ಗಂಧದಗುಡಿ ಸಿನಿಮಾ ನೋಡಿ ತಂದೆಯ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಮಗಳು ಧೃತಿ… ಇಲ್ಲಿವೇ ನೋಡಿ ಪೋಟೊಗಳು.!!

ಚಂದನವನದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಗಂಧದಗುಡಿ ಸಿನಿಮಾ ಅಕ್ಟೊಬರ್ 28 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಅಪ್ಪು ನಮ್ಮನ್ನು ಬಿಟ್ಟು ಸದ್ದಿಲ್ಲದೇ ಒಂದು ವರ್ಷ ಕಳೆದರು ಆ ನೋವನ್ನು ಮರೆಯಲು ಯಾರಿಂದಲೂ ಆಗುತ್ತಿಲ್ಲ.

ಇನ್ನು ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಅವರ ಪುಣ್ಯಸ್ಮರಣೆ ಮಾಡಿ ಅನ್ನಧಾನ, ರ-ಕ್ತಧಾನ ಹಾಗೂ ನೇತ್ರ ಧಾನ ಮಾಡಿದ್ದಾರೆ. ಅಪ್ಪು ನಮ್ಮನ್ನು ಬಿಟ್ಟು ಹೋಗಿ 365 ದಿನಗಳು ಕಳೆದರು ಅವರು ನಮ್ಮ ಜೊತೆಗಿದ್ದಾರೆ ಎನ್ನುವ ಭಾವನೆಯಲ್ಲಿಯೇ ಅಪ್ಪು ಕುಟುಂಬಸ್ಥರು ಆಪ್ತರು ಹಾಗೂ ಅವರ ಕೋಟ್ಯಂತರ ಅಭಿಮಾನಿಗಳು ಜೀವಿಸುತ್ತಿದ್ದಾರೆ.

ಇನ್ನು ಅಪ್ಪು ಅವರ ಕನಸನ್ನು ನನಸು ಮಾಡಲು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪಟ್ಟಿರುವ ಶ್ರಮ ಬೆಟ್ಟದಷ್ಟು. ಇನ್ನು ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ಈ ಸಿನಿಮಾದ ಕೊನೆಯ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಸಬೇಕು ಎಂದು ಅಶ್ವಿನಿ ಅವರು ಈ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಿದ್ದರು.

ಇನ್ನು ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಕಲಾವಿದರು ಸಹ ಭಾಗಿಯಾಗಿದ್ದರು. ಇನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕೂಡ ವಿಡಿಯೋ ಕಾಲ್ ಮೂಲಕ ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತವೇ ಅಪ್ಪು ಅವರ ಪುಣ್ಯ ಕಾರ್ಯಕ್ರಮಕ್ಕೆ ಸಾತ್ ಕೊಟ್ಟಿದೆ. ಅಪ್ಪು ಅವರ ಕಿರಿಯ ಪುತ್ರಿ ವಂದಿತಾ ಮಾತ್ರ ಕಾಣಿಸಿಕೊಳ್ಳುತ್ತಿದ್ದರು, ಇನ್ನು ಹಿರಿಯ ಮಗಳು ಎಲ್ಲಿ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಇನ್ನು ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ವಿದೇಶದಲ್ಲಿ ಹಿರಿಯ ಮಗಳು ವಿದ್ಯಾಭ್ಯಾಸ ಮಾಡುತ್ತಿರುವ ಕಾರಣ ರಜೆ ಇರುವ ಸಂದರ್ಭದಲ್ಲಿ ಮಾತ್ರ ಬೆಂಗಳೂರಿಗೆ ಬರುತ್ತಾರೆ. ಗಂಧದಗುಡಿ ಸಿನಿಮಾ ಬಿಡುಗಡೆಯ ದಿನ ತಂದೆಯ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದರೆ ದೃತಿ ಒಂದು ಅಥವಾ ಎರಡು ವರ್ಷ ಮಗು ಇರಬಹುದು.

ಈ ಫೋಟೋ ಹಂಚಿಕೊಂಡು ಬಿಳಿ ಬಣ್ಣದ ಹಾರ್ಟ್ ಹಾಕಿದ್ದಾರೆ. ಅಪ್ಪು ಪುಣ್ಯಸ್ಮರಣೆಯ ದಿನ ಗಂಧದಗುಡಿ ಸಿನಿಮಾ ವೀಕ್ಷಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಗಂಧದಗುಡಿ ಟೈಟಲ್ ಫೋಟೋ ಹಂಚಿಕೊಂಡಿದ್ದರು. ತಂದೆ ಕಳೆದುಕೊಂಡ ಮಕ್ಕಳ ಮನಸ್ಸಿಗೆ ಆ ದೇವರೇ ಶಕ್ತಿ ನೀಡಲಿ. ಇನ್ನು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *