ಸೆಲೆಬ್ರಿಟಿಗಳ ಮಕ್ಕಳು ಸಿನಿ ಲೋಕಕ್ಕೆ ಎಂಟ್ರಿ ಕೊಡುವುದು ದೊಡ್ಡ ವಿಷಯವೇನಲ್ಲ. ಈಗಾಗಲೇ ಸಾಕಷ್ಟು ನಟ ನಟಿಯರ ಮಕ್ಕಳು ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟು ನೇಮ್ ಫೇಮ್ ಸೃಷ್ಟಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕನಸಿನ ರಾಣಿ ಮಾಲಾಶ್ರೀ ಮಗಳು ರಾಧನಾ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ ಇದೀಗ ಲವ್ಲೀ ಸ್ಟಾರ್ ಪ್ರೇಮ್ ಮಗಳು ಅಮೃತಾ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಪ್ರೇಮ್ ಮಗಳು ಟಗರು ಪಲ್ಯ ಸಿನಿಮಾದಲ್ಲಿ ನಟಿಸುತ್ತಿದ್ದು, ಮೊದಲ ಬಾರಿಗೆ ಕ್ಯಾಮೆರಾದ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.ಈ ಸಿನಿಮಾದಲ್ಲಿ ನಟ ನಾಗಭೂಷಣ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಡಾಲಿ ಧನಂಜಯ್ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಚಿತ್ರವನ್ನು ಉಮೇಶ್ ಕೆ. ಕೃಪ ನಿರ್ದೇಶನ ಮಾಡಿದ್ದು, ಅಮೃತಾ ಪ್ರೇಮ್ ಅವರ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಲಾಗಿದೆ.
ಈ ಪೋಸ್ಟರ್ನಲ್ಲಿ ಹಳ್ಳಿ ಹುಡುಗಿಯ ಗೆಟಪ್ನಲ್ಲಿ ಅಮೃತಾ ಅವರು ಕಾಣಿಸಿ ಕೊಂಡಿದ್ದಾರೆ. “ಟಗರು ಪಲ್ಯ” ಚಿತ್ರದ ಮೂಲಕವೇ ಪ್ರೇಮ್ ಮಗಳು ಅಮೃತಾರನ್ನು ಪರಿಚಯ ಮಾಡುತ್ತಿದ್ದು, ಈ ಬಗ್ಗೆ ಡಾಲಿ ಧನಂಜಯ್ ಅವರು ಖುಷಿಯಾಗಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಪ್ರೀತಿಯ ನೆನಪಿರಲಿ ಪ್ರೇಮ್ ಅಣ್ಣನ ಮಗಳು ಅಮೃತಾ ಪ್ರೇಮ್ ರನ್ನ, ಇಂಡಸ್ಟ್ರೀಗೆ ಕನ್ನಡದ ಮಣ್ಣಿನ ಸೊಗಡಿನ ಮಗಳಾಗಿ.
ನಮ್ಮ ಸಂಸ್ಥೆಯ ಮೂರನೇ ಕಾಣಿಕೆ ಟಗರು ಪಲ್ಯ ಚಿತ್ರದ ಮೂಲಕ ಪರಿಚಯಿಸುತ್ತಿದ್ದೇನೆ. ಅಮೃತಾ ಪ್ರೇಮ್ ಕನ್ನಡದ ಮನೆ ಮಗಳಾಗಿ ಬೆಳಗಲಿ, ಬೆಳೆಯಲಿ, ನಿಮ್ಮ ಪ್ರೀತಿ ಇರಲಿ, ಹರಸಿ, ಹಾರೈಸಿ ಎಂದು ಬರೆದುಕೊಂಡು, ಅಮೃತಾ ಫೋಟೋ ಹಂಚಿಕೊಂಡಿದ್ದಾರೆ. ತಮ್ಮ ಮಗಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ಈ ಬಗ್ಗೆ ಮಾತನಾಡಿದ್ದು, ‘ ನಾನು ಒಬ್ಬ ನಟನಾಗಿ ಮಗಳು ಚಿತ್ರರಂಗಕ್ಕೆ ಬರುತ್ತಿರೋದು ಖುಷಿ ಇದೆ.
ಆಕೆ ಓದುವುದರಲ್ಲೂ ಡಿಸ್ಟಿಂಕ್ಷನ್, ಈಗ ನಟಿಯಾಗಿ ಸಿನಿಮಾಗೂ ಬರುತ್ತಿದ್ದಾಳೆ. ಚಿತ್ರದ ಪಾತ್ರಕ್ಕಾಗಿ ಹಲವು ದಿನಗಳಿಂದ ಸಿದ್ದತೆ ನಡೆಸುತ್ತಿದ್ದಾಳೆ. ನಿರ್ದೇಶಕ ಉಮೇಶ್.ಕೆ.ಕೃಪ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಕಥೆ ಕೇಳಿದ ಮೇಲೆ ಬೇಡ ಎನ್ನಲಾಗಲಿಲ್ಲ. ಕನ್ನಡ ಜನತೆ ಆಕೆಗೆ ಪ್ರೀತಿ ಪ್ರೋತ್ಸಾಹ ನೀಡಿ ಬೆಳಸಬೇಕು’ ಎಂದಿದ್ದಾರೆ. ಇನ್ನು ನಟಿಯಾಗಿ ಎಂಟ್ರಿ ಕೊಟ್ಟಿರುವ ಪ್ರೇಮ್ ಮಗಳು ಅಮೃತಾ ಅವರು ಪ್ರಾರಂಭದಲ್ಲಿ ಕಥೆ ಇಷ್ಟಪಟ್ಟಿದ್ದಾರಂತೆ. ಕೊನೆಗೆ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರಂತೆ.

ಆದರೆ ಸದ್ಯಕ್ಕೆ ಪ್ರೇಮ್ ಪುತ್ರಿ ಅಮೃತಾ ಇಂಜಿನಿಯರಿಂಗ್ ಓದುತ್ತಿದ್ದಾರೆ. ಈ ಮಧ್ಯೆ ಅಮೃತಾ ನಟನೆಗೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮುಂಬಯಿನ ಅನುಪಮ್ ಕೇರ್ ಆಯಕ್ಟಿಂಗ್ ಸ್ಕೂಲ್ ನಲ್ಲಿ ಅಮೃತಾ ಆಯಕ್ಟಿಂಗ್, ಡ್ಯಾನ್ಸ್, ಕಲಿತುಕೊಂಡಿದ್ದಾರೆ. ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಎಲ್ಲಾ ತಯಾರಿ ನಡೆಸಿದ್ದಾರೆ. ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿರುವ ಅಮೃತಾಳನ್ನು ಹೇಗೆ ಸಿನಿ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.