ಸ್ನೇಹಿತರೆ ತೂಗುದೀಪ ಶ್ರೀನಿವಾಸ್ ಅವರ ಮುದ್ದಿನ ಮಗ ದರ್ಶನ್ ನಮ್ಮ ಸ್ಯಾಂಡಲ್ವುಡ್ ನ ಅತೀ ದೊಡ್ಡ ಆಸ್ತಿ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ. ಅವರು ಎಲ್ಲೇ ಹೋದರು ಕೂಡ ಅವರ ಲಕ್ಷಾಂತರ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಅವರಂತೆ ಅಭಿಮಾನಿಗಳ ಅಭಿಮಾನವನ್ನು ಇಷ್ಟೊಂದು ದೊಡ್ಡ ರೀತಿಯಲ್ಲಿ ಆನಂದಿಸುತ್ತಿರುವ ಮತ್ತೊಬ್ಬ ಸ್ಟಾರ್ ನಟ ಇಲ್ಲ ಎಂದೇ ಹೇಳಬಹುದಾಗಿದೆ.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಅತ್ಯಂತ ದೊಡ್ಡ ಪ್ರಾಣಿ ಪ್ರಿಯ ಹಾಗೂ ಅವರಿಗೆ ಕಾರುಗಳೆಂದರೆ ಬಲು ಇಷ್ಟ ದುಬಾರಿ ಕಾರುಗಳು ಕೂಡ ಅವರಲ್ಲಿ ಹೆಚ್ಚಾಗಿದೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ದುಬಾರಿ ಕಾರುಗಳು ಯಾರ ಬಳಿ ಇದೆ ಎಂದು ಕೇಳಿದರೆ ಮೊದಲು ಕೇಳಿ ಬರುವ ಒಂದೇ ಒಂದು ಉತ್ತರ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರು.
ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರ್ ಕಲೆಕ್ಷನ್ ಗೆ ಮತ್ತೊಂದು ದುಬಾರಿ ಕಾರು ಸೇರಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಖರೀದಿಸಿರುವ ಕಾರು ಇನ್ಯಾವುದೂ ಅಲ್ಲ ದುಬಾರಿ ಬೆಲೆ ಲ್ಯಾಂಬೋರ್ಗಿನಿ. ಈಗಾಗಲೇ ಲ್ಯಾಂಬೋರ್ಗಿನಿ ಸಂಸ್ಥೆಯ ಎರಡು ದುಬಾರಿ ಬೆಲೆಯ ಕಾರುಗಳು ಅದಾಗಲೇ ದರ್ಶನ್ ಅವರ ಬಳಿ ಇದೆ. ಈಗ ಇದೇ ಕಲೆಕ್ಷನ್ ಗೆ ಮತ್ತೊಂದು ಕಾರ್ ಸೇರ್ಪಡೆಯಾಗಿರುವುದು ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಸಂತೋಷದ ಸುದ್ದಿಯನ್ನು ನೀಡಿದೆ.
ಹೌದು ಮಿತ್ರರೇ ಗ್ರೇ ಕಲರ್ ನಲ್ಲಿ ಕಂಗೊಳಿಸುತ್ತಿರುವ ಲ್ಯಾಂಬೋರ್ಗಿನಿ ಕಾರಿನ ಬೆಲೆ ಬರೋಬ್ಬರಿ 5 ಕೋಟಿಗೂ ಹೆಚ್ಚು ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ದುಬಾರಿ ಬೆಲೆಯ ಕಾರಿನಲ್ಲಿ ಯಾವ ಬಾಲಿವುಡ್ ಹಾಗೂ ಬಾಲಿವುಡ್ ನಟನಿಗೂ ಕೂಡ ಹಿಂದೆ ಬಿದ್ದಿಲ್ಲ ಎನ್ನುವಂತೆ ದರ್ಶನ್ ತಮ್ಮ ಛಾಪನ್ನು ಮೂಡಿಸಿದ್ದಾರೆ. ದರ್ಶನ್ ಅವರ ಈ ಹೊಸ ಕಾರಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ತಿಳಿಸಿ ಧನ್ಯವಾದಗಳು.