ನಮಸ್ತೆ ವೀಕ್ಷಕರೆ ಬಾಹುಬಷ ನಟಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತ ಚಿತ್ರರಂಗವನ್ನು ದಾಟಿ ಬಾಲಿವುಡ್ ಗೂ ಎಂಟ್ರಿ ಕೊಟ್ಟದ್ದು ಆಗಿದೆ. ಹೀಗೆ ಒಂದರ ಹಿಂದೊಂದು ಬಾಲಿವುಡ್ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದು, ಪರಭಾಷೆಯ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ನಟಿ ರಶ್ಮಿಕಾ ಮಂದಣ್ಣನವರು ಮೂಲತಃ ಕೊಡಿಗಿನವರು, ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಇದೀಗ ಬೇಡಿಕೆಯ ನಟಿಯೆನಿಸಿಕೊಂಡಿದ್ದಾರೆ.
ಅಂದಹಾಗೆ, ರಕ್ಷಿತ್ ಶೆಟ್ಟಿಯವರ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡು, ತದನಂತರದಲ್ಲಿ ಇಬ್ಬರೂ ದೂರವಾದರು. ಆದಾದ ಬಳಿಕ ವಿಜಯ್ ದೇವರಕೊಂಡರವರ ಜೊತೆಗೆ ಅನೇಕ ಬಾರಿ ಕಾಣಿಸಿಕೊಂಡರು. ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿತ್ತು. ಇತ್ತೀಚೆಗಿನ ಸಂದರ್ಶನದಲ್ಲಿ ರಶ್ಮಿಕಾ, ತನ್ನ ಮಾಜಿ ಗೆಳೆಯ ರಕ್ಷಿತ್ ಶೆಟ್ಟಿಗಿಂತ ನಾನು ಅವನನ್ನು ಹೆಚ್ಚು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇಂಟರ್‌ನ್ಯಾಶನಲ್ ಬ್ಯುಸಿನೆಸ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ರಶ್ಮಿಕಾ ಮಂದಣ್ಣ, ” ವಿಜಯ್ ದೇವರಕೊಂಡ ತನ್ನದೇ ಆದ ಜಗತ್ತಿನಲ್ಲಿ ಸಂತೋಷವಾಗಿರುವ ಸರಳ ವ್ಯಕ್ತಿ. ಗೀತ ಗೋವಿಂದಂ ಸಮಯದಲ್ಲಿ ನಾವು ಕೇವಲ ಸ್ನೇಹಿತರಾಗಿದ್ದೇವೆ, ಆದರೆ ನಾವು ನಿರ್ಲಕ್ಷಿಸಲಾಗದ ಒಂದು ರೀತಿಯ ಸ್ಪಾರ್ಕ್ ಇತ್ತು. ಕೆಲವೊಮ್ಮೆ, ನನ್ನ ಹೃದಯವು ‘ಅವನು ವಿಶೇಷ, ಅವನು ವಿಶೇಷ’ ಎಂದು ಹೇಳುತ್ತಲೇ ಇರುತ್ತದೆ.
ಆದರೆ, ನಾವು ಡಿಯರ್ ಕಾಮ್ರೇಡ್‌ನಲ್ಲಿ ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದ ನಂತರ ಕೆಮೆಸ್ಟ್ರಿ ಬದಲಾಯಿತು” ಎಂದು ಹೇಳಿದ್ದಾರೆ. ರಕ್ಷಿತ್ ಜೊತೆಗಿನ ಬ್ರೇಕಪ್ ನಂತರ ನಟ ವಿಜಯ್ ದೇವರಕೊಂಡ ತನ್ನನ್ನು ಹೇಗೆ ಸಮಾಧಾನ ಪಡಿಸಿದ್ದರು ಎನ್ನುವುದರ ಬಗ್ಗೆ ಮಾತನಾಡಿದ್ದು, ‘ನನಗೆ ಕಾಳಜಿಯ ಅಗತ್ಯವಿತ್ತು, ನಂಬಲಾಗದಷ್ಟು ದುರ್ಬಲಳಾಗಿದ್ದ ಸಮಯದಲ್ಲಿ ದೇವರಕೊಂಡ ಅವರು ಕೇರ್ ಮಾಡಿದರು’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ಮಾತು ಮುಂದುವರೆಸಿದ ರಶ್ಮಿಕಾ ಮಂದಣ್ಣ, ‘ಒಂದು ಹಂತದಲ್ಲಿ, ನಾನು ವಿಜಯ್ ದೇವರಕೊಂಡ ಅವರಿಗೆ ನನ್ನ ಪ್ರೀತಿಯನ್ನು ಒಪ್ಪಿಕೊಂಡೆ, ಆದರೆ ಅವರು ಆರಂಭದಲ್ಲಿ ಹಿಂಜರಿದರು. ಆದರೆ ಅವರಿಗೂ ನನ್ನ ಬಗ್ಗೆ ವಿಶೇಷ ಭಾವನೆ ಇತ್ತು. ಆದ್ದರಿಂದ, ಅವರು ಒಪ್ಪಿಕೊಂಡರು. ನಮ್ಮ ಪ್ರೀತಿಯು ಅರಳಿದ ರೀತಿಯಲ್ಲಿ ನಾವು ಸಂತೋಷವಾಗಿದ್ದೇವೆ. ಅವರು ನನ್ನ ಮಾಜಿ ಗೆಳೆಯ ರಕ್ಷಿತ್ ಶೆಟ್ಟಿಯಂತೆ ಅಸುರಕ್ಷಿತ ವ್ಯಕ್ತಿಯಲ್ಲ ಅಥವಾ ನನ್ನ ವೃತ್ತಿಜೀವನವನ್ನು ತ್ಯಾಗ ಮಾಡುವಂತೆ ಸೂಚಿಸುವುದಿಲ್ಲ.
ಅವರು ಮುಕ್ತ ಮನಸ್ಸಿನ ವ್ಯಕ್ತಿ ಮತ್ತು ನಾನು ಶಾಶ್ವತವಾಗಿ ಸ್ವತಂತ್ರನಾಗಿರಬೇಕೆಂದು ಬಯಸುತ್ತಾರೆ’ ಎಂದಿದ್ದಾರೆ. ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ನಟಿ ರಶ್ಮಿಕಾರವರು, ‘ತಮ್ಮ ಮುಖ್ಯ ಆದ್ಯತೆ ಅವರ ಉದ್ಯೋಗ. ಇಬ್ಬರೂ ತಮ್ಮ ವೃತ್ತಿಜೀವನದ ನಿರ್ಣಾಯಕ ಹಂತದಲ್ಲಿರುವುದರಿಂದ ಅವರು ಮದುವೆಯಾಗುವ ಬಗ್ಗೆ ಯೋಚಿಸಲಿಲ್ಲ. ಮುಂದಿನ ಐದು ರಿಂದ ಏಳು ವರ್ಷಗಳವರೆಗೆ ಮದುವೆ ಯೋಜನೆ ಇಲ್ಲ’ ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಳಿಸಿ.