ಕಾಸ್ಟಿಂಗ್ ಕೌಚ್ ಬಗ್ಗೆ ತಮಗಾದ ಅನುಭವದ ಬಗ್ಗೆ ಇಂಚಿಚು ಮಾಹಿತಿ ಹೊರ ಹಾಕಿದ ಬಿಗ್ ಬಾಸ್ ಖ್ಯಾತಿಯ ಸಾನ್ಯ ಅಯ್ಯರ್! ಆಗಿದ್ದೇನು ನೋಡಿ!!

sannya iyer biggboss : ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟವರು ಸಾನ್ಯಾ ಅಯ್ಯರ್. ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಪ್ರೇಕ್ಷಕ ವರ್ಗಕ್ಕೆ ಮನೋರಂಜನೆ ನೀಡಿದ್ದಾರೆ. ಹೌದು, ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ನಂತರ ಬಿಗ್ ಬಾಸ್ ಒಟಿಟಿ ಸೀಸನ್ 1 ಅದಾಗ ನಂತರ ಟಿವಿ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಸಿದ್ದಾರೆ. 18 ಸ್ಪರ್ಧಿಗಳಿರುವ ಈ ರಿಯಾಲಿಟಿ ಶೋನಲ್ಲಿ ಹೊರ ಬಂದ 6ನೇ ಸ್ಪರ್ಧಿ ಸಾನ್ಯಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.

ಇನ್ನು ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಹಾಗೂ ರೂಪೇಶ್ ಶೆಟ್ಟಿ ಸದಾ ಸುದ್ದಿಯಲ್ಲಿದ್ದರು. ಆದರೆ ಇದೀಗ ಸಾನ್ಯ ಹೊರ ಬರುತ್ತಿದ್ದಂತೆ ಸಂದರ್ಶನ -ಫೋಟೋಶೂಟ್ ಅಂತ ಸಖತ್ ಬ್ಯುಸಿಯಾಗಿದ್ದಾರೆ. ಖಾಸಗಿ ವಾಹಿನಿಗಳಿಗೆ ಸಂದರ್ಶನ ನೀಡುವ ಮೂಲಕ ಬ್ಯುಸಿಯಾಗಿರುವ ಸಾನ್ಯ ಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿರುವ ಸಾನ್ಯ ಅಯ್ಯರ್, ತಮ್ಮ ಜೀವನದ ಒಂದಷ್ಟು ಕಹಿ ಘಟನೆಗಳನ್ನು ನೆನಪಿಸಿಕೊಂಡು ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವವನ್ನು ಹೇಳಿದ್ದಾರೆ.

ಅಂದಹಾಗೆ ಸಾನ್ಯ ಅಯ್ಯರ್, ‘ನನ್ನ ಜೀವನದಲ್ಲೂ ಕಾಸ್ಟಿಂಗ್ ಕೌಚ್ ಕಹಿ ಅನುಭವ ಆಗಿದೆ. ನಾನು ಎಲ್ಲವನ್ನೂ ಮೆಟ್ಟಿ ನಿಂತಿದ್ದೀನಿ. ಯಾರ ಮಾತಿಗೂ, ಯಾವ ನೆಗೆಟಿವ್ ವಿಚಾರಕ್ಕೂ ತಲೆಕೆಡಿಸಿಕೊಳ್ಳಲ್ಲ’ ಎಂದು ನೇರವಾಗಿ ಮಾತನಾಡಿದ್ದಾರೆ.ಸಾನ್ಯ ಅಯ್ಯರ್. ಇನ್ನು ಒಳ್ಳೆ ಸಿನಿಮಾ ಅವಕಾಶ ಸಿಕ್ಕರೆ ಹೀರೋಯಿನ್ ಲೈಫ್ ಗೆ ಎಂಟ್ರಿ ಕೊಡಲು ಸಾನ್ಯ ಅಯ್ಯರ್ ಭರ್ಜರಿ ತಯಾರಿ ನಡೆಸುತ್ತಿದ್ದಾರೆಯಂತೆ.

ಹೀಗಾಗಿ ಸಾನ್ಯ ಅಯ್ಯ ಅವರಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಯೋಜನೆ ಇರುವುದು ಪಕ್ಕಾ. ಬಿಗ್ ಬಾಸ್ ಮನೆಯಿಂದ ಹೊರ ಬಳಿಕ ಸಾನ್ಯ ಸುದ್ದಿಯಾಗಿರುವುದು ಇನ್ನೊಂದು ವಿಚಾರಕ್ಕಾಗಿ. ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋವೊಂದರಲ್ಲಿ ಮಹಿಷಾಸುರ ಮರ್ದಿನಿ ರೂಪದಲ್ಲಿ ದೇವಿ ವೇಷ ಧರಿಸಿ ಸಾನ್ಯ ಅಯ್ಯರ್ ನೃತ್ಯ ಮಾಡಿದ್ದಾರೆ. ಶೋ ಶುರುವಾಗುವ ಮುನ್ನ ಅಲಂಕಾರ ಮಾಡಿಕೊಂಡು ಕುಳಿತಿದ್ದ ಸಾನ್ಯ ಮೇಲೆ ದೇವಿ ಆವಾಹನೆಯಾಗಿದೆ.

sannya iyer biggboss
sannya iyer biggboss

ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರು ವಿಡಿಯೋದಲ್ಲಿ ಸಾನ್ಯ ವಿಚಿತ್ರವಾಗಿ ವರ್ತಿಸಿದ್ದಾರೆ. ಸಾನ್ಯಳ ವರ್ತನೆ ಕಂಡು ಸೆಟ್‌ನಲ್ಲಿದ್ದವರು ಗಾಬರಿಗೊಂದು ನೀರು ಕುಡಿಸಿ ಸಮಾಧಾನ ಮಾಡಿದ್ದಾರೆ. ಆದರೆ ಆ ವೇಳೆಯಲ್ಲಿ ಹತ್ತಿರ ಬರಬೇಡಿ ದೂರ ನಿಲ್ಲಿ ಎಂದು ಸಾನ್ಯ ಹೇಳುತ್ತಿದ್ದ ಮಾತುಗಳನ್ನು ಕೇಳಿ ತಾಯಿ ಗಾಬರಿಗೊಂದು ಆದಷ್ಟು ಬೇಗ ಎಪಿಸೋಡ್ ಚಿತ್ರೀಕರಣ ಮುಗಿಸಿದ್ದಾರೆ. ಶೂಟ್ ನಡೆದು ವೇಷ ಮತ್ತು ಮೇಕಪ್ ತೆಗೆದ ಮೇಲೆ ಸಾನ್ಯ ನಾರ್ಮಲ್ ಆಗಿದ್ದಾರೆ.

ಬೀಚ್ ನಲ್ಲಿ ಬಿಕಿನಿಯಲ್ಲಿ ಕೆಜಿಎಫ್ ನಟಿಯ ಅವತಾರ ನೋಡಿ ಸುಸ್ತಾದ ಪ್ರವಾಸಿಗರು! ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ ನೋಡಿ!!

ಇನ್ನು, ನೃತ್ಯ ಮಾಡುವಾಗಲು ಸಾನ್ಯ ಕೈಗೆ ತ್ರಿಶೂಲ ಕೊಡಲು ತಂಡವರು ಹೆದರಿಕೊಂಡಿದ್ದಾರೆ. ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯ ಜೊತೆಗೆ ಮಾತನಾಡಿರುವ ಸಾನ್ಯ ತಾಯಿ ದೀಪಾ, ‘ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಸಾನ್ಯ ವೇಷ ಧರಿಸಿಕೊಂಡಾಗ ವರ್ತನೆ ನೋಡಿ ನನಗೆ ಶಾಕ್ ಆಯ್ತು. ಅಲ್ಲಿದ್ದವರು ಗಾಬರಿ ಆದರು. ಸಾನ್ಯ ತುಂಬಾ ಮೆಚ್ಯೂರ್ ಆಗಿ ಮಾತನಾಡುವ ಹುಡುಗಿ ನಾವೆಲ್ಲರೂ ಆಕೆಯನ್ನು ಅಜ್ಜಿ ಅಂತಾನೇ ರೇಗಿಸುತ್ತೇವೆ.

ದೇವಿ ವೇಷ ಧರಿಸುವ ನಿರ್ಧಾರ ಆದಾಗಲೇ ಆಗ ದೇವಿಯನ್ನು ಮೈ ಮೇಲೆ ಆವಾಹನೆಯಾಗುವಂತೆ ಬೇಡಿಕೊಳ್ಳುತ್ತಿದ್ದಳ. ಸಾನ್ಯ ಮತ್ತು ನಾನು ದೀಕ್ಷೆ ತೆಗೆದುಕೊಂಡಿದ್ದೇವೆ. ಹಾಗಂತ ಆಕೆ ಸನ್ಯಾಸತ್ವ ತೆಗೆದುಕೊಳ್ಳುತ್ತಾಳೆಂದು ಅರ್ಥವಲ್ಲ. ಯಾವುದು ಬೇಕು ಅದನ್ನು ಆಕೆ ಆಯ್ಕೆ ಮಾಡಿಕೊಳ್ಳಲಿ ಇದರಿಂದ ನನಗೆ ಖಂಡಿತ ಭಯ ಅಥವಾ ಬೇಸರ ಇಲ್ಲ, ಆಕೆಗೆ ಸಂಪೂರ್ಣ ಫ್ರೀಡಂ ಕೊಟ್ಟಿದ್ದೇನೆ’ ಎಂದಿದ್ದಾರೆ.

Leave a Reply

Your email address will not be published. Required fields are marked *