ಕಾಂತಾರ ಹೀರೋ ರಿಷಬ್ ಶೆಟ್ಟಿ ಹಾಗು ಮುದ್ದಿನ ಹೆಂಡ್ತಿ ಪ್ರಗತಿ ಶೆಟ್ಟಿ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ..

ನಮಸ್ತೆ ಪ್ರೀತಿಯ ವೀಕ್ಷಕರೆ ಸದ್ಯ ದೇಶಾದಾದ್ಯಂತ ಕಾಂತರಾ ಸಿನೆಮಾದ ಯಶಸ್ಸಿನ ಉತ್ತುಂಗದಲ್ಲಿರುವಂತಹ ರಿಷಬ್ ಶೆಟ್ಟಿಯವರು ಒಂದಲ್ಲ ಒಂದು ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಲೇ ಇದ್ದು ಹೀಗಿರುವಾಗ ಸದ್ಯ ರಿಷಬ್ ಶೆಟ್ಟಿ ಅವರ ವೈಯಕ್ತಿಕ ವಿಚಾರ ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಅವರ ಪತ್ನಿ ಯಾರು? ಅವರ ಪ್ರೀತಿ ಆರಂಭ ಅಗಿದ್ದು ಹೇಗೆ? ಅವರಿಬ್ಬರ ನಡುವೆ ಇರುವಂತಹ ವಯಸ್ಸಿನ ಅಂತರ ಎಷ್ಟು ಎಂಬ ಎಲ್ಲ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ ಬನ್ನಿ.
ಒಮ್ಮೆ ರಿಷಬ್ ಶೆಟ್ಟಿ ಅವರ ನಿರ್ದೇಶನದ ಸಿನೆಮಾ ಬಿಡುಗಡೆಯಾಗಿತ್ತು. ಹೌದು ಅಂದು ರಿಷಬ್ ಶೆಟ್ಟಿ ಅವರು ತಮ್ಮ ಸಿನೆಮಾ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೇ ತಿಳಿದುಕೊಳ್ಳಲು ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಅಂದಿನ ದಿನವೇ ಅವರ ಪತ್ನಿಯಾದ ಪ್ರಕೃತಿಯವರು ಸಹಿತ ಸಿನೆಮಾ ನೋಡಲು ಬಂದಿದ್ದರು. ಇವರಿಬ್ಬರು ಎಂದು ಮುಖಮುಖಿಯಾಗಿರಲಿಲ್ಲ ಆದರೆ ಪ್ರಗತಿಯವರಿಗೆ ರಿಷಬ್ ಒಬ್ಬ ನಿರ್ದೇಶಕ ಎಂಬುದು ಮಾತ್ರ ತಿಳಿದಿತ್ತು. ಆದರೆ ಪ್ರಗತಿಯವರು ರಕ್ಷಿತ್ ಶೆಟ್ಟಿ ಅವರ ಅಭಿಮಾನಿ ಯಾಗಿದ್ದು ಅವರಿಗೋಸ್ಕರ ರಿಕ್ಕಿ ಸಿನೆಮಾವನ್ನು ನೋಡಲು ಬಂದಿದ್ದರು.

ಉಳಿದವರು ಕಂಡಂತೆ ಸಿನೆಮಾ ನೋಡಿದ ಮೇಲೆ ಪ್ರಗತಿಯವರಿಗೆ ರಕ್ಷಿತ್ ಶೆಟ್ಟಿ ಅವರು ಬಹಳ ಇಷ್ಟವಾಗಿದ್ದು ಆದ್ದರಿಂದ ರಿಕ್ಕಿ ಸಿನೆಮಾ ನೋಡಲು ಅವರೊಡನೆ ಇದ್ದ ಮಂಗಳೂರು ಗ್ಯಾಂಗ್ ಜೊತೆ ಸಿನೆಮಾಗೆ ಬಂದಿದ್ದರಂತೆ. ಆ ಸಮಯದಲ್ಲಿ ಚಿತ್ರಮಂದಿರಕ್ಕೆ ಬಂದಿದ್ದ ರಿಷಬ್ ಅವರನ್ನು ನೋಡಿ ಇವರು ಉಳಿದವರು ಕಂಡಂತೆ ಸಿನೆಮಾದಲ್ಲಿ ನಟನೆ ಮಾಡಿದ್ದಾರೆ ಅಲ್ವಾ? ಎಂದು ತನ್ನ ಗೆಳತಿಯ ಬಳಿ ವಿಚಾರಿಸಿಕೊಂಡಿದ್ದರಂತೆ.

ರಿಕ್ಕಿ ಸಿನೆಮಾದ ಬಿಡುಗಡೆಯ ಸಮಯದಲ್ಲಿ ಎಲ್ಲಾ ಚಿತ್ರಮಂದಿರಗಳು ಹೌಸ್ಫುಲ್ ಪ್ರದರ್ಶನ ಕಾಣುತಿತ್ತು. ಸಿನೆಮಾ ಮುಗಿದ ಮೇಲೆ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಹತ್ತಿರ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುತ್ತಿದ್ದರೇ ಇತ್ತ ರಿಷಬ್ ಶೆಟ್ಟಿವರನ್ನು ಮಾತನಾಡಿಸುವವರ ಸಂಖ್ಯೆ ಕಮ್ಮಿ ಇತ್ತು. ಯಾಕೆಂದರೆ ಆಸಮಯದಲ್ಲಿ ರಿಷಬ್ ಅವರು ಅಷ್ಟು ಖ್ಯಾತರಾಗಿರಲಿಲ್ಲ ಹಾಗೂ ಸಿನೆಮಾ ಬಿಡುಗಡೆಯ ಯೋಚನೆಯಲ್ಲಿ ಗಡ್ಡವನ್ನು ಬಿಟ್ಟು ವಡ್ಡನಂತೆ ಕಾಣುತ್ತಿದ್ದರು. ಆದರು ಕೆಲವೊಂದು ಪ್ರೇಕ್ಷಕರು ಇವರು ನಿರ್ದೇಶಕರು ಎಂದು ಗುರುತಿಸಿ ಮಾತನಾಡಿಸಲು ಬರುತ್ತಿದ್ದರಂತೆ ಆ ಸಾಲಿನಲ್ಲಿ ಪ್ರಗತಿ ಕೂಡ ಒಬ್ಬರು.

ಆದರೆ ಪ್ರಗತಿ ಅವರು ರಿಷಬ್ ಗೆ ಆಗಲೇ ಮದುವೆಯಾಗಿದೆ ಎಂದು ಅಂದುಕೊಂಡಿದ್ದರಂತೆ. ಸ್ನೇಹಿತರೋಡನೆ ರಿಷಬ್ ಅವರ ಬಳಿ ಬಂದ ಪ್ರಗತಿ ಪರ್ವಾಗಿಲ್ಲ ನಮ್ ಊರಿನವರೆಲ್ಲ ಶೈನ್ ಆಗುತ್ತೀರಾ ಎಂದು ಪ್ರಸಾಂಸೆಯ ಮಾತನಾಡಿದ್ದು ಎಲ್ಲೋ ನೋಡುತ್ತಿದ್ದ ರಿಷಬ್ ಅವರು ಈ ಮಾತನ್ನು ಕೇಳಿ ಪಟ್ ಅಂತಾ ಪ್ರಗತಿ ಯ ಕಡೆ ನೋಡಿದ್ದಾರೆ. ಆವಾಗ್ಲೇ ನೋಡಿ ನಮ್ ರಿಷಬ್ ಅವರಿಗೆ ಲವ್ ಅಟ್ ಫಸ್ಟ್ ಸೈಟ್ ಅಗಿದ್ದು ಪ್ರಗತಿಯವರ ಸ್ನೇಹಿತೆ ಅರ್ಪಿತಾ ಎನ್ನುವವರು ಮಾತನಾಡುತ್ತಾ ಸಿನೆಮಾದಲ್ಲಿ ಪ್ರಗತಿ ಅವರಿಗೂ ಒಂದು ಅವಕಾಶ ಕೊಡಿ ಎಂದು ಕೇಳಿದ್ದು ಆಡಿಷನ್ ಅಟೆಂಡ್ ಮಾಡಿ ಎಂದು ಹೇಳಿ ರಿಷಬ್ ಮೆಟ್ಟಿಲು ಇಳಿಯುತ್ತ ಹೋರಾಡುತ್ತಿದ್ದರಂತೆ.

ನಂತರ ಮನಸ್ಸಿನಲ್ಲಿ ಪ್ರಗತಿಯನ್ನು ಎಲ್ಲೋ ನೋಡಿರಬಹುದು ಎಂದು ಯೋಚಿಸುತ್ತಾ ಫೇಸ್ ಬುಕ್ ನಲ್ಲಿ ನೋಡಿರಬೇಕು ಅಂದುಕೊಂಡು ಹುಡುಕಾಟ ಶುರು ಮಾಡಿದ್ದಾರೆ. ಸತತವಾಗಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದವರೇನೆಲ್ಲಾ ಹುಡುಕಲು ಪ್ರಾರಂಭಿಸಿದ ರಿಷಬ್ ಅವರಿಗೆ ಹೇಗೋ ಪ್ರಗತಿಯ ಫೇಸ್ಬುಕ್ ಖಾತೆ ಸಿಕ್ಕಿದೆ. ಹೀಗೆ ಸುಮಾರು ದಿನಗಳು ಇಬ್ಬರು ಫೇಸ್ಬುಕ್ ನಲ್ಲಿ ಮಾತುಕಥೆ ಶುರುಮಾಡಿದ್ದು ಹೀಗೆ ಕಿರಿಕ್ ಪಾರ್ಟಿ ರಿಲೀಸ್ ಸಮಯದಲ್ಲಿ ಪ್ರಗತಿ ಅವರು ಅಲ್ ದಿ ಬೆಸ್ಟ್ ಎಂದು ಮೆಸೇಜ್ ಮಾಡಿದ್ದರಂತೆ ತಕ್ಷಣ ರಿಷಬ್ ನಿಮ್ಮ ನಂಬರ್ ಕೊಡಿ ಎಂದು ಕೇಳಿದ್ದಾರೆ.

ದಿನ ಕಳೆದ ಮೇಲೆ ಒಬ್ಬರನೊಬ್ಬರು ನೋಡಬೇಕು ಎಂದು ಒಂದೆಡೆ ಮೀಟ್ ಆಗಿದ್ದಾರೆ ಮೀಟ್ ಮಾಡಲು ರಿಷಬ್ ಕರೆದಾಗ ಪ್ರಗತಿ ಮೊದಲು ಅವರ ಬ್ಯಾಗ್ ಗ್ರೌಂಡ್ ತಿಳಿದು ನಂತರ ಯೋಚಿಸಿ ಮೀಟ್ ಮಾಡಲು ಹೋದರಂತೆ. ತದ ನಂತರ ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಬೇಕೆಂದು ಮಾತನಾಡಿದ್ದಾರೆ. ಆದರೆ ಪ್ರಗತಿ ಅವರ ಮನೆಯಲ್ಲಿ ಸಿನೆಮಾದವರಿಗೆ ಮದುವೆ ಮಾಡಿ ಕೊಡಲ್ಲ ಎಂದು ಹೇಳಿದ್ದಾರಂತೆ.

ಆದರೆ ರಿಷಬ್ ಅವರ ಬಗ್ಗೆ ಸರಿಯಾಗಿ ವಿಚಾರಿಸಿಕೊಂಡು ಪೋಷಕರು ತಮ್ಮ ಮಕ್ಕಳ ಆಸೆಯಂತೆ ಮದುವೆಯಾಗಲು ಒಪ್ಪಿದ್ದಾರೆ. ರಿಷಬ್ ಶೆಟ್ಟಿಯವರು ಫೆಬ್ರವರಿ 9ನೇ ತಾರೀಕು 2017 ರಂದು ಪ್ರಗತಿ ಶೆಟ್ಟ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಲಿಟ್ಟಿದ್ದು ಇವರಿಬ್ಬರ ಪ್ರೀತಿಗೆ ಸಾಕ್ಷಿ ಒಂದು ಗಂಡು ಒಂದು ಹೆಣ್ಣು ಮಗು ಕೂಡ ಇದ್ದಾರೆ.

ಇನ್ನು ರಿಷಬ್ ಶೆಟ್ಟಿ ಅವರಿಗೆ ವಯಸ್ಸು 39 ಆದರೆ ಪ್ರಗತಿಶೆಟ್ಟಿ ಅವರಿಗೆ 37 ವರ್ಷ ವಯಸ್ಸಾಗಿದೆ. ಹೀಗಾಗಿ ಇವರಿಬ್ಬರ ನಡುವೆ ಕೇವಲ ಎರಡು ವರ್ಷ ವಯಸ್ಸಿನ ಅಂತರವಿರುವ ಕಾರಣ ಇವರಿಬ್ಬರ ನಡುವೆ ಹೊಂದಾಣಿಕೆ ಎಂಬುದು ಬಹಳ ಚನ್ನಾಗಿದ್ದು ಪ್ರಗತಿ ಶೆಟ್ಟಿ ಅವರು ಗಂಡನ ಯಶಸ್ವಿಗೆ ಕಾರಣವಾಗಿದ್ದಾರೆ. ಎಂದರೆ ಖಂಡಿತ ತಪ್ಪಾಗಲಾರದು. ಈ ಮಾಹಿತಿಯ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *