ಕೆಜಿಎಫ್ ಚಿತ್ರದ ತಾತಾ ಇಂದು ಚಿಕಿಸ್ತೆ ಫಲಕಾರಿ ಆಗದೆ ಅಸು ನೀಗಿದ್ದಾರೆ! ಮುಗಿಲು ಮುಟ್ಟಿದ ಆಕ್ರಂದನ!!

ಸಿನಿಮಾ ಲೋಕ ದೂರದಿಂದ ನೋಡುವುದಕ್ಕೆ ಬಣ್ಣ ಬಣ್ಣಗಳಿಂದ ಕೂಡಿರುತ್ತವೆ. ಆದರೆ ಇದರ ಒಳಗಿನ ಅಸಲಿ ಬಣ್ಣಗಳ ಬಗ್ಗೆ ದೂರದಿಂದ ನೋಡುವವರಿಗೆ ತಿಳಿಯುವುದಿಲ್ಲ. ಈ ಲೋಕದಲ್ಲಿ ಬಣ್ಣ ಬಣ್ಣದ ಕನಸುಗಳನ್ನು ಹೊತ್ತುಕೊಂಡು ಈ ಲೋಕಕ್ಕೆ ಅನೇಕರು ಎಂಟ್ರಿ ಕೊಟ್ಟಿದ್ದಾರೆ. ಎಂಟ್ರಿ ಕೊಟ್ಟ ಮಾತ್ರಕ್ಕೆ ಎಲ್ಲರೂ ಯಶಸ್ಸು ಸಿಗಬೇಕು ಎಂದು ಹೇಳುವುದು ಕಷ್ಟ. ಹೌದು, ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ.

ಈ ಸಿನಿಮಾ ಲೋಕದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಕನಸು ಕಂಡವರು ಅನೇಕರು ಇದ್ದಾರೆ. ಕೆಲವರು ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅದಲ್ಲದೆ ಈ ಭಾರತೀಯ ಸಿನಿಮಾರಂಗವು ಬಹು ಎತ್ತರಕ್ಕೆ ಬೆಳೆದು ನಿಂತಿದೆ. ಇದಕ್ಕೆ ಅನೇಕ ನಟ ನಟಿ, ನಿರ್ದೇಶಕ, ನಿರ್ಮಾಪಕ ಹಾಗೂ ಸಿನಿಮಾ ತಂತ್ರಜ್ಞರ ಪರಿಶ್ರಮ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ಹಿಂದೆ ಕೆಜಿಎಫ್ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಬಹುದೊಡ್ಡ ಮಟ್ಟಿಗೆ ಅಲೆಯನ್ನು ಸೃಷ್ಟಿಸಿತ್ತು. ಹೌದು, ಕೆಜಿಎಫ್ 2 ಸಿನಿಮಾವು ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಸಿದ ಹವಾ ಅಂತಿದ್ದದ್ದಲ್ಲ. ಈ ಸಿನಿಮಾದ ನಂತರ ಯಶ್ ಅವರ ಬೇಡಿಕೆ ಮಾತ್ರವಲ್ಲದೇ, ಈ ಸಿನಿಮಾದಲ್ಲಿ ಪಾತ್ರ ಮಾಡಿದ ಎಲ್ಲರ ಬೇಡಿಕೆಯೂ ಹೆಚ್ಚಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ತೂಕವಿತ್ತು.

ಕೆಜಿಎಫ್ 1 ಹಾಗೂ ಕೆಜಿಎಫ್ 2 ಖ್ಯಾತಿಯ ತಾತ ಕೃಷ್ಣಾಜಿ ರಾವ್ ಅವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ. ಸದ್ಯಕ್ಕೆ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯ ನಟರಾಗಿರುವ ಗುರುತಿಸಿಕೊಂಡಿರುವ ಕೃಷ್ಣಾಜಿ ರಾವ್ ಅವರಿಗೆ 70 ವರ್ಷ ವಯಸ್ಸಾಗಿದೆ. ನಿನ್ನೆ(ಬುಧವಾರ) ತಡರಾತ್ರಿ ಮನೆಯಲ್ಲಿ ಸುಸ್ತಾಗಿ ಕೃಷ್ಣಾಜಿ ರಾವ್​ ಬಿದ್ದಿದ್ದಾರೆ. ಹೀಗಾಗಿ ಅವರ ಕುಟುಂಬಸ್ಥರು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃಷ್ಣಾಜಿಯವರಿಗೆ ಲಂಗ್ಸ್​ಗೆ ಸೋಂಕು ತಗುಲಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಆದರೆ ವಿಧಿಯ ಆಟಕ್ಕೆ ಇಂದು ಅಸು ನೀಗಿದ್ದಾರೆ.

ಕೆಜಿಎಫ್ ತಾತ ಎಂದೇ ಫೇಮಸ್ ಆಗಿರುವ ಸ್ಯಾಂಡಲ್​​ವುಡ್ ನಟ ಕೃಷ್ಣ ಜಿ ರಾವ್ ಅವರು ಕೆಜಿಎಫ್ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದರು. ನ್ಯಾನೋ ನಾರಾಯಣಪ್ಪ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು, ಕೃಷ್ಣಾಜಿಯವರು ತುಮಕೂರಿನ ಪಾವಗಡ ಮೂಲದ ರಾವ್ ಸುಮಾರು ನಾಲ್ಕು ದಶಕಗಳಿಂದ ಸ್ಯಾಂಡಲ್‌ವುಡ್‌ ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನ್ಯಾನೋ ನಾರಾಯಣಪ್ಪ ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಈ ಹಿಂದೆ ನಟಿಸಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದ ಕೃಷ್ಣಾಜಿಯವರು, ” ನಾನು ನನ್ನ ಗುರು ಎಂದು ಗೌರವಿಸುವ ಶಂಕರ್ ನಾಗ್ ಅವರ ಬಳಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ಕನ್ನಡ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ. ಆದರೆ ಕೆಜಿಎಫ್ ನನಗೆ ಖ್ಯಾತಿ ತಂದುಕೊಟ್ಟಿತು ಎಂದಿದ್ದರು ನಟ. ಈ ಸಿನಿಮಾದಲ್ಲಿ ನಾಯಕನಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಿರ್ದೇಶಕ ಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದರು. ಒಟ್ಟಿನಲ್ಲಿ ಇಳಿ ವಯಸ್ಸಿನಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ತನ್ನ ಕನಸನ್ನು ಈಡೇರಿಸಿಕೊಂಡಿರುವ ಕೃಷ್ಣ ಅವರು ಇಂದು ಅಸು ನಿಗಿದ್ದಾರೆ.

Leave a Reply

Your email address will not be published. Required fields are marked *