dk wife achievement :ನಮಸ್ತೆ ಪ್ರೀತಿಯ ವೀಕ್ಷಕರೆ ಕಾಮನ್ವೆಲ್ತ್ ನ 22 ನೇ ಆವೃತ್ತಿ ಮುಕ್ತಾಯವಾಗಿದೆ. ಇಂಗ್ಲೀಡ್ ನ ಬರ್ಮಿಗ್ಯಾಮ್ ನಲ್ಲಿ ಅದ್ದೂರಿಯಾಗಿ ನಡೆದ ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾ ಪಂದ್ಯಾವಳಿಯಲ್ಲಿ ಭಾರತ ನಿರೀಕ್ಷೆಯಂತೆಯೇ ಐತಿಹಾಸಿಕ ಸಾಧನೆ ಮಾಡಿದೆ. ಒಟ್ಟು 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕಗಳನ್ನು ಪಡೆದುಕೊಂಡು ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ಭಾರತದ ಕ್ರೀಡಾಪಟುಗಳು ಅದ್ಭುತವಾದ ಪ್ರದರ್ಶನವನ್ನು ಜಗತ್ತಿನೇದುರು ನೀಡಿದ್ದಾರೆ.
ಈ ಬಾರಿಯ ಕಾಮನ್ ವೆಲ್ತ್ ನಲ್ಲಿ ಮಹಿಳಾ ಆಟಗಾರರು ಸಾಕಷ್ಟು ಸಾಧನೆ ಮಾಡಿರುವುದು ಎಲ್ಲರ ಕ್ರೀಡಾ ಅವಿಮಾನಿಗಳ ಗಮನ ಸೆಳೆದಿದ್ದರೆ. ಟೀಮ್ ಇಂಡಿಯಾ ಕ್ರಿಕೆಟ್ ಗ ದಿನೇಶ್ ಕಾರ್ತಿಕ್ ಪತ್ನಿ, ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ದೀಪಿಕಾ ಮತ್ತು ಸೌರವ್ ಘೋಷಲ್ ಜೋಡಿ ಕಂಚಿನ ಪಡಕ್ಕಕ್ಕಾಗಿ ನಡೆದ ಪಂದ್ಯಾವನ್ನು ಗೆದ್ದುಕೊಂದಿತ್ತು. ಪತ್ನಿಯ ಸಾಧನೆ ಬಗ್ಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೆಮ್ಮೆಯಿಂದ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ನಿಮ್ಮಿಬ್ಬರ ಪ್ರಯತ್ನ, ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ’ ಎಂದು ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಮತ್ತು ಸೌರವ್ ಘೋಷಲ್ ಗೆ ಅಭಿನಂದನೆ ಸೂಚಿಸಿದ್ದಾರೆ. ಭಾರತ ತಂಡದ ವಿಕೆಟ್ ಕಿಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅವರನ್ನು 2015 ರಲ್ಲಿ ಮದುವೆಯಾಗಿದ್ದ 30 ವರ್ಷದ ದೀಪಿಕಾ ಪಳ್ಳಿಕಲ್, 2021ರ ಅಕ್ಟೋಬರ್ 18ರಂದು ದೀಪಿಕಾ ಪಳ್ಳಿಕಲ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ದಿನೇಶ್ ಕಾರ್ತಿಕ್ – ದೀಪಿಕಾ ದಂಪತಿ ತಮ್ಮ ಅವಳಿ ಮಕ್ಕಳಿಗೆ ಕಬೀರ್ ಮತ್ತು ಝಿಯಾನ್ ಎಂದು ನಾಮಕರಣ ಮಾಡಿದ್ದಾರೆ. ಮಕ್ಕಳು ಜನಿಸಿದ ಆರೇ ತಿಂಗಳಲ್ಲಿ ವಿಶ್ವ ಸ್ಕ್ವ್ಯಾಶ್ ಡಬಲ್ಸ್ ಚಾಂಪಿಯನ್ ಶಿಪ್ ನಲ್ಲಿ ದೀಪಿಕಾ ಎರಡು ಚಿನ್ನದ ಪದಕವನ್ನು ಗೆದ್ದಿದ್ದರು.
ಅತ್ತ ದಿನೇಶ್ ಕಾರ್ತಿಕ್ ತಮ್ಮ ಅದ್ಭುತವಾದ ಬ್ಯಾಟಿಂಗ್ ಹಾಗೂ ಕಿಪಿಂಗ್ ಪ್ರದರ್ಶನದಿಂದ ಇಡೀ ವಿಶ್ವವನ್ನೇ ಗೆದ್ದು ಕೊಂಡಿದ್ದಾರೆ ಇತ್ತ ತನ್ನ ಪತ್ನಿಯಿಂದ ದೇಶವನ್ನೇ ಮೆಚ್ಚಿಸಿದ್ದಾರೆ ಈ ಇಬ್ಬರೂ ನಮ್ಮ ಭಾರತದವರು ಎಂದು ಹೇಳಿಕೊಳ್ಳೊಕೆ ನಮಗೆ ನಿಜಕ್ಕೂ ಹೆಮ್ಮೆಯ ಅನ್ನಿಸುತ್ತದೆ. ಇವರ ಈ ಕ್ರೀಡಾ ಉತ್ಸಹ ಇನ್ನಷ್ಟು ಹೆಚ್ಚಲಿ ಮತ್ತಷ್ಟು ನಮ್ಮ ದೇಶಕ್ಕೆ ಕೀರ್ತಿ ತಂದುಕೊಡಲಿ. ಇವರ ಸಾಧನೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎನ್ನುತ್ತಾ ಈ ದಂಪತಿಗಳಿಗೆ ಧನ್ಯವಾದಗಳು ತಿಳಿಸುತ್ತ ಈ ಮಾಹಿತಿ ನಿಮಗೆ ಇಷ್ಟಾವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.