ಡಿಬಾಸ್ ಈಗಲೂ ನನ್ನನ್ನು ಮರೆತಿಲ್ಲ…ಆದರೆ ಶಿವಣ್ಣನ ಅಸಲಿ ಮುಖ ತೆರೆದಿಟ್ಟ ನಟಿ ಮಾರಿಮುತ್ತು..! ನಿಜಕ್ಕೂ ಬೇಸರದ ಸಂಗತಿ

ನಮಸ್ತೆ ಪ್ರೀತಿಯ ವೀಕ್ಷಕರೆ ನಮ್ಮ ಚಿತ್ರರಂಗದಲ್ಲಿ ಲೇಡಿ ಡಾನ್ ಎಂದೇ ಪ್ರಖ್ಯಾತಿ ಹೊಂದಿರುವ ನಟಿ ಮಾರಿ ಮುತ್ತು ಅವರು. ಈ ನಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕನ್ನಡ ಚಲನಚಿತ್ರರಂಗದಲ್ಲಿ ನಟಿ ಮಾರಿಮುತ್ತು ಅವರನ್ನು ಮರೆಯಲು ನಿಜಕ್ಕೂ ಯಾರಿಂದಲೂ ಸಾದ್ಯವಿಲ್ಲ. ಕನ್ನಡಿಗರ ಅಚ್ಚುಮೆಚ್ಚಿನ ನಟಿ ಕೂಡ ಆಗಿದ್ದ ಅವರು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ರಿಯಲ್ ಸ್ಟಾರ್ ಉಪೇಂದ್ರ ರವರ ‘ಉಪೇಂದ್ರ’ ಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನೆಮಾತಾಗಿರುವ ನಟಿ ಮಾರಿಮುತ್ತು ರವರ ನಿಜವಾದ ಹೆಸರು ಸರೋಜಮ್ಮ  ಎಂಬುದಾಗಿದ್ದು ಸಿನಿಮಾದಲ್ಲಿ ಇವರು ಮಾರಿಮುತ್ತು ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಹೌದು ಆಗಿನ ಕಾಲದಲ್ಲಿ ಮಾರಿಮುತ್ತು ಎಂದರೆ ಸಿನಿಮಾದಲ್ಲಿ ಮಹಿಳಾ ಖಳನಾಯಕಿ ಪಾತ್ರದಲ್ಲಿ ಇವರು ಪ್ರಥಮ ಸ್ಥಾನದಲ್ಲಿ ಇದ್ದ ನಟಿ ಕೂಡ ಆಗಿದ್ದು ಮಾರಿಮುತ್ತು ಅವರನ್ನು ಕನ್ನಡ ಚಿತ್ರರಂಗದ ಹಿರಿಯ ಹಾಗೂ ಅತ್ಯಂತ ಜನಪ್ರಿಯ ಕಾಲವಿದೆ ಎಂದೇ ಹೇಳಬಹುದು. ಇನ್ನು ಮಾರಿಮುತ್ತು ಅವರ ನಂತರದಲ್ಲಿ ಲೇಡೀ ಪಾತ್ರದ ಮೂಲಕ ಹೆಸರುವಾಸಿಯಾದವರು ಲಲಿತಮ್ಮ ರವರು.

ಕನ್ನಡ ಚಿತ್ರರಂಗದ ಅದ್ಭುತ ಖಳ ನಟಿ ಎಂದೇ ಫೇಮಸ್ ಆಗಿದ್ದಂತಹ ನಟಿ ಲಲಿತಮ್ಮ ಲಲಿತಮ್ಮ ರವರು ಹಲವಾರು ವರ್ಷಗಳ ಬಳಿಕ ಇದೀಗ ಮೊದಲ ಬಾರಿಗೆ ಸಂದರ್ಶನ ನಡೆಸಿ ಚಿತ್ರರಂಗದಲ್ಲಿ ನಡೆಯುವಂತಹ ಹಾಗೂ ನಡೆದಿರುವಂತಹ ಕೆಲವು ಕಹಿ ಘಟನೆಗಳನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಹೌದು ಈ ಹಿಂದೆ ನನ್ನ ಬಳಿ ಒಬ್ಬರು ಬಂದು ನನ್ನ ಮಗಳನ್ನು ಹೆಂಗಾದರೂ ಮಾಡಿ ಬಳಸಿಕೊಳ್ಳಿ ಹೀರೋಯಿನ್ ಮಾಡಿ ಅಂತ ಕೆಟ್ಟದಾಗಿ ಕೇಳಿಕೊಂಡಿದ್ದರು ಎನ್ನುತ್ತಾ ತಮ್ಮ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ ನಟಿ ಲಲಿತಮ್ಮ.

ಇದೀಗ ನಮ್ಮ ಕನ್ನಡ ಚಿತ್ರರಂಗ ಬದಲಾಗಿದೆ. ಈಗಿನ ಕಾಲದಲ್ಲಿ ಜನರು ಜನಪ್ರಿಯರಾಗಲು ಮತ್ತು ಸ್ಟಾರ್ ನಟಿ ಎಂಬ ಸ್ಥಾನ ಗಿಟ್ಟಿಸಿಕೊಳ್ಳಲು ಒಬ್ಬ ಹೆಣ್ಣುಮಗಳು ಎಲ್ಲರ ಮುಂದೆ ಅರೆ ಬರೆ ಬಟ್ಟೆ ಹಾಗೂ ಬೆ’ತ್ತಲೆ ದೇಹವನ್ನು ತೋರುವಂತೆ ಮಾಡುತ್ತಾರೆ. ಆ ರೀತಿ ಮಾಡಬಾರದು ಎಂಬ ಆಲೋಚನೆಗಳನ್ನು ಮರೆತಿದ್ದಾರೆ ಎಂದು ಕೋಪವನ್ನು ಹೊರಹಾಕಿದ್ದಾರೆ.

ಹಾಗಾದರೆ ಚಿತ್ರರಂಗದಲ್ಲಿ ಏನೇನೆಲ್ಲ ನಡೆಯುತ್ತದೆ ಎಂಬುದನ್ನು ಲಲಿತಮ್ಮ ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದು ನಿಜಕ್ಕೂ ಬೇಸರವಾಗುತ್ತದೆ. ಇದರ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನನ್ನನ್ನು ನೆನಪಿಟ್ಟುಕೊಂಡಿದ್ದಾರೆ ಆದರೆ ಶಿವಣ್ಣ ಹಾಗಲ್ಲ ನನಗೆ ಗೊತ್ತೇ ಇಲ್ಲ ಅಂತ ಹೇಳಿದ್ರು ಎಂದು ನಟಿ ಲಲಿತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಹೌದು ಒಂದು ಬಾರಿ ಲಲಿತಮ್ಮ ರವರು ಅಚಾನಕ್ಕಾಗಿ ಶಿವಣ್ಣ ಅವರನ್ನು ಭೇಟಿ ಮಾಡಿದ್ದು ಶಿವಣ್ಣನ ಬಳಿ ಲಲಿತಮ್ಮ ಹೋದಾಗ ಶಿವಣ್ಣ ಅವರು ಲಲಿತಮ್ಮ ಅವರನ್ನು ಯಾರು ನೀವು ಎಂದು ಪ್ರಶ್ನೆ ಕೇಳುತ್ತಾರಂತೆ.

ಇದರಿಂದಾಗಿ ಬಹಳ ಬೇಸರಗೊಂಡಂತಹ ಲಲಿತಮ್ಮ ಅವರು ಅಲ್ಲಿಂದ ಹೊರ ನಡೆಯುತ್ತಾರಂತೆ. ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ಶಿವಣ್ಣ ಅವರು ನನ್ನನ್ನು ಸಂಪೂರ್ಣವಾಗಿ ಮರೆತಿದ್ದಾರೆ ಆದರೆ ದರ್ಶನ್ ಅವರು ಎಲ್ಲೆಲ್ಲಿ ಸಿಕ್ಕರು ನಮಸ್ತೆ ಮೇಡಂ ಹೇಗಿದ್ದೀರಾ? ಆರೋಗ್ಯ ಹೇಗಿದೆ ಎಂದು ಎಲ್ಲವನ್ನು ಕೂಡ ವಿಚಾರ ಮಾಡುತ್ತಾರೆ ಎಂದು ದರ್ಶನವರ ದೊಡ್ಡ ಗುಣವನ್ನು ಹಾಡಿ ಹೊಗಳಿದ್ದಾರೆ.

ಆದರೆ ಯಾಕೋ ಇಷ್ಟು ಬೇಗ ಶಿವಣ್ಣ ರವರು ಮರೆತು ಬಿಟ್ಟರು ಎಂದು ಬೇಸರವನ್ನು ಹೊರ ಹಾಕಿದ್ದು ಶಿವಣ್ಣ ಅವರು ಇಲ್ಲಿಯವರೆಗೂ 150ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ. ತಮ್ಮ ಸಿನಿಮಾದಲ್ಲಿ ಅಭಿನಯಿಸಿದಂತಹ ಕಲಾವಿದರು ಗುರುತು ಹಿಡಿಯುವುದಕ್ಕೆ ಕಷ್ಟಪಟ್ಟರೋ ಏನೋ ಗೊತ್ತಿಲ್ಲ. ಆದರೂ ಕೂಡ ಲಲಿತಮ್ಮ ಅವರು ಕನ್ನಡ ಸಿನಿಮಾ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದವರು.

ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯ ಹಲವಾರು ಧಾರಾವಾಹಿ ಹಾಗೂ ರಂಗಭೂಮಿಯ ಹಲವಾರು ನಾಟಕಗಳಲ್ಲಿ ಭಾಗವಹಿಸಿದ್ದಾರೆ. ಅಂತಹ ಹಿರಿಯ ನಟಿಯನ್ನು ಮರೆಯುವುದು ಅಷ್ಟು ಸುಲಭದ ಮಾತಲ್ಲ ಆದರೂ ಕೂಡ ಶಿವಣ್ಣ ಅವರು ಆವತ್ತು ಯಾಕೆ ಆ ರೀತಿ ಹೇಳಿದರು ಎಂಬುದು ತಿಳಿದಿಲ್ಲ. ಆದರೂ ಸಹ ಶಿವಣ್ಣ ಅವರು ಹೇಳಿದಂತಹ ಮಾತನ್ನು ಕೇಳಿ ನಟಿ ಲಲಿತಮ್ಮ ಅವರು ತುಂಬಾನೇ ಬೇಸರ ಮಾಡಿಕೊಂಡಿದ್ದಾರಂತೆ. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *