ನಮಸ್ತೆ ಪ್ರೀತಿಯ ವೀಕ್ಷಕರೆ ಸದ್ಯ ಪ್ರಪಂಚಾದಾದ್ಯಂತ ಕಾಂತಾರ ಸಿನಿಮಾದ ಅಬ್ಬರ ತುಂಬಾನೇ ಜೋರಾಗಿದ್ದು ತೆರೆಕಂಡಿದ್ದು ಮೂವತ್ತು ದಿನ ಪೂರೈಸಿರುವ ಕಾಂತಾರ ಈಗಾಗಲೇ ಇನ್ನೂರು ಕೋಟಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದು ಅಬ್ಬರಿಸುತ್ತಿದೆ. ಹೌದು ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಹಿಟ್ ಲಿಸ್ಟ್ ಸೇರಿರುವ ಕಾಂತಾರ ಚಿತ್ರವನ್ನು ತೆಲುಗು ಹಾಗು ಮಲಯಾಳಂ ಚಿತ್ರರಂಗದ ಹಲವಾರು ಸ್ಟಾರ್ ನಟನಟಿಯರು ಮೆಚ್ಚಿಕೊಂಡು ಹಾಡಿ ಹೊಗಳಿದ್ದಾರೆ.
ಇನ್ನು ತಮಿಳಿನ ಹಲವಾರು ಸ್ಟಾರ್ ಕಲಾವಿದರುಗಳು ಸಿನಿಮಾವನ್ನು ಮೆಚ್ಚಿಕೊಂಡಿದ್ದು ಮೊದಲಿಗೆ ಧನುಷ್ ರವರು ಕಾಂತರ ಸಿನಿಮಾ ವೀಕ್ಷಿಸಿ ಕಾಂತಾರ ಚಿತ್ರತಂಡವನ್ನು ಹಾಡಿ ಹೊಗಳಿದ್ದರು. ಇದರ ಬೆನ್ನಲ್ಲೇ ತಮಿಳು ನಟ ಕಾರ್ತಿ ಕೂಡಾ ಚಿತ್ರ ವೀಕ್ಷಿಸಿ ಖುದ್ದಾಗಿ ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದು ನಂತರ ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಚಿತ್ರ ವೀಕ್ಷಿಸಿ ಟ್ವೀಟ್ ಮಾಡುವ ಮೂಲಕ ಕಾಂತಾರ ಚಿತ್ರವನ್ನು ಹೊಗಳಿದ್ದರು.
ಅಷ್ಟು ಮಾತ್ರವಲ್ಲದೇ ಇದೀಗ ರಿಷಬ್ ಶೆಟ್ಟಿ ಹಾಗೂ ರಜನಿಕಾಂತ್ ವೈಯಕ್ತಿಕವಾಗಿ ಭೇಟಿಯಾಗಿದ್ದು ಈ ಭೇಟಿಯ ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಲ್ಲದೇ ರಿಷಭ್ ಶೆಟ್ಟಿಯವರಿಗೆ ಈ ವೇಳೆ ರಜನಿಕಾಂತ್ ಸನ್ಮಾನ ಮಾಡಿದ್ದು ಮಾತ್ರವಲ್ಲ ಚಿನ್ನದ ಸರವನ್ನ ಅವರ ಕುತ್ತಿಗೆಗೆ ಹಾಕಿದ್ದಾರೆ ಎನ್ನಲಾಗಿದೆ.
ರಜನಿಕಾಂತ್ ಹಾಗೂ ರಿಷಬ್ ಶೆಟ್ಟಿ ಪರಸ್ಪರ ಭೇಟಿಯಾಗಿರುವ ಪೋಟೋಗಳನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಗುರು ಹಾಗೂ ಶಿಷ್ಯ ಇಬ್ಬರೂ ಸಹ ಚರ್ಚೆಯಲ್ಲಿ ಮಗ್ನರಾಗಿದ್ದು ಒನ್ & ಓನ್ಲಿ ರಜಿನಿಕಾಂತ್ ನಮ್ಮ ಶಿವ ರಿಷಬ್ ಶೆಟ್ಟಿ ಜೊತೆಗೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದ ರಜನಿಕಾಂತ್ ರವರು ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು ಎಂಬುದನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಿತ್ರಕ್ಕಿಂತ ಬೇರೆ ಯಾರೂ ಕೂಡ ಸಿನಿಮಾ ಮೂಲಕ ಅಚ್ಚುಕಟ್ಟಾಗಿ ತೋರಿಸಲು ಸಾಧ್ಯವಿಲ್ಲ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿ ಯವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದ ರಜನಿಕಾಂತ್ ಕಾಂತಾರ ಚಿತ್ರ ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ ಎಂದಿದ್ದರು.
ಇನ್ನು ರಜನಿಕಾಂತ್ ಚಿತ್ರಗಳನ್ನು ಹಂಚಿಕೊಳ್ಳುವ ವೇಳೆ ಅವರದೇ ಚಿತ್ರದ ಡೈಲಾಗ್ ಅನ್ನು ಕೂಡ ಸ್ವಲ್ಪ ಚೇಂಜ್ ಮಾಡಿ ರಿಷಬ್ ಶೆಟ್ಟಿ ಬರೆದಿದ್ದರು. ನಾನು ಒಂದು ಸಾರಿ ಹೇಳಿದ್ರೆ ನೂರು ಸಾರಿ ಹೇಳಿದ ಹಾಗೆ ಎನ್ನುವ ರಜನಿ ಡೈಲಾಗ್‌ಅನ್ನು ನೀವು ಒಂದು ಸಲ ಹೊಗಳಿದ್ರೆ ನೂರು ಸಲ ಹೊಗಳ್ದಂಗೆ ನಮಗೆ.
ಧನ್ಯವಾದಗಳು ರಜನಿಕಾಂತ್ ಸರ್. ನಮ್ಮ ಕಾಂತಾರ ಚಿತ್ರ ನೋಡಿ ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ ಎಂದು ಬರೆದಿರುವ ರಿಷಭ್ ಅದರೊಂದಿಗೆ ಕಾಂತಾರ ಸಿನಿಮಾದ ಹ್ಯಾಶ್‌ಟ್ಯಾಗ್ ನಿರ್ಮಾಪಕರಾದ ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಮ್ಸ್ ನಾಯಕಿ ಸಪ್ತಮಿ ಗೌಡ ನಿರ್ಮಾಪಕ ಕಾರ್ತಿಕ್ ಗೌಡ ಅವರನ್ನು ಕೂಡ ಟ್ಯಾಗ್ ಮಾಡಿದ್ದಾರೆ.
ಉಳಿದ ನಾಲ್ಕೂ ಚಿತ್ರಗಳಲ್ಲಿ ಕೂಡ ಅವರ ಕುತ್ತಿಗೆಯಲ್ಲಿ ಸರವಿದ್ದು ಇದನ್ನೇ ಅಭಿಮಾನಿಯೊಬ್ಬರು ಗಮನಿಸಿ ರಿಷಬ್‌ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಿಷಭ್ ಹೌದು ಎನ್ನುವಂಥೆ ಥಂಬ್ ಇಮೋಜಿ ಕೂಡ ಹಾಕಿ ಸಂಭ್ರಮಿಸಿದ್ದಾರೆ. ಇನ್ನು ಈ ವರ್ಷದ ಕನ್ನಡ ರಾಜ್ಯೋತ್ಸವ ಕನ್ನಡ ಸಿನಿ ರಸಿಕರಿಗೆ ಹಾಗೂ ಅಪ್ಪು ಅಭಿಮಾನಿಗಳಿಗೆ ಬಹಳ ವಿಶೇಷವಾದದ್ದು ಏಕೆಂದರೆ ಈ ದಿನದಂದು ನಟ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡಲಿದೆ.
ಹೌದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಜನಿಕಾಂತ್ ಅವರು ಆಗಮಿಸಲಿದ್ದಾರೆ ಎಂಬ ಸುದ್ದಿ ಇದ್ದು ಈ ಕುರಿತಾಗಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮಾತನಾಡಿದ್ದು ಮುಖ್ಯ ಅತಿಥಿಯನ್ನಾಗಿ ರಜನಿಕಾಂತ್ ಅವರನ್ನು ಆಹ್ವಾನಿಸಲಾಗಿದೆ ಹಾಗೂ ಕನ್ನಡ ಮಾತನಾಡಬಲ್ಲ ಜ್ಯೂನಿಯರ್ ಎನ್ ಟಿ ಆರ್ ಅವರು ಸಹ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದಿದ್ದಾರೆ. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.