ಸ್ಯಾಂಡಲ್ವುಡ್ ಯಶಸ್ವಿಯಾಗಿ ಗಳ್ಳಪಟ್ಟಿಗೆ ತುಂಬಿರುವ ಸಿನೆಮಾಗಳಲ್ಲಿ ಚಾರ್ಲಿ 777 ಸಿನೆಮಾ ಕೂಡ ಒಂದು ಎಲ್ಲರಿಗೂ ಗೊತ್ತೇ ಇದೇ. ಚಂದನವನದಲ್ಲಿ ಸಿಂಪಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ರಕ್ಷಿತ್ ಶೆಟ್ಟಿಯವರು ಬಹುನಿರೀಕ್ಷಿತ 777 ಚಾರ್ಲಿ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಚಾರ್ಲಿ ಸಿನೆಮಾವು ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ತೆರೆದಿಡುತ್ತದೆ ಚಾರ್ಲಿ ಕಥೆಯೂ ಮೂಕ ಪ್ರಾಣಿ ಹಾಗೂ ಮನುಷ್ಯ ಸಂಬಂಧವನ್ನು ಜನರಿಗೆ ತಿಳಿಸುವಲ್ಲಿ ಅದ್ಭುತವಗಿ ಮೂಡಿಬಂದಿದೆ.
ಹೌದು, ಚಾರ್ಲಿ ಚಿತ್ರವು ಯಾರು ಅಂದುಕೊಳ್ಳದ ಮಟ್ಟಿಗೆ ಯಶಸ್ಸು ಕಂಡು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿತ್ತು. ಈ ಸಿನಿವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಅದರ ಜೊತೆಗೆ ಸಿನೆಮಾದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್. ಬಿ ಶೆಟ್ಟಿ ಮುಂದಾತವರು ನಂತಿಸಿದ್ದಾರೆ. ಅದರಲ್ಲಿಯೂ ಈ ಸಿನೆಮಾದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಚಾರ್ಲಿ ಎಂಬ ಶ್ವಾನ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದಲ್ಲದೆ, ಪ್ಯಾನ್ ಇಂಡಿಯಾ ಸಿನೆಮಾವಾಗಿರುವ ಚಾರ್ಲಿ ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ತೆರೆಗೆ ಬಂದು ಉತ್ತಮ ರೀತಿಯಲ್ಲಿ ಯಶಸ್ವಿಯನ್ನು ಗಳಿಸಿತ್ತು.
ಅಂದಹಾಗೆ, ಚಾರ್ಲಿ ಸಿನೆಮಾವನ್ನು ತಮಿಳಿನ ಸೂಪರ್ ಸ್ಟಾರ್ ರಜನಿ ಕಾಂತ್ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಸಿನೆಮಾ ಕುರಿತು ಹಾಡಿ ಹೊಗಳಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರಿಗೆ ರಜನಿಕಾಂತ್ ಅವರಿಂದ ಕರೆ ಬಂತು. ರಜನಿಕಾಂತ್ ಅವರು ಚಾರ್ಲಿ ಸಿನೆಮಾವನ್ನು ನೋಡಿ ಸಿನೆಮಾ ಅವರಿಗೆ ತುಂಬಾ ಇಷ್ಟವಾಗಿತ್ತು ಸಿನೆಮಾದ ಬಗ್ಗೆ ಆಳವಾಗಿ ಮಾತನಾಡಿದ್ದರು ವಿಶೇಷವಾಗಿ ಸಿನೆಮಾದ ಕ್ಲೈಮಾಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇನ್ನು ರಕ್ಷಿತ್ ಶೆಟ್ಟಿ ಅವರು ರಜನಿಕಾಂತ್ ಅವರಿಗೆ ಟ್ವಿಟ್ ಮಾಡುವ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಒಟ್ಟಿನಲ್ಲಿ ಸಿನೆಮಾ ಗೆದ್ದಿದ್ದು, ರಕ್ಷಿತ್ ಶೆಟ್ಟಿಯವರ ಮೇಲಿನ ನಿರೀಕ್ಷೆಯೂ ಇನ್ನು ಹೆಚ್ಚಾಗಿದೆ ಎಂದು ಹೇಳಬಹುದು. ಅಂದಹಾಗೆ, ಈ ಸಿನೆಮಾದ ಸಂಭಾವನೆ ಕುರಿತು ಮಾತನಾಡಿದ್ದರು. ಹಾಗಾದರೆ ಚಾರ್ಲಿ ಸಿನೆಮಾದ ಸಂಭಾವನೆಯ ಬಗ್ಗೆ ಏನು ಹೇಳಿದ್ದರೆ ಎನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ.
ನಟಿ ಸಂಗೀತ ಶೃಂಗೇರಿ ಕನ್ನಡ ಸಿನೆಮಾರಂಗದಲ್ಲಿ ಸಕ್ರಿಯಾರಾಗಿರುವ ಯುವ ನಟಿಯಾರಲ್ಲಿ ಒಬ್ಬರು. ಹೌದು, ಸದ್ಯಕ್ಕೆ ಇವರ ಕೈಯಲ್ಲಿ ಸಾಕಷ್ಟು ಸಿನೆಮಾಗಳಿವೆ. ಇವರು ಚಾರ್ಲಿ A+ ಮುಂತಾದ ಸಿನೆಮಾಗಳಿಗೆ ನಾಯಕಿಯಾಗಿ ನಟಿಸಿದ್ದರೆ. ಖಾಸಗಿ ಸುದ್ದಿ ಮಾಧ್ಯಮದ ಸಂದರ್ಶನಒಂದರಲ್ಲಿ ಚಾರ್ಲಿ ಸಿನೆಮಾದ ಸಂಭಾವನೆಯ ಬಗ್ಗೆ ಮಾತನಾಡಿದ್ದು, ರಕ್ಷಿತ್ ಅವರು ಸಿನೆಮಾದಿಂದ ಬಂದ ಲಾಭವನ್ನು ಶೇಕಡಾ 10ರಷ್ಟು ಇಡೀ ತಂಡಕ್ಕೆ ಕೊಡುತ್ತೇನೆ ಎಂದಿದ್ದಾರೆ. ಅದಿನ್ನು ಬಂದಿಲ್ಲ ನನಗೆ ಅದರಲ್ಲಿ ಏನು ಸಮಸ್ಸೆ ಇಲ್ಲ.
ಸಿನೆಮಾ ಗೆದ್ದ ಖುಷಿಗೆ ಇಡೀ ಚಿತ್ರತಂಡವನ್ನು ಟ್ರೀಪ್ ಕರೆದುಕೊಂಡು ಹೋಗಿ ತುಂಬಾ ಎಂಜಾಯ್ ಮಾಡಿದ್ದೇವೆ. ನಾನು ಇದನೆಲ್ಲ ಬಯಸುವುದೇ ಇಲ್ಲ ಚಾರ್ಲಿ ತಂಡ ಹೇಗೆ ಅಂತ ನನಗೆ ಗೊತ್ತು. ಅವರು ಕೊಟ್ರೆ ಖಂಡಿತವಾಗಿಯೂ ಖುಷಿ ಆಗುತ್ತೆ. ಈ ಸಿನೆಮಾಕ್ಕಾಗಿ ಸುಮಾರು ವರ್ಷಗಳ ಕಾಲ ಕಾಮಿಟೆಟ್ ಆಗಿದೆ’ ಎಂದಿದ್ದಾರೆ. ಇನ್ನು ಈ ಸಿನೆಮಾದ ದೊಡ್ಡ ಯಶಸ್ವಿನಿಂದ ರಕ್ಷಿತ್ ಶೆಟ್ಟಿ ಅವರು ಖಂಡಿತವಾಗಿರು ತಮ್ಮ ಸಂಭಾವನೆಯನ್ನು ಹೆಚ್ಚಿಸಿ ಕೊಳ್ಳಬಹುದು ಎನ್ನುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ.