ಕಾಂತಾರ ಸಿನೆಮಾಗೆ ರಿಷಬ್ ಶೆಟ್ಟಿ, ಕಿಶೋರ್ ಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ… ಅಬ್ಬಬ್ಬಾ ಯಾವ ಬಾಸ್ ಗೂ ಕಮ್ಮಿ ಇಲ್ಲ ನೋಡಿ

ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಕಂಠದ ಮೂಲಕ ಅದೆಷ್ಟೋ ಸಿನಿಮಾಗಳಲ್ಲಿ ಗುಡುಗಿದಂತಹ ನಟ ಕಿಶೋರ್ ಅವಕಾಶಗಳ ಕೊರತೆಯಿಂದಾಗಿ ಸಿನಿಮಾ ರಂಗವನ್ನು ತೊರೆದು ಕೃಷಿಯಾ ಕಡೆಗೆ ಮುಖಮಾಡಿ ವ್ಯವಸಾಯ ಮಾಡಲು ಪ್ರಾರಂಭಿಸಿದರು. ಇದೀಗ ಮತ್ತೊಮ್ಮೆ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ ಎನ್ನಬಹುದು. ಕಿಶೋರ್ ಈ ಸಿನಿಮಾದಲ್ಲಿ ನಟಿಸಲು ಪಡೆದಿರುವ ಸಂಭಾವನೆ ಎಷ್ಟು ಪಡೆದುಕೊಂಡಿದ್ದಾರೆ ತಿಳಿದುಕೊಳ್ಳಬೇಕಾ ಈ ಲೇಖನ ವನ್ನು ಸಂಪೂರ್ಣವಾಗಿ ಮುಂದೆ ಓದಿ. ಕನ್ನಡ ಸಿನಿಮಾದ ಕಡಕ್ ನಟ ಎಂದೊಡನೆ ನೆನಪಿಗೆ ಬರುವುದು ಕಿಶೋರ್.

ಇವರು ಮೂಲತಃ ರಾಮನಗರದ ಚನ್ನಪಟ್ಟಣ ಜಿಲ್ಲೆಯವರು. ಚಿಕ್ಕಂದಿನಿಂದಲೂ ನಟನೆಯ ಮೇಲೆ ಬಹಳ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಪದವಿ ಪಡೆದು ನಾಟಕ ತರಬೇತಿ ಪಡೆಯಬೇಕೆಂದು ಕಂಪನಿಯೊಂದಕ್ಕೆ ಸೇರಿಕೊಳ್ಳುತ್ತಾರೆ. ಹೀಗೆ ರಂಗಭೂಮಿಯ ಮೂಲಕ ನಟನೆಯ ಕುರಿತು ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡು ಬಳಿಕ ಅವಕಾಶಕ್ಕಾಗಿ ಹುಡುಕಾಡುತ್ತಿದ್ದ ಸಂದರ್ಭ ಕಿಶೋರ್ ಅವರಿಗೆ ಸೂಕ್ತವಾದ ಆಫರ್ ಸಿಗದ ಕಾರಣ ಶಿಕ್ಷಕನಾಗಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದರು.

ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದುಕೊಂಡು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಉಪನ್ಯಾಸ ಮಾಡುವವುದರ ಜೊತೆಗೆ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡಿದರು.ಇವರು ಕಾಲೇಜ್‌ ಥಿಯೇಟರ್‌ಗಳಲ್ಲಿ ನಾಟಕ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಕನ್ನಡದ ‘ಕಂಠಿ’ ಸಿನಿಮಾ ಆರಂಭವಾಗಿತ್ತು. ಅಲ್ಲಿದ್ದ ಇವರ ಸ್ನೇಹಿತನ ಕಡೆಯಿಂದ ಇವರಿಗೆ ಆಕಸ್ಮಿಕವಾಗಿ ಅಭಿನಯಿಸಲು ಅವಕಾಶ ಸಿಗುತ್ತದೆ. ಅಂದಿನಿಂದ ಇವರ ಸಿನಿಮಾ ಜೀವನ ಮುಂದುವರೆಯಿತು.

ಹೀಗೆ ಇವರು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಇವರು ನಟಿಸಿ ಸೈ ಎನಿಸಿಕೊಂಡಿದ್ದಾರೆ.ನಂತರ ಅಲ್ಲು ಅರ್ಜುನ್ ಅವರೊಡನೆ ಹ್ಯಾಪಿ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುವ ಮೂಲಕ ಟಾಲಿವುಡ್ ಮಂದಿಯ ಮನಸ್ಸನ್ನು ಕೂಡಾ ಗೆದ್ದರು. ನಾಯಕ ನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ಬಹಳಷ್ಟು ಪ್ರಖ್ಯಾತಿ ಪಡೆದಂತಹ ನಟ ಕಿಶೋರ್ ಅವಕಾಶಗಳ ಕೊರತೆ ಉಂಟಾಯಿತು.

ನಂತರ 2004 ರಲ್ಲಿ ಶ್ರೀ ಮುರಳಿ ಅವರ ‘ಕಂಠಿ’ ಸಿನಿಮಾದ ಮೂಲಕ ಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ. ‘ಕಂಠಿ’ ಸಿನಿಮಾದಲ್ಲಿ ಇವರ ಅತ್ಯದ್ಭುತ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ ಬೆನ್ನೆಲ್ಲೇ ಪುನೀತ್ ರಾಜಕುಮಾರ್ ಅವರೊಡನೆ ಆಕಾಶ್, ಡೆಡ್ಲಿಸೋಮ, ಕ್ಷಣಕ್ಷಣ, ದುನಿಯಾ, ‘ಇಂತಿ ನಿನ್ನ ಪ್ರೀತಿಯ’ ಹೀಗೆ ಸಾಲು ಸಾಲು ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಹೌದು ಮತ್ತೇ ಮರಳಿ ವ್ಯವಸಾಯ ಮಾಡುವ ಮೂಲಕ ಗದ್ದೆಯಲ್ಲಿ ಕೆಲಸ ಮಾಡಿ ಬೆವರು ಸುರಿಸಿ ಸಂತಸದ ಬದುಕನ್ನು ನಡೆಸುತ್ತಿದ್ದರು. ಇದೀಗ ಮತ್ತೆ ರಿಷಬ್ ಶೆಟ್ಟಿ ಅವರ ಒತ್ತಾಯದ ಮೇರೆಗೆ ‘ಕಾಂತಾರ’ ಸಿನಿಮಾದ ಖಡಕ್ ಅರಣ್ಯ ಅಧಿಕಾರಿ ಆಗಿ ಕಾಣಿಸಿಕೊಂಡಂತಹ ಕಿಶೋರ್ ವಿಮರ್ಶಕರಿಂದ ಮೆಚ್ಚುಗೆ ಒಳಗಾಗಿದ್ದಾರೆ.

ಅಷ್ಟೇ ಅಲ್ಲದೆ ಇವರ ಅಭೂತಪೂರ್ವ ಅಭಿನಯಕ್ಕೆ ಕನ್ನಡಿಗರು ದೇಶದದ್ಯಂತ ಬಹುಪರಾಕ್ ಹಾಕುತ್ತಿದ್ದು, ಈ ಒಂದು ಸಿನಿಮಾದಲ್ಲಿ ಅಭಿನಯಿಸಲು ಬರೋಬ್ಬರಿ 20 ಲಕ್ಷ ಸಂಭಾವನೆಯನ್ನು ಪಡೆದಿರುವ ಬಗ್ಗೆ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ನಟ ಕಿಶೋರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *