ಚಿತ್ರರಂಗದಿಂದ ನನ್ನ ಮಗ ದೂರ ಆಗುವುದಕ್ಕೆ ಇವರೇ ಕಾರಣ ಎಂದು ಮಗನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಲೀಲಾವತಿ

ನಮಸ್ತೆ ಪ್ರೀತಿಯ ವೀಕ್ಷಕರೆ ನಿಮಗೆಲ್ಲರಿಗೂ ನಟ ವಿನೋದ್ ರಾಜ್ ಕುಮಾರ್ ಅವರು ಬಗ್ಗೆ ಗೊತ್ತೇ ಇರಬೇಕು ಅಲ್ಲವೇ ಒಬ್ಬ ಅದ್ಬುತ ಕಲಾವಿದ, ಅದ್ಭುತ ಡಾನ್ಸರ್ ಕೂಡ ಹೌದು ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ವಿನೋದ್ ರಾಜ್ ಕುಮಾರ್ ಅವರ ಡ್ಯಾನ್ಸ್ ಗೆ ಫಿದಾ ಆಗದವರೇ ಇಲ್ಲ ಕನ್ನಡ ಮೈಕಲ್ ಜ್ಯಾಕ್ಸನ್ ಅಂತಾನೇ ಹೇಳಬಹುದು. ಇವರ ಡ್ಯಾನ್ಸ್ ನೋಡಿದಂತಹ ಪ್ರಭುದೇವ ಹಾಗೂ ಮಾಸ್ಟರ್ ಚಿನ್ನಿ ಪ್ರಕಾಶ್ ಇನ್ನಿತರ ಕೊರಿಯೋಗ್ರಾಫರ್ ನಿಜಕ್ಕೂ ಬೆರಗಾಗಿ ಹೋಗಿದ್ದರು.

ಇಷ್ಟು ಅದ್ಬುತವಾಗಿ ಡ್ಯಾನ್ಸ್ ಅನ್ನು ಇವರು ಎಲ್ಲಿ ಕಲಿತರು ಇಷ್ಟು ನಿರಾಳವಾಗಿ ಮೈಯಲ್ಲ ಎಲುಬು ಇಲ್ಲದೆ ಇರುವ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತರಲ್ಲ ಎಂದು ಜನ ಬಾಯಿ ಮೇಲೆ ಬೆರಳು ಇಟ್ಟುಕೊಂಡು ನೋಡುತ್ತಿದ್ದರು. ಆ ಕಾಲದಲ್ಲಿ ವಿನೋದ್ ರಾಜ್ ಕುಮಾರ್ ಅವರಿಗೆ ಎಲ್ಲಿಲ್ಲದ ಬೇಡಿಕೆ 90ರ ದಶಕದಲ್ಲಿ ಶಶಿ ಕುಮಾರ್ ಹಾಗೂ ವಿನೋದ್ ರಾಜ್ ಕುಮಾರ್ ಬಿಟ್ಟರೆ ಬೇರೆ ಯಾರು ಡ್ಯಾನ್ಸ್ ಮಾಡುತ್ತಿರಲಿಲ್ಲ. ಇದಕ್ಕಾಗಿಯೇ ಇವರಿಬ್ಬರಿಗೂ ಹೆಚ್ಚಿನ ಆಫರ್ ಬರುತ್ತಿತ್ತು ವಿನೋದ್ ರಾಜ್ ಕುಮಾರ್ ಇಲ್ಲಿಯವರೆಗೂ ಸುಮಾರು 40 ಸಿನೆಮಾದಲ್ಲಿ ನಾಯಕನಾಗಿ ಪೋಷಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇದ್ದಕಿದ್ದ ಹಾಗೆ ವಿನೋದ್ ರಾಜ್ ಕುಮಾರ್ ಅವರು ಚಿತ್ರರಂಗದಿಂದ ದೂರ ಉಳಿದಿರುವವಂತಹ ವಿಚಾರ ಇಡೀ ಚಿತ್ರರಂಗಕ್ಕೆ ಗೊತ್ತು.

ಕನ್ನಡದ ಕಂದ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯ ಮಾಡಿದ್ದೆ ಇವರ ಕೊನೆಯ ಚಿತ್ರ ಅಂತ ಹೇಳಬಹುದು 2007 ರಲ್ಲಿ ಈ ಚಿತ್ರ ತೆರೆ ಕಂಡಿತು. ಈ ಚಿತ್ರದ ನಂತರ ಮತ್ಯಾವತ್ತು ಸಿನೆಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಒಬ್ಬ ಒಳ್ಳೆಯ ನಟ ಇದ್ದಕಿದ್ದ ಹಾಗೆ ಚಿತ್ರರಂಗದಿಂದ ದೂರ ಉಳಿದಿದ್ದಾನೆ ಅಂದರೆ ನಿಜಕ್ಕೂ ಕೂಡ ಬೇಸರದ ಸಂಗತಿ.

ಅಷ್ಟೇ ಅಲ್ಲದೆ ವಿನೋದ್ ರಾಜಕುಮರ್ ಅವರು ಇಂತಹದೊಂದು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕಾರಣವಾದರೂ ಏನು ಎಂಬ ಹಲವಾರು ಅನುಮಾನಗಳು ಜನರಲ್ಲಿ ಮುಡೋದು ಸಹಜ. ಸದ್ಯಕ್ಕೆ ವಿನೋದ್ ರಾಜ್ ಕುಮಾರ್ ಅವರು ಚಿತ್ರರಂಗದಿಂದ ಸಹವಾಸವೇ ಬೇಡ ಅಂತ ಬೆಂಗಳೂರಿನ ಸಮೀಪ ಇರುವಂತಹ ಹಳ್ಳಿ ಒಂದರಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಇನ್ನು ಇವರು ತಮ್ಮ ತಾಯಿಯನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎಂದರೆ ಬೇರೊಬ್ಬ ಸೊಸೆ ಮನೆಗೆ ಬಂದರೆ ತಾಯಿಯನ್ನು ಚನ್ನಾಗಿ ನೋಡಿಕೊಳ್ಳುತ್ತಾಲೋ ಇಲ್ಲವೋ ಎಂಬ ಅನುಮಾನದಿಂದ ತಮ್ಮ ತಾಯಿಯನ್ನು ಲಾಲಾನೇ ಪಾಲನೆ ಮಾಡಿಕೊಂಡು ಇದ್ದಾರೆ. ಇಷ್ಟೆಲ್ಲಾ ಒಳ್ಳೆಯ ಸದ್ಗುಣಗಳನ್ನು ಹೊಂದಿರುವ ಇವರನ್ನು ಚಿತ್ರರಂಗ ಯಾಕೆ ಇವರನ್ನು ಕಡೆಗಣಿಸಿದೆ ಇವರಿಗೆ ಯಾಕೆ ನಟನೆ ಮಡುವುದಕ್ಕೆ ಅವಕಾಶಗಳನ್ನು ಕೊಡುತ್ತಿಲ್ಲ ಎಂಬ ಪ್ರೆಶ್ನೆಗೆ ಇದೀಗ ಸ್ವತಃ ಲೀಲಾವತಿಯವರೇ ಉತ್ತರ ನೀಡಿದ್ದಾರೆ.

ಇವರು ಕೊಟ್ಟ ಉತ್ತರವನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಆದರೂ ಕೂಡ ಲೀಲಾವತಿ ಅಮ್ಮನವರು ತಮ್ಮ ಬದುಕಿನಲ್ಲಿ ನಡೆದಂತಹ ಕಹಿ ಘಟನೆಗಳನ್ನು ಹೊರ ಹಾಕಿ ತಮ್ಮ ಮಗನಿಗೆ ಆದಂತಹ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಯಾವ ತಾಯಿ ತನ್ನ ಮಗನ ಭವಿಷ್ಯ ಉಜ್ವಲವಾಗಿರಲಿ ಅಂತ ಬಯಸೋದಿಲ್ಲ ಹೇಳಿ, ಸಾಕಷ್ಟು ಜೇಗುಪ್ಸೆಗಳು ಕಷ್ಟಗಳು ಎಲ್ಲವೂ ಬಂದಿದೆ ಆದರೆ ಬಲವಂತ ಮಾಡಿ ಅವಕಾಶ ಬರಲೇಬೇಕು ಅಂತ ಮಾಡುವಂತ ಅವಶ್ಯಕತೆ ಬೇಕಾಗಿಲ್ಲ. ನೀನು ದುಡಿ ನಾನು ತೋಟ ಮಾಡುತ್ತೇನೆ ನಿನ್ನ ಜೀವನದಲ್ಲಿ ನೋವು ಕಡಿಮೆ ಆಗಬೇಕು ಅಂದರೆ ಕರ್ತವ್ಯದಲ್ಲಿ ನಿರತನಗೂ ಸಾರಿ ಹೋಗುತ್ತೆ ಅಂತ ಹೇಳಿ ಅವಾನಿಗೆ ಕೃಷಿಯಲ್ಲಿ ನಾನು ಅಳವಡಿಸಿಕೊಂಡಿದ್ದೆ. ಆ ಸಮಯದಲ್ಲಿ ಎಲ್ಲರೂ ಕೂಡ ಹೇಳಿದ್ದರು ಅಯ್ಯೋ ಆ ಮಗನ ಹತ್ತಿರ ದುಡಿಸ್ಕೊಂಡು ತಾಯಿ ಸುಮ್ಮನೆ ಕುತ್ತಿದ್ದಾಳೆ ಅಂತ. ನಾನು ಸುಮ್ಮನೆ ಕುತ್ತಿಲ್ಲ ಯಾರೇ ಬಂದು ನನ್ನ ತೋಟ ನೋಡಿದ್ರೆ ಇದು ತೋಟ ಅಲ್ಲ ಸ್ವರ್ಗ ಅಂತ ಹೇಳುತ್ತಾರೆ.

ಆಗ ನನಗೆ ಸ್ವರ್ಗದಲ್ಲೇ ಇದ್ದಷ್ಟು ಸಂತೋಷ್ ಆಗುತ್ತದೆ ಅಷ್ಟೇ ಸಾಕು ನನಗೆ ಶೋಲ್ದರ್ ಸ್ವಿನ್ ಮಾಡೋದಕ್ಕೆ ಎಲ್ಲಿಂದ ಪ್ರಾರಂಭ ಮಾಡಿದ್ದೇನೆ ಅಂದರೆ ಮೈಕಲ್ ಜಾಕ್ಸನ್ ಮಾಡೋದನ್ನ ನೋಡಿಕೊಂಡು ಪ್ರಾಕ್ಟೀಸ್ ಮಾಡುತ್ತಾ ಇದ್ದ. ಚಿಕ್ಕವನಿದ್ದಾಗ ಶೋಲ್ದರ್ ಸ್ವಿನ್ ಮಾಡುವಾಗ ಅಮ್ಮ ಹಿಡ್ಕೋ ಅಂತ ಹೇಳಿ ನಾನು ಅವನು ಇಬ್ಬರು ಬಿದ್ದಿದ್ದೇವೆ. ಅವನಿಗೆ ಅಷ್ಟು ಹುಚ್ಚು ಅಷ್ಟು ಕಿಚ್ಚು ಇತ್ತು. ಅವನಿಗೆ ಅದನ್ನು ನೆನಪಿಸಿಕೊಂಡ್ರೆ ನನಗೆ ಕೋಪ ಬರುತ್ತದೆ.

ಇನ್ನು ಅಷ್ಟು ಚನ್ನಾಗಿ ಡ್ಯಾನ್ಸ್ ಮಾಡ್ತಾನೆ ಅಂತ ಎಲ್ಲರೂ ಹೇಳ್ತಾರೆ ಹೊರತು ನೀನು ಚನ್ನಾಗಿ ಡ್ಯಾನ್ಸ್ ಮಾಡ್ತಿಯಪ್ಪ ಅಂತ ಒಬ್ಬರಾದರೂ ಅವನಿಗೆ ಪ್ರಶಸ್ತಿ ಕೊಟ್ಟಿದ್ದಾರೆಯೇ? ಅಥವಾ ಚಿತ್ರರಂಗ ಒಂದು ಒಳ್ಳೆಯ ಅವಕಾಶ ಕೊಡುವ ಮನಸ್ಸು ಮಾಡಿದೆಯೇ.? ಕಂಡಿತವಾಗಿಯೂ ಇಲ್ಲ. ಲೀಲಾವತಿ ಮಗ ಮಾಡಿದ ತಪ್ಪೇನು ನಾವು ಏನು ತಪ್ಪು ಮಾಡಿದ್ದೇವೆ ಈಗಲೂ ಕೂಡ ನಾನು ಧೈರ್ಯದಿಂದ ಹೇಳುತ್ತಾನೆ

ವಿನೋದ್ ರಾಜ್ ಕರಿಯರ್ ಹೀಗೆ ಆಗಲು ಕಾರಣ ಒಂದು ದೊಡ್ಡ ನಿರ್ಮಾಣ ಸಂಸ್ಥೆ ಹಾಗೂ ಅವರ ಮಕ್ಕಳು ಮತ್ತು ಕೆಲವು ನಿರ್ಮಾಪಕರು, ನಿರ್ದೇಶಕರು, ಅವರ ಹೆಸರು ಹೇಳುವ ಧೈರ್ಯ ನಂಗಿಲ್ಲ ದೇವರ ಕೈಯಲ್ಲಿ ಅಬಲೆಯ ಹಾಗೆ ನಾನು ನನಗೆ ಅವನು ಆಧಾರವಾಗಿದ್ದೇನೆ ಹೊರತು ಬೇರೆ ಯಾವ ಇದು ನಮಗೆ ಇಲ್ಲವೆಂದು ತುಂಬಾ ಭಾವುಕರಾಗಿ ಲೀಲಾವತಿ ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಟ ವಿನೋದ್ ರಾಜ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *