ನಿನ್ನೆ ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿ ಸಾಕ್ಷ್ಯಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಪುನೀತ ಪರ್ವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಇಡೀ ಸೌತ್ ಸಿನಿಮಾರಂಗದ ತಾರೆಯರು ಭಾಗವಹಿಸಿದ್ದು, ಅಪ್ಪು ನೆನಪಲ್ಲಿ ಕಲರ್‌ಫುಲ್ ವೇದಿಕೆ ಕಾರ್ಯಕ್ರಮಗಳು ನಡೆಯುತ್ತಿವೆ. ಇದೇ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ.
ಈ ವೇಳೆ ನಟರಾದ ಶಿವರಾಜ್‌ಕುಮಾರ್ ಪತ್ನಿ ಗೀತಾ, ಸಿಎಂ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇದೇ ವೇಳೆ ನಟ ರಾಕಿಂಗ್ ಸ್ಟಾರ್ ಯಶ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಬಿಗಿದಪ್ಪಿ ಸ್ವಾಗತಿಸಿದ್ದಾರೆ. ಮತ್ತವರ ಪತ್ನಿ ರಾಧಿಕಾ ಪಂಡಿತ್ ಸಹ ಇದೇ ವೇಳೆ ಜತೆಗಿದ್ದರು. ಅರಮನೆ ಮೈದಾನದಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮ ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು.
ರಾಜಕುಮಾರ್ ಚಿತ್ರದ ನೀನೆ ರಾಜಕುಮಾರ ಗೀತೆ ಇಡೀ ದೊಡ್ಡಮನೆಯ ಕುಟುಂಬವೇ ದನಿಗೂಡಿಸಿತ್ತು. ಈ ವೇಳೆ ಪುನಿತ್ರಾಜ್ಕುಮಾರ್ ಪತ್ನಿ ಅಶ್ವಿನಿ, ಅಪ್ಪು ನೆನೆದು ಭಾವುಕರಾದ್ರು. ಹಾಡು ಮುಗಿಯುತ್ತಿದ್ದಂತೆ, ಕಣ್ಣೀರು ಹಾಕಿದ್ರು. ಅಪ್ಪು ಕಾಣಿಸಿಕೊಂಡಿರುವ ಕಡೆಯ ಸಿನಿಮಾ ಗಂಧದ ಗುಡಿ ಪ್ರೀ-ರಿಲೀಸ್ ಈವೆಂಟ್ ಪುನೀತ ಪರ್ವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್, ಟಾಲಿವುಡ್, ಖಾಲಿವುಡ್, ಮಾಲಿವುಡ್ ಗಣ್ಯರು ಆಗಮಿಸಿದ್ದರು.
ಕನ್ನಡಿಗರ ಎದೆಯಾಳುವ ದೊರೆ.. ಗಂಧದಗುಡಿಯ ಕುವರ. ನಗು ಮುಖದ ಸಾಹುಕಾರ, ಜನ ಮನ ಗೆದ್ದ ಯುವರತ್ನ. ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ನ ನೆನಪಿನಂಗಳಕ್ಕೆ ಜಾರಿ ಒಂದು ವರ್ಷಕ್ಕೆ ಹತ್ತಿರ. ರಾಜಕುಮಾರನನ್ನ ಕಳೆದುಕೊಂಡು ವರ್ಷ ಆಗ್ತಾ ಬಂದ್ರು ಅವ್ರ ನೆನಪು ಮಾತ್ರ ಅಜರಾಮರ. ಆ ನೆನಪು ಚಿರಸ್ಥಾಯಿಗೊಳಿಸಲು ಇವತ್ತು ಮತ್ತೆ ಅಪ್ಪು ಸ್ಮರಣೆ ಆಯಿತು.
ಇದೇ ವೇಳೆ ಅಪ್ಪು ಅಭಿನಯಿಸಿದ್ದ ಬ್ಲಾಕ್ ಬಾಸ್ಟರ್ ಹಿಟ್ ರಾಜಕುಮಾರ ಸಿನಿಮಾದ ನೀನೇ ರಾಜಕುಮಾರ ಹಾಡನ್ನು, ಅಶ್ವಿನಿ ಪುನೀತ್ ರಾಜ್ ಕುಮಾರ್, ಅವರ ಪುತ್ರಿ ದ್ವಿತೀಯ ಪುತ್ರಿ ವಂದಿತ, ಡಾ. ಶಿವರಾಜ್ ಕುಮಾರ್ ರಾಘವೇಂದ್ರ ರಾಜ್‍ಕುಮಾರ್ ವಿನಯ್ ರಾಜ್ ಕುಮಾರ್, ಯುವ ರಾಜ್‍ಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬಸ್ಥರು ವೇದಿಕೆ ಮೇಲೆ ಕಣ್ಣೀರಿಡುತ್ತಲೇ ಹಾಡಿದರು.
ಈ ವೇಳೆ ಅಪ್ಪು ನೆನೆದು ಭಾವುಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಣ್ಣೀರು ಹಾಕುತ್ತಾ, ಅಭಿಮಾನಿಗಳಿಗೆ ನಮಸ್ಕರಿಸಿ ವೇದಿಕೆ ಮೇಲಿಂದ ಹೊರ ನಡೆದಿದ್ದಾರೆ. ಇನ್ನೂ ಹಾಡು ಮುಕ್ತಾಯವಾಗುತ್ತಿದ್ದಂತೆ ಅಭಿಮಾನಿಗಳು ಅಪ್ಪು, ಅಪ್ಪು ಎಂದು ಜೈಕಾರ ಕೂಗಿದರು. ಒಟ್ಟಾರೆ ಒಂದು ನಿಮಿಷ ನೀರವ ಮೌನ ಆವರಿಸಿದ್ದ ಅರಮನೆ ಮೈದಾನ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದೇ ಹೇಳಬಹುದು. ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.