ಸರ್ಜಾ ಕುಟುಂಬದಲ್ಲಿ ಇಂದು ಸಂಭ್ರಮದ ಸಡಗರ, ದೃವ ಸರ್ಜಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ. ಸಂತಸದ ಕ್ಷಣದಲ್ಲಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಹೌದು ಸ್ಯಾಂಡಲ್ವುಡ್ ಗೆ ಇನ್ನೊಂದು ಮಿನಿ ಸರ್ಜಾ ಬರಲು ಕಾಯುತ್ತಿದ್ದಾರೆ. ಈ ಸಂತೋಷದ ಸಂಭ್ರಮ ಕ್ಷಣಗಳನ್ನು ದೃವ ಸರ್ಜಾ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಧ್ರುವ ಸರ್ಜಾ ಹಾಗೂ ಪ್ರೇರಣ ಸರ್ಜಾ ಅವರ ಬೇಬಿ ಬಂಪ್ ಫೋಟೋ ಶೂಟ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈ’ರಲ್ ಆಗಿದೆ. ಸ್ವತಃ ಧ್ರುವ ಸರ್ಜಾ ಅವರೇ ಫೋಟೋವನ್ನು ಶೇರ್ ಮಾಡಿ ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದೇನೆ ಅಂತ ಪುಟ್ಟ ಕಂದಮ್ಮನ ಆಗಮನ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಬರಲಿದೆ ಎಂದು ರಿವೀಲ್ ಮಾಡಿದ್ದಾರೆ. ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಮೇಲೆ ಯಾವುದೇ ಸಂತಸವು ಇರಲಿಲ್ಲ.
ಚಿರಂಜೀವಿ ಸರ್ಜಾ ಅವರ ಮಗ ರಾಯನ್ ಹುಟ್ಟಿದ ಮೇಲೆ ಆ ಮನೆಯಲ್ಲಿ ಸ್ವಲ್ಪ ಮಟ್ಟಿಗೆ ಸಂತೋಷ ಹಾಗೂ ನೆಮ್ಮದಿ ಕಾಣಿಸಿಕೊಂಡ್ಡಿತ್ತು. ಇದೀಗ ಧ್ರುವ ಸರ್ಜಾ ಅವರು ತಂದೆಯಗಲಿದ್ದು ಸರ್ಜಾ ಕುಟುಂಬದಲ್ಲಿ ಮತ್ತಷ್ಟು ಸಂತೋಷ ಉಕ್ಕಿ ಹರಿಯಲಿದೆ. ಇನ್ನು ಬೇರೆ ಬೇರೆ ರೀತಿಯ ವಿಧದ ಫೋಟೋಶೊಟ್ ಮಾಡಿಸಿರುವ ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ಬೇಬಿ ಬಂಪ್ ಫೋಟೋಗಳು ಬಹಳ ವಿಶಿಷ್ಟವಾಗಿ ಮೂಡಿ ಬಂದಿದೆ.
ಇನ್ನು ಈ ವಿಡಿಯೋದಲ್ಲಿ ಅಂಬಾರಿ ಸಿನೆಮಾದ ಪೆದ್ದು ಮುದ್ದು ಜೋಡಿ ಎನ್ನುವ ಹಾಡು ಸಕ್ಕತ್ ಸೂಟ್ ಆಗುತ್ತಿದೆ. ಇನ್ನು ಪ್ರೇರಣಾ ಧರಿಸಿರಿವ ಕಾಫಿ ಬಣ್ಣದ ಗೌನ್ ಹಾಗೂ ನೀಲಿ ಬಣ್ಣದ ಗೌನ್ ಅವರಿಗೆ ಬಹಳ ಚನ್ನಾಗಿ ಒಪ್ಪಿದೆ. ಇದೇ ಧ್ರುವ ಸರ್ಜಾ ಅವರು ಕೂಡ ಸೂಟ್ ನಲ್ಲಿ ಸಕ್ಕತ್ ಆಗಿ ಕಾಣುಸ್ತಾ ಇದ್ದಾರೆ. ಇನ್ನು ಈ ಫೋಟೋಶೊಟ್ ಅನ್ನು ಕನ್ನಡ ಅದ್ಭುತ ಪೋಸ್ಟರ್ ಡಿಸೈನ್ ಸ್ಟುಡಿಯೋ ಆದ ‘ಕಾಣಿ ಸ್ಟುಡಿಯೋ’ ಮಾಡಿದ್ದಾರೆ.
ಪ್ರೇರಣಾ ಅವರಿಗೆ ಮೇಕಪ್ ಮಾಡಿದ್ದು ಜೀವಿತಾ ಮತ್ತು ಆಧ್ಯಾ ರಾಜ್. ಚೇತನ್ ಡಿಸೈನ್ ನಿಂದ ಉಡುಪುಗಳನ್ನು ತರಿಸಲಾಗಿದೆ. ಈ ವಿಡಿಯೋ ಮತ್ತು ಗ್ರಾಫಿಕ್ ಅನ್ನು ಕಾಣಿ ಸ್ಟುಡಿಯೋ ಸಂತೋಷ್ ಬಲ್ಕೂರ್ ಹಾಗೂ ಪ್ರವೀಣ್ ದೇವಾಡಿಗ ಮಾಡಿದ್ದಾರೆ. ಸಿನೆಮಾ ರೀತಿಯಲ್ಲಿ ಡಿಫರೆಂಟ್ ಆಗಿ ಫೋಟೋ ಶೂಟ್ ಮಾಡಿಸಲಾಗಿದೆ. ಇನ್ನು ಧ್ರುವ ಸರ್ಜಾ ಅವರ ಸಿನೆಮಾ ಜರ್ನಿಯನ್ನು ನೋಡುವುದಾದರೆ ಅವರ ಮುಂದಿನ ಚಿತ್ರ ಮಾರ್ಟೀನ್ ಶೂಟಿಂಗ್ ನಡೆಯುತ್ತಿದೆ.
ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆಯ ನಟ ಆಗಿರುವ ಧ್ರುವ ಸರ್ಜಾ ತಮಗೆ ಸರಿಹೊಂದುವ ಕಥೆಯನ್ನು ಮಾತ್ರ ಆಯ್ಕೆಮಾಡಿಕೊಳ್ಳುತ್ತಾರೆ. ಹಾಗಾಗಿ ಅವರ ಚಿತ್ರ ಎರಡು ಮೂರು ವರ್ಷಕ್ಕೊಂದು ಬಿಡುಗಡೆಯಗುತ್ತದೆ. ಇದುವರೆಗೂ ಬಿಗೂಗಡೆಯದ ಬಹುತೇಕ ಎಲ್ಲಾ ಸಿನೆಮಾಗಳು ಅದ್ದೂರಿಯಾಗಿ ಯಶಸ್ಸುನ್ನು ಕಂಡಿದೆ. ಸದ್ಯ ಅಪ್ಪನಾಗುವ ಖುಷಿಯಲ್ಲಿದ್ದಾರೆ ಧ್ರುವ ಸರ್ಜಾ. ಇನ್ನು ಇವರಿಬ್ಬರ ಫೋಟೋಗಳನ್ನು ನೋಡಿ ಶುಭಾಶಯಗಳುನ್ನು ತಿಳಿಸಿದ್ದಾರೆ. ನೀವು ಕೂಡ ನಿಮ್ಮ ನೆಚ್ಚಿನ ನಟನಿಗೆ ವಿಷಸ್ ಕಾಮೆಂಟ್ಸ್ ಮೂಲಕ ತಿಳಿಸಿ.