯಲ್ಲಿ ರಾಧಿಕಾ ಪಂಡಿತ್ ತೊಡಗಿಕೊಂಡಿದ್ದಾರೆ. ಈ ಕಾರಣಕ್ಕೆ ರಾಧಿಕಾ ಪಂಡಿತ್ ಚಿತ್ರರಂಗದಿಂದ ದೂರ ಉಳಿದಿದ್ದರೆ. ಇನ್ನು ಯುರೋಪ್ ಪ್ರವಾಸದಲ್ಲಿರುವ ಈ ಜೋಡಿಗಳು ಸ್ಲೋವೆನಿಯಾದಲ್ಲಿರುವ ಲೇಕ್ ಬ್ಲೆಡ್ ಚರ್ಚೆ ಎದುರು ಫೋಟೋಗೆ ಪೋಸ್ ನೀಡಿದ್ದಾರೆ.

ಅಲ್ಲದೇ ಇಬ್ಬರೂ ಒಟ್ಟಿಗೆ ಕುಳಿತುಕೊಂಡು ಊಟ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಯಾವ ಫೋಟೋದಲ್ಲಿಯೂ ಯಶ್ ಮಕ್ಕಳು ಕಾಣಿಸಿಕೊಳ್ಳದಿರುವುದು ವಿಶೇಷವಾಗಿದೆ. ಅದೇ ರೀತಿ ಯಶ್ ಮಡದಿ ವಿದೇಶಿ ಪ್ರವಾಸದ ವಿಡಿಯೋ ಕೂಡ ಮಾಡಿದ್ದಾರೆ. ತನ್ನ ಫೋಟೋ ತೆಗೆಯುವಂತೆ ಯಶ್ ಅವರಿಗೆ ರಾಧಿಕಾ ಪಂಡಿತ್ ಕ್ಯೂಟ್ ಆಗಿ ಮನವಿ ಮಾಡಿದ್ದಾರೆ. ಬಳಿಕ ಯಶ್ ತನ್ನ ಪತ್ನಿಯ ಫೋಟೋ ತೆಗೆದಿದ್ದಾರೆ. ಜೊತೆಗೆ ಈ ಫೋಟೋ ತೆಗೆಯುವಾಗ ನಡೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈ’ರಲ್ ಆಗಿದೆ. ಆ ವಿಡಿಯೋದಲ್ಲಿ ವಿದೇಶಿ ಪ್ರವಾಸದ ವಿಡಿಯೋ ವೈ’ರಲ್ ಆಗಿದೆ. ಈ ಸುಂದರ ವಿಡಿಯೋ ನೀವು ನೋಡಿ ಶೇರ್ ಮಾಡಿ.

Leave a Reply

Your email address will not be published. Required fields are marked *