ಸ್ಯಾಂಡಲ್ವುಡ್ ನ ಡಿಬಾಸ್ ಎಂದೇ ಖ್ಯಾತಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ಅವರ ಅಭಿನಯದ ಮೋಸ್ಟ ಎಕ್ಸ್ಪೀಟೆಡ್ ‘ಕ್ರಾಂತಿ’ ಸಿನೆಮಾ ಬಿಡುಗಡೆಗೆ ಸಾಜ್ಜಾಗಿದ್ದು ಇಡೀ ಕರ್ನಾಟಕದಲ್ಲೇ ಹವಾ ಜೋರಾಗಿಯೇ ನಡೆಯುತ್ತಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಕೆಲವು ದಿನಗಳ ಹಿಂದೆ ಸಿನೆಮಾದ ಚಿತ್ರಿಕಾರಣಕ್ಕಾಗಿ ಕ್ರಾಂತಿ ಸಿನೆಮಾ ತಂಡವು ಪೋಲ್ಯಾಂಡ್ ನಲ್ಲಿ ಚಿತ್ರತಂಡ ಬಿಡು ಬಿಟ್ಟಿತ್ತು.
ಕ್ರಾಂತಿ ಪ್ಯಾನ್ ಇಂಡಿಯಾ ಸಿನೆಮಾವಾಗಿದ್ದು ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಇನ್ನು ಈ ವರ್ಷದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಕ್ರಾಂತಿ ಕೂಡ ಒಂದಾಗಿದ್ದು ಈ ಸಿನೆಮಾ ಪ್ರಾರಂಭದಿಂದಲೂ ಬಹುದೊಡ್ಡ ಮಟ್ಟಿಗಿನ ನಿರೀಕ್ಷೆಯನ್ನು ಹುಟ್ಟುಹಕಿದೆ. ಆದರೆ ಇದೀಗ ಡಿ56 ಸಿನೆಮಾದಲ್ಲಿ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಗುಸು ಗುಸು ಸುದ್ಧಿಯೊಂದು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಸಂಪೂರ್ಣ ಉತ್ತರ ಇಲ್ಲಿದೆ ನೋಡಿ.
ಇತ್ತೀಚೆಗಷ್ಟೇ ವರಮಹಾಲಕ್ಷ್ಮಿ ಹಬ್ಬದ ದಿನವೇ ದರ್ಶನ್ ಅವರ ನಟನೆಯ ಮತ್ತೊಂದು ಸಿನೆಮಾದ ಮುಹೂರ್ತ ಕಾರ್ಯಕ್ರಮವು ನೆರವೇರಿದ್ದು ಈ ಸಿನೆಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದು ಹೊಸ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿಯವರು ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದ್ದು ದರ್ಶನ್ ಮತ್ತು ತರುಣ್ ಸುಧೀರ್ ಜಂಟಿಯಲ್ಲಿ ಮತ್ತೊಂದು ಬಿಗ್ ಬಜೆಟ್ ಸಿನೆಮಾವಾಗಿದ್ದು ನಾಯಕಿಯಾಗಿ ಹಿರಿಯ ನಟಿ ಮಾಲಾಶ್ರೀ ಅವರ ಮಗಳು ಕಾಣಿಸಿಕೊಳ್ಳುತ್ತಿದ್ದಾರೆ.
ರಾಧನಾ ರಾಮು ಹೆಸರಿನ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಕನಸಿನ ರಾಣಿ ಮಾಲಾಶ್ರೀ ಮಗಳು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ದೇಶಕ ತರುಣ್ ಸುಧೀರ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಟಿ ಮಾಲಾಶ್ರೀ ಹಾಗೂ ಅವರ ಪುತ್ರಿ ರಾಧನಾ ಪೂಜೆಯಲ್ಲಿ ಭಾಗಿಯಾಗಿದ್ದರು.
ವರಮಹಾಲಕ್ಷ್ಮಿ ಹಬ್ಬದ ದಿನ ಈ ಬಗ್ಗೆ ಸ್ವತಃ ಮಾಲಾಶ್ರೀ ಅವರೇ ಟ್ವಿಟ್ ಮಾಡಿ ಮಾಹಿತಿ ನೀಡಿದ್ದು ನನ್ನ ಮುದ್ದಿನ ಮಗಳು ಇಂದು ನನಗೆ ಅಪಾರ ಪ್ರೀತಿ ಹಾಗೂ ಬದುಕು ನೀಡಿದ ಚಿತ್ರರಂಗಕ್ಕೆ ಕಲಿಡುತ್ತಿದ್ದಾಳೆ. ನನಗೆ ನೀಡಿದ ಪ್ರೀತಿ ಮತ್ತು ಆಶಿರ್ವಾದ ಅವಳ ಮೇಲು ಇರಲಿ ಎಂದು ಆಶಿಸುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಕನಸಿನ ರಾಣಿ ಬರೆದುಕೊಡಿದ್ದರು. ಆದರೆ ಇದೀಗ ದರ್ಶನ್ ಅವರ ಡಿ56 ಸಿನೆಮಾದ ಕುರಿತು ಮತ್ತೊಂದು ಸುದ್ಧಿ ಕೇಳಿ ಬರಿತ್ತೀದೆ. ಈ ಸಿನೆಮಾದಲ್ಲಿ ಇಬ್ಬರೂ ನಾಯಕಿಯಾರಿದ್ದು ರಾಧನಾ ಹಾಗೂ ಅನುಷ್ಕಾ ಶೆಟ್ಟಿ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು ಅನುಷ್ಕಾ ಶೆಟ್ಟಿ ಡಿ 56 ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಕಾರಣ ವೈ’ರಲ್ ಆದ ಡಿ ಬಾಸ್ ಜೊತೆಗೆ ತೆಗೆದಿರುವ ಫೋಟೋ. ಹೌದು ದರ್ಶನ್ ಅವರ ಜೊತೆಗಿನ ಅನುಷ್ಕಾ ಶೆಟ್ಟಿ ಫೋಟೋವೊಂದು ವೈ’ರಲ್ ಅಗಿದ್ದು ಡಿ. 56 ಸಿನೆಮಾದಲ್ಲಿ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತಂತೆ ಸಿನೆಮಾತಂಡವು ಸ್ಪಷ್ಟನೆ ನೀಡಬೇಕಾಗಿದೆ. ಒಟ್ಟಿನಲ್ಲಿ ದರ್ಶನ್ ಅಭಿಮಾನಿಗಳಿಗೆ ಈ ಕುರಿತು ಕುತೂಹಲವು ಹೆಚ್ಚಾಗಿದ್ದು ಸಿನೆಮಾದ ಈ ವಿಚಾರದ ಕುರಿತು ಏನು ಅಧಿಕೃತ ಮಾಹಿತಿ ಹೊರ ಬರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.