ಕರುನಾಡ ಕಣ್ಮಣಿ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬ ಸುದ್ಧಿ ಆ ದಿನ ಸುನಾಮಿಯಂತೆ ಕರುನಾಡಿಗೆ ಅಪ್ಪಲಿಸಿದ ಆ ದಿನದಿಂದ ಈ ದಿನದವರೆಗೂ ಅಪ್ಪು ಬಾನಲ್ಲಿ ಕಾಣುವ ಬೆಳ್ಳಿಯ ನಕ್ಷತ್ರದಂತೆ ಕಣ್ಣಿಗೆ ಕಾಣಿಸಿ ಮಾಯವಾಗಿ ಅಭಿಮಾನಿಗಳ ಕಣ್ಣಲ್ಲಿ ಅಭಿಮಾನದ ಮಳೆಗರೆದು ಮೌನಕ್ಕೆ ಶರಣಾಗಿದ್ದಾರೆ. ಇಂದು ಸಹ ಇದೇ ಆಗಿದೆ ಅಪ್ಪುವಿನ ಯಾವುದೇ ಚಿತ್ರ ತೆರೆಗೆ ಬಂದಾಗ ಪುನೀತ್ ಅವರನ್ನು ನೋಡಿ ಸಿಳ್ಳೆ ಹಾಕುತ್ತಿದ್ದ ಅಭಿಮಾನಿಗಳು ಇಂದು ಅಪ್ಪು ಅಗಲಿಕೆಯ ನಂತರ ಬಂದ ಜೇಮ್ಸ್ ಸಿನೆಮಾ ಬಿಡುಗಡೆಯದಾಗ ದುಃಖ್ಖವನ್ನು ನುಂಗಿ ಆತ್ಮೀಯವಾಗಿ ಸ್ವಾಗತಿಸಿದರು.
ಆದರೆ ಎಷ್ಟೇ ಮರೆಯಲು ಪ್ರಯತ್ನಿಸಿದರು ಮರೆಯಲಾಗದ ಮಾಣಿಕ್ಯ ಮಿಂಚುವ ಕಾಯಕ ಬಿಟ್ಟಿತೆ? ಎನ್ನುವ ಹಾಗೆ ಅಪ್ಪು ಅವರು ಅಂದು ಇಂದು ಎಂದೆಂದಿಗೂ ಕರುನಾಡಿನ ಹೆಮ್ಮೆಯ ಮಗನಾಗಿ ಅಜರಾಮರ ಪರಮಾತ್ಮನಗಿದ್ದಾರೆ. ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದ ಅಪ್ಪು ಇಂದು ಪ್ರತಿಯೊಬ್ಬರ ಮನೆ ಮನದಲ್ಲಿ ರಾಜನಾಗಿ ಅಜರಾಮರರಾಗಿದ್ದಾರೆ. ಜೊತೆಗಿರುವ ಜೀವ ಎಂದಿಗೂ ಜೀವಂತ ಎನ್ನುವ ನಾಡ್ನುಡಿ ಅಪ್ಪು ಅವರಿಂದಲೇ ಶುರುವಾಗಿದ್ದು ಅದರಂತೆಯೇ ಇಂದಿಗೂ ತೆರೆಯ ಮೇಲೆ ಅಪ್ಪು ವಿಜೃಂಭಣೆಯಿಂದ ರಾರಾಜಿಸುತ್ತಿದ್ದಾರೆ.
ಸೆಪ್ಟೆಂಬರ್ 9ರಂದು ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತ ಶೃಂಗೇರಿ ಅವರ ಅಭಿನಯದ ಲಕ್ಕಿಮ್ಯಾನ್ ಸಿನೆಮಾದಲ್ಲಿ ಅಪ್ಪು ಅವರು ಒಂದು ಪ್ರಮುಖ ಪಾತ್ರ ವಹಿಸಿದ್ದು ತೆರೆಯ ಮೇಲೆ ಮತ್ತೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕೂಡ ಅಪ್ಪು ಅವರು ತಮ್ಮ ವಾಯ್ಸ್ ಡಬ್ಬಿಂಗ್ ಮಾಡಲು ಸದ್ಯವಾಗದಂತೆ ಆ ವಿಧಿಆಟಕ್ಕೆ ನಮ್ಮನೆಲ್ಲ ಬಿಟ್ಟು ಹೋದರು. ಈ ಚಿತ್ರದಲ್ಲಿ ಅಪ್ಪು ಅವರು ಪ್ರಭುದೇವ ಅವರ ಜೊತೆಗೆ ಸೇರಿ ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು ಈ ಚಿತ್ರದಲ್ಲಿ ಅಪ್ಪು ಕಾಣಿಸಿದ ತಕ್ಷಣ ಅಭಿಮಾನಿಗಳು ಸಕ್ಕತ್ ಖುಷಿ ಸಂಭ್ರಮ ಮುಗಿಲು ಮುಟ್ಟಿದೆ. ಹಿಯೇಟರ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಇನ್ನು ಚಿತ್ರದ ಬಗ್ಗೆ ಹೇಳಬೇಕೆಂದರೆ ಇದೊಂದು ಕಾಮಷಿಯಲ್ ಸಿನೆಮಾವಾಗಿದ್ದು ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತ ಶೃಂಗೇರಿ ಅವರು ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದು ಅಪ್ಪು ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಕಿಮ್ಯಾನ್ ಸಿನೆಮಾವನ್ನು ರಾಜ್ ಕುಟುಂಬದ ಎಲ್ಲಾ ಸದಸ್ಯರು ನೋಡಿದ್ದು ರಾಘಣ್ಣ, ಯುವರಾಜ್, ಅವರು ಪತ್ನಿ, ಹಾಗೂ ತಾಯಿ ಕೂಡ ನೋಡಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇವರು ಸುದ್ಧಿ ಮಧ್ಯಮಗಳ ಮುಂದೆ ಲಕ್ಕಿ ಮ್ಯಾನ್ ಸಿನೆಮಾದ ಸಂದರ್ಶನದ ವೇಳೆ ದುಃಖ್ಖ ತಡೆಯಲಾರದೆ ಮನೆಯ ಮುದ್ದಿನ ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಕೇವಲ ರಾಜ್ ಕುಟುಂಬ ಅಷ್ಟೇ ಅಲ್ಲದೇ ಅಪ್ಪು ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನನ್ನು ನೋಡಿ ಕಣ್ಣೀರು ಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈ@ರಲ್ ಆಗುತ್ತಿದೆ. ಅಪ್ಪು ಎಂದರೆ ಏನು ಎನ್ನುವುದನ್ನು ಮತ್ತೊಮ್ಮೆ ಮಗದೊಮ್ಮೆ ಸಾಬೀತು ಪಡಿಸಿದ್ದಾರೆ. ನಿಜ ಇದು ಅಪ್ಪು ಅವರ ಕೊನೆಯ ಕಾಮಷಿಯಲ್ ಸಿನೆಮಾವಾಗಿದ್ದು ಅಪ್ಪುವನ್ನು ಕೊನೆಯ ಕ್ಷಣದಲ್ಲಿ ನೋಡುವಾಗ ಎಂತಹ ಅಪ್ಪಟ ಅಭಿಮಾನಿಗಳಿದ್ದರರೂ ಕೂಡ ಕಣ್ಣಂಚಿನಲ್ಲಿ ಕಣ್ಣೀರ ಹನಿಗಳು ಬಾರದೆ ಇರಲು ಸಾಧ್ಯನೇ ಇಲ್ಲ.
ಇಂತಹ ದೃಶ್ಯಗಳನ್ನು ನೋಡಿದರೆ ಅಪ್ಪು ಅವರು ನಮ್ಮ ಸುತ್ತ ಮುತ್ತಲಿನಲ್ಲಿ ಇಲ್ಲೇ ಎಲ್ಲೋ ಇದ್ದಾರೆ ಎನ್ನುವಂತೆ ಭಾಸವಾಗುತ್ತದೆ. ಈ ಸಿನೆಮಾ ನೀವು ನೋಡಿದ್ದಲ್ಲಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.