ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ವಂಶಿಕಾ ಹಾಗೂ ಶಿವು ಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ಗೊತ್ತಾ? ಅಬ್ಬಬ್ಬಾ ಇಷ್ಟು ಚಿಕ್ಕ ವಯಸ್ಸಿಗೆ ಇವಳ ಸಾಧನೆಗೆ ಭೇಷ್ ಅನ್ನಲೇಬೇಕು.!

ಸಮಸ್ಕಾರ ಪ್ರೀತಿಯ ವೀಕ್ಷಕರೆ, ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಶೋಗಳು ತೆರೆಗೆ ಬಂದು ಪ್ರೇಕ್ಷಕ ವರ್ಗವನ್ನು ಮನೋರಂಜಿಸಿವೆ. ಹೌದು, ಕಲರ್ಸ್ ಕನ್ನಡ ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಪ್ರೇಕ್ಷಕ ವರ್ಗಾವನ್ನು ತನ್ನತ್ತ ಸೆಳೆದುಕೊಂಡಿದೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸಿದರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 9 ಶುರುವಾಗಲಿದೆ.

ಹೀಗೆ ಹಲವಾರು ನೂತನ ಕಾರ್ಯಕ್ರಮಗಳನ್ನು ನೀಡುತ್ತಿವೆ. ಈ ವರ್ಷಗಿಚ್ಚಿ ಗಿಲಿಗಿಲಿ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂದಿತ್ತು. ಮಜಾ ಭಾರತದ ಕಲಾವಿದರ ಜೊತೆ ಬೇರೆ ಬೇರೆ ಕಲಾವಿದರು ಸೇರಿ ಮನರಂಜನೆ ನೀಡುತ್ತಿದ್ದರು. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮವು ಮುಗಿದಿದ್ದು ಶೋನ ವಿನ್ನರ್ ವಂಶಿಕಾ ಹಾಗೂ ಶಿವು ಜೋಡಿ ಬಹುಮಾನವಾಗಿ ಸಿಕ್ಕ ಹಣವೆಷ್ಟು ಗೊತ್ತಾ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮವು ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಬರುತ್ತಿತ್ತು. ಮುಖ್ಯ ತೀರ್ಪುಗರರಾಗಿ ಶ್ರುತಿ, ಸಾಧು ಕೋಕಿಲ, ಸೃಜನ್ ಲೋಕೇಶ್ ತೀರ್ಪು ನೀಡುತ್ತಿದ್ದರು. ಇನ್ನು ನಿರೂಪಕರಾಗಿ ನಿರಂಜನ್ ದೇಶಪಾಂಡೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದರು. ಅಷ್ಟೇ ಅಲ್ಲದೇ, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಎರಡು ರೀತಿ ಬಹುಮಾನ ನೀಡಲಾಗಿದೆ.

ಒಬ್ಬರು ಆಕ್ಟರ್, ನಾನ್ ಆಕ್ಟರ್ ವಿಭಾಗ ಮಾಡಿ ಬಹುಮಾನವನ್ನು ವಿತರಿಸಲಾಗಿತ್ತು. ರನ್ನರ್ ಅಪ್ ಆಗಿ ಆಕ್ಟರ್ ವಿಭಾಗದಲ್ಲಿ ಗೊಬ್ಬರ ಗಾಲಾ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಾನ್ ಆಕ್ಟರ್ ವಿಭಾಗದಲ್ಲಿ ನಿವೇದಿತಾ ಗೌಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಂದಹಾಗೆ, ಗಿಚ್ಚಿ ಗಿಲಿಗಿಲಿ ಶೋನ ವಿನ್ನರ್ ಆಗಿ ಶಿವು ಪ್ರಶಸ್ತಿಯನ್ನು ಗೆದ್ರೆ, ನಾನ್ ಆಕ್ಟರ್ ವಿಭಾಗದಲ್ಲಿ ವಂಶಿಕಾ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾಳೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ, ವಂಶಿಕಾ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ಆ ಶೋ ಮೂಲಕವೇ ವಂಶಿಕಾ ಎಲ್ಲರಿಗೂ ಇಷ್ಟವಾಗಿ ಬಿಟ್ಟಿದ್ದಳು. ನಂತರದಲ್ಲಿ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲೂ ಶಿವು ಜೋಡಿಯಾಗಿ ತನ್ನ ನಟನೆಯ ಮೂಲಕವೇ ಸಾಕಷ್ಟು ಮೋಡಿ ಮಾಡಿದಳು. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಹಲವಾರು ಮಜಾಭಾರತದ ಹೆಸರಾಂತ ಘಟನು ಘಾಟಿಗಳು ಕಲಾವಿದರು ಇದ್ದಾರೆ. ಎಲ್ಲರೂ ಜನರನ್ನು ತುಂಬಾನೇ ನಗಿಸಿದ್ದಾರೆ.

ಈ ಶೋನಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಅಭಿನಯಿಸಿದ ವಂಶಿಕಾ ಮುಂತಾದವರು ಭಾಗವಹಿಸಿದ್ದಾರೆ. ಈ ಗಿಚ್ಚಿ ಗಿಲಿಗಿಲಿ ಸೀಸನ್ ನಲ್ಲಿ ಮೊದಲ ಸ್ಥಾನ ಪಡೆದವರಿಗೆ ವಿನ್ನರ್ ಟ್ರೋಫಿ ಹಾಗೂ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. 2ನೇ ಸ್ಥಾನ ಪಡೆದವರಿಗೆ ವಿನ್ನರ್ ಟ್ರೋಫಿ ಹಾಗೂ 3 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *