ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ ಬರುವ ಒಂದು ಸನ್ನಿ ವೇಷಕ್ಕೆ ಬಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ಹೆಡ್ ಬುಷ್ ಸಿನಿಮಾದಲ್ಲಿ ಕರಗಕ್ಕೆ ಹಾಗೂ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೌದು ಕರಗದ ಬಗ್ಗೆ ಹಾಗೂ ವೀರಗಾಸೆ ಕಲಾವಿದರ ಬಗ್ಗೆ ಇರುವ ಡೈಲಾಗ್‌ಗೆ ಕತ್ತರಿ ಹಾಕಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಇದೀಗ ಅದೇ ಡೈಲಾಗ್‌ಗೆ ಮ್ಯೂಟ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಆ ಮೂಲಕ ಹೆಡ್ ಬುಷ್ ವಿವಾದಕ್ಕೆ ಪೂರ್ಣ ವಿರಾಮ ಬಿದ್ದಿದೆ.
ಸದ್ಯ ಧನಂಜಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಾಗ ಅವರ ಫೋಟೊ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದೀಗ ಆ ಫೋಟೊ ಸಿಕ್ಕಾಪಟ್ಟೆ ವೈ’ರಲ್ ಆಗುತ್ತಿದೆ.ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೆನಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಧನಂಜಯ ಸೇಂಟ್ ಮೇರಿಸ್ ಹೈಸ್ಕೂಲ್‌ನಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದ್ದು 2001ನೇ ಇಸವಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಇಡೀ ಅರಸೀಕೆರೆಗೆ ಅತಿಹೆಚ್ಚು ಅಂಕ ಪಡೆದಿದ್ದರು.
ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ
ನಂಬರ್. 1 ವಶೀಕರಣ ಸ್ಪೆಷಲಿಸ್ಟ್
ಪಂಡಿತ್ : ಶ್ರೀ ಆರ್. ಎನ್. ಜೋಷಿ
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಆರೋಗ್ಯ, ಮದುವೆ,ಗಂಡ -ಹೆಂಡತಿ ಕಲಹ, ಲೈಂಗಿಕ ಸಮಸ್ಯೆ, ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ 100ಕ್ಕೆ101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ
ಅಸಾಧ್ಯವಾದದ್ದು ಇಲ್ಲಿ ಸಾಧ್ಯ
8050846164
ಹೌದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು ಭವಿಷ್ಯ ರೂಪಿಸುವ ನಿರ್ಣಾಯಕ ಹಂತ. 10ನೇ ತರಗತಿಯಲ್ಲಿ ಪಡೆಯುವ ಅಂಕಗಳು ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯಕವಾಗುತ್ತಿದ್ದು ಧನಂಜಯ 7ನೇ ತರಗತಿ ಎಸ್‌ಎಸ್‌ಎಲ್‌ಸಿ 2nd ಪಿಯುಸಿ ಇಂಜಿನಿಯರಿಂಗ್ ಎಲ್ಲದರಲ್ಲೂ ಒಳ್ಳೆ ಅಂಕ ಗಳಿಸಿದ್ದರು. ಹೌದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 95.52 ಅಂಕ ಪಡೆದಿದ್ದು ಅರಸೀಕರೆ ತಾಲೂಕಿನಲ್ಲಿ ಆ ವರ್ಷ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಎನಿಸಿಕೊಂಡಿದ್ದರು. ಅವರ ಫೋಟೊ ಕೂಡ ಪೇಪರ್‌ನಲ್ಲಿ ಪ್ರಕಟವಾಗಿತ್ತು.
ಇನ್ನು ಮೈಸೂರಿನ ಜಯಚಾಮರಾಜೆಂದ್ರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಧನಂಜಯ ಕೆಲ ದಿನ ಇನ್ಪೋಸಿಸ್‌ನಲ್ಲಿ ಕೆಲಸ ಮಾಡಿದ್ದು ತದನಂತರ ಕೆಲಸ ಬಿಟ್ಟು ರಂಗಭೂಮಿಯತ್ತ ಮುಖ ಮಾಡಿದ್ದರು. ಬೆಂಗಳೂರಿಗೆ ಬಂದ ಆರಂಭದಲ್ಲಿ ಜಯನಗರ 4th ಬ್ಲಾಕ್ ಎನ್ನುವ ಕಿರು ಚಿತ್ರದಲ್ಲಿ ನಟಿಸಿದ್ದು ನಂತರ ಗುರುಪ್ರಸಾದ್ ನಿರ್ದೇಶನದ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.
ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.ಸದ್ಯ ಡಾಲಿ ಧನಂಜಯ ನಿರ್ಮಿಸಿ ನಟಿಸಿರುವ ಹೆಡ್‌ಬುಷ್ ಸಿನಿಮಾ 3ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಚಿತ್ರದಲ್ಲಿ ಬೆಂಗಳೂರು ಭೂಗತಲೋಕದ ಕಥೆಯನ್ನು ಹೇಳಲಾಗಿದ್ದು ಡಾ’ನ್ ಜಯರಾಜ್ ಪಾತ್ರದಲ್ಲಿ ಧನು ಅಬ್ಬರಿಸಿದ್ದಾರೆ. ಇನ್ನು ಬಡವ ರಾಸ್ಕಲ್ ಸಿನಿಮಾ ಮೂಲಕ ಡಾಲಿ ನಿರ್ಮಾಪಕರು ಆಗಿದ್ದು ತಮ್ಮ ಬ್ಯಾನರ್‌ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕೆಲಸ ಮಾಡುತ್ತಿದ್ದಾರೆ. ಶೂನ್ಯ ನಿರ್ದೇಶನದ ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಚಿತ್ರಕಥೆ ಹೆಣೆದಿದ್ದಾರೆ. ನಟ ಡಾಲಿ ಧನಂಜಯ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.