ಗಂಧದ ಗುಡಿ ಸಾಕ್ಷ್ಯಚಿತ್ರದ ಕೊನೆಯ ದಿನದ ಶೂಟಿಂಗ್ ವಿಡಿಯೋ ವೈ’ರಲ್.! ಪುನೀತ್ ರಾಜ್ ಕುಮಾರ್ ಕ್ಯಾಮರಾ ಕಸರತ್ತು ಹೇಗಿತ್ತು ನೋಡಿ

ನಮಸ್ತೆ ಪ್ರೀತಿಯ ವೀಕ್ಷಕರೆ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ, ಹೌದು, ಕನ್ನಡ ಸಿನೆಮಾರಂಗದಲ್ಲಿ ಪವರ್ ಸ್ಟಾರ್ ಆಗಿ ಮೆರೆದ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ಇಲ್ಲವಾಗಿದ್ದರೂ ಮಾನಸಿಕವಾಗಿ ಕೋಟ್ಯಂತರ ಜನರ ಮನಸ್ಸಿನಲ್ಲಿ ಇದ್ದಾರೆ. ಹೌದು ಅಪ್ಪುವನ್ನು ನೆನಪಿಸಿಕೊಳ್ಳದ ಜನರಿಲ್ಲ. ಒಬ್ಬ ಸ್ಟಾರ್ ನಟನಾಗಿ ಮಾತ್ರ ಅಪ್ಪು ಗುರುತಿಸಿಕೊಂಡವರಲ್ಲ, ಅದಕ್ಕಿಂತ ಹೆಚ್ಚಾಗಿ ಅವರ ನಡೆ ನುಡಿ, ವಿನಾಯವಂತಿಕೆ ಹಾಗೂ ಅಭಿಮಾನಿಗಳ ಜೊತೆ ಬೆರೆಯುತ್ತಿದ್ದ ರೀತಿಯಿಂದ ಹತ್ತಿರವಾಗಿದ್ದರು.

ಸಿನೆಮಾರಂಗದಲ್ಲಿ ನಟ, ನಿರ್ಮಾಪಕ, ನಿರೂಪಕ ಹಾಗೂ ಗಾಯಕನರಾಗಿ ಗುರುತಿಸಿಕೊಂಡವರು. ಬಾಲ್ಯದಲ್ಲೇ ಸಿನೆಮಾಕ್ಷೇತ್ರಕ್ಕೆ ಕಾಲಿಟ್ಟು ಅಪ್ಪು ಅವರ ಸಿನೆಮಾರಂಗದ ಬದುಕು ಎಲ್ಲರಿಗೂ ಮಾದರಿಯಾಗಿದೆ. ಹೌದು, ಪುನೀತ್ ರಾಜ್ ಕುಮಾರ್ ಬಾಲನಟನಾಗಿಯೇ ಸಾಕಷ್ಟು ಖ್ಯಾತಿ ಗಳಿಸುವುದರ ಜೊತೆಗೆ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಅಪ್ಪು ನಾಯಕನಟನಾಗಿ ಕಾಣಿಸಿಕೊಂಡರು.

ಇನ್ನು, ಪ್ರೇಮದ ಕಾಣಿಕೆ, ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಸೇರಿದಂತೆ ಸಾಕಷ್ಟು ಸಿನೆಮಾಗಳಲ್ಲಿ ಪ್ರೇಕ್ಷಕರ ಹೃದಯದವನ್ನು ಗೆದ್ದುಕೊಂಡರು. ಇನ್ನು 2002 ರ ವೇಳೆ ನಾಯಕ ನಟನಾಗಿ ಪುನೀತ್ ಮೊದಲ ಬಾರಿಗೆ ಸಿನೆಮಾದಲ್ಲಿ ಕಾಣಿಸಿಕೊಂಡರು. ತದನಂತರದಲ್ಲಿ ಅನೇಕ ಹಿಟ್ ಸಿನೆಮಾಗಳನ್ನು ನೀಡಿ ಅಭಿಮಾನಿಗಳ ಪ್ರೀತಿ ಸಂಪಾದಿಸಿಕೊಂಡಿದ್ದರು.

ಅಷ್ಟೇ ಅಲ್ಲದೆ, ಅಪ್ಪು ಪಿ.ಆರ್. ಕೆ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯನ್ನು ಶುರುಮಾಡಿ, ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡಬೇಕು ಎನ್ನುವ ಕನಸನ್ನು ಹೊಂದಿದ್ದರು. ಆದರೆ ಅವರು ಕೊನೆ ಬಾರಿ “ಗಂಧದಗುಡಿ” ಎಂಬ ಡಾಕ್ಯೂಮೆಂಟರಿಯಲ್ಲಿ ನಟಿಸಿದ್ದಾರೆ. ಈ ಡಾಕ್ಯೂಮೆಂಟರಿ ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ “ಗಂಧದಗುಡಿ” ಪಿ ಆರ್ ಕೆ ಸಂಸ್ಥೆ ನಿರ್ಮಾಣಮಾಡಿದೆ.

ಈ ಚಿತ್ರವನ್ನು 2021ರ ನವೆಂಬರ್ ನಲ್ಲಿ ಬಿಡುಗಡೆ ಮಾಡಲು ಪುನೀತ್ ರಾಜ್ ಕುಮಾರ್ ಯೋಜನೆ ಹಾಕಿಕೊಂಡಿದ್ದರು. ಆದರೆ ಅಪ್ಪು ಅಚಾನಕ್ ಆಗಿ ಇಹಲೋಕ ತ್ಯಜಿಸಿದರು. ಆದರೆ ಇದೀಗ ಅಪ್ಪು ಅವರ ಗಂಧದಗುಡಿ ಸಿನೆಮಾದ ಶೋಟಿಂಗ್ ವೇಳೆ ಎಷ್ಟು ಸಂತೋಷದಿಂದ ಇದ್ದರೂ ಎನ್ನುವುದಕ್ಕೆ ಈ ವಿಡಿಯೋವೊಂದು ಸಾಕ್ಷಿಯಾಗಿದೆ. ಇತ್ತೀಚಿಗಷ್ಟೇ ಪುನೀತ್ ರಾಜ್ ಕುಮಾರ್ ಅವರ ಪತ್ನಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಅನೌನ್ಸ್ ಮಾಡಿದ್ದರು.

ಈ ವರ್ಷದ ಅಕ್ಟೋಬರ್ 28ಕ್ಕೆ “ಗಂಧದಗುಡಿ” ತೆರೆ ಕಾಣಲಿದೆ ಎನ್ನುವ ಸುದ್ದಿಯೊಂದನ್ನು ನೀಡಿದ್ದರು. ಈ ಬಗ್ಗೆ ಪುನೀತ್ ಅವರ ಪತ್ನಿ ಅಶ್ವಿನಿ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದ ಅಶ್ವಿನಿ ಅವರು ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಡಿಗೆ ಅವರ ಪ್ರೀತಿಯ ಕಾಣಿಕೆ ಎಂದಿದ್ದಾರೆ.

ಈ ಸುದ್ದಿಯಿಂದಲೇ ಸಂತಸದಲ್ಲಿರುವಾಗಲೇ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಅವರ ಖುಷಿಯನ್ನು ಮತ್ತಷ್ಟು ದುಪ್ಪಟ್ಟು ಮಾಡಿತ್ತು. ಆದರೆ ಇದೀಗ “ಗಂಧದ ಗುಡಿ” ಶೋಟಿಂಗ್ ವೇಳೆಯಲ್ಲಿ ಪುನೀತ್ ರಾಜ್ ಕುಮಾರ್ ಅವರು ಎಲ್ಲರ ಜೊತೆ ನಗು ನಗುತ್ತಾ ಖುಷಿಯಾಗಿದ್ದರು. ತನ್ನ ಕನಸಿನ ಪ್ರಾಜೆಕ್ಟ್ ಚಿತ್ರಿಕಾರಣದ ವೇಳೆ ಅಪ್ಪು ಹೇಗಿದ್ದರು ಎಂದು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *