ನಮಸ್ತೆ ಪ್ರೀತಿಯ ವೀಕ್ಷಕರೆ ಸದ್ಯ ಬಹುನಿರೀಕ್ಷಿತ ಕಾಂತಾರ ಸಿನಿಮಾ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತೆರೆಕಂಡು ಕೇವಲ ಕನ್ನಡ ಭಾಷೆಯಲ್ಲಿಯೇ ನೂರು ಕೋಟಿ ರೂಪಾಯಿ ದೋಚಿ ದೊಡ್ಡ ಮೈಲು ಗಲ್ಲಿ ಆಗಿದೆ. ಇನ್ನು ಪ್ರೇಕ್ಷಕರ ಬೇಡಿಕೆಯ ಮೇರೆಗೆ ರಿಷಬ್ ಶೆಟ್ಟಿವರವರ ನಟನೆಯ ಹಾಗೂ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಕಾಂತಾರ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಕಂಡಿದೆ.
ಹೌದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ಇಷ್ಟೊಂದು ದೊಡ್ಡ ಮಟ್ಟದ ಬೇಡಿಕೆಯನ್ನು ಪರ ಭಾಷೆಗಳಲ್ಲಿ ಕೂಡ ಹೊಂದಿದೆ ಎಂಬುದನ್ನು ನೆನೆಸಿಕೊಳ್ಳಲು ಕೂಡ ಹೆಮ್ಮೆ ಎನಿಸುತ್ತದೆ.
ಇನ್ನು ಕಾಂತಾರ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗಿ ಮೊದಲ ದಿನವೇ ಅತ್ಯುತ್ತಮ ರೆಸ್ಪಾನ್ಸ್ ಅನ್ನು ಪಡೆದುಕೊಂಡಿದೆ. ಹೀಗೆ ಅನೇಕ ಕಷ್ಟ ಸುಖಗಳನ್ನು ದಾಟಿ ಬಂದ ರಿಷಬ್ ಇದೀಗ ಸಕ್ಸಸ್ ಫುಲ್ ನಿರ್ದೇಶಕರಾಗಿದ್ದು ಅದೊಂದು ಕಾಲದಲ್ಲಿ ಕೇವಲ 50 ರೂಪಾಯಿ ಸಂಭಾವನೆ ಪಡೆಯುತ್ತಿದ್ದಂತಹ ನಟ ರಿಷಬ್ ಶೆಟ್ಟಿ ಇಂದು ಕಾಂತಾರ ಸಿನಿಮಾಗೆ ಪಡೆದಿರುವುದೆಷ್ಟು ಗೊತ್ತೇ.
ಮೂಲತಃ ಕುಂದಾಪುರದ ಹೇರಾಡಿ ಎಂಬ ಕುಗ್ರಾಮದಲ್ಲಿ ರತ್ನಾವತಿ ಶೆಟ್ಟಿ ಹಾಗೂ ಭಾಸ್ಕರಾ ಶೆಟ್ಟಿ ಎಂಬ ದಂಪತಿಗೆ ಮೂವರು ಮಕ್ಕಳು ಜನಿಸಿದ್ದು ಅವರಲ್ಲೊಬ್ಬರೇ ನಮ್ಮೆಲ್ಲರ ಪ್ರೀತಿಯ ನಟ ನಿರ್ದೇಶಕ ರಿಷಬ್ ಶೆಟ್ಟಿ.
ಇನ್ನು ಇವರ ನಿಜವಾದ ಹೆಸರು ಪ್ರಶಾಂತ ಶೆಟ್ಟಿಯಾಗಿದ್ದು ಸಿನಿಮಾಗೆ ಪಾದಾರ್ಪಣೆ ಮಾಡಿದ ಬಳಿಕ ತಮ್ಮ ಹೆಸರನ್ನು ರಿಷಬ್ ಶೆಟ್ಟಿ ಎಂದು ಅವರೇ ಬದಲಿಸಿಕೊಳ್ಳುತ್ತಾರೆ. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದಿದ್ದರೂ ಸಹ ತಮ್ಮ ಅಕ್ಕನೊಂದಿಗೆ ಓದು ಮುಂದುವರಿಸುವುದಕ್ಕಾಗಿ ಕುಂದಾಪುರದಿಂದ ಬೆಂಗಳೂರಿಗೆ ಬಂದ ರಿಷಬ್ ಶೆಟ್ಟಿ ಸಿನಿಮಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೂವೀಸ್ ಗಳ ಕುರಿತು ತರಬೇತಿ ಪಡೆದುಕೊಳ್ಳುತ್ತಾರೆ. ಆ ಬಳಿಕ ನಿರ್ದೇಶಕ ರಮೇಶ್ ಅವರ ಸೈನೈಡ್ ಎಂಬ ಪ್ರಯೋಗಾತ್ಮಕ ಸಿನಿಮಾದ ಮೂಲಕವಾಗಿ ಸಹಾಯಕ ನಿರ್ದೇಶಕರಾಗಿ ತಮ್ಮ ಸಿನಿ ಪಯಣವನ್ನು ಶುರು ಮಾಡಿದರು ರಿಷಬ್ ಶೆಟ್ಟಿ.
ಇದಾದ ಬಳಿಕಕತಾವೇ ಸ್ವತಃ ನಿರ್ದೇಶನ ಮಾಡಿ ಅತ್ಯಂತ ಯಶಸ್ಸು ಕಂಡಂತಹ ಸಿನಿಮಾ ಎಂದರೆ ಅದು 2018ರಲ್ಲಿ ಬಿಡುಗಡೆಗೊಂಡ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು”. ಇದಕ್ಕೂ ಮೊದಲು “ಕಿರಿಕ್ ಪಾರ್ಟಿ” ಹಾಗೂ ‘ರಿಕ್ಕಿ’ ಸಿನಿಮಾ ಕೂಡ ನಿರ್ದೇಶನ ಮಾಡಿದ್ದು ಕಿರಿಕ್ ಪಾರ್ಟಿಯ ಸೆನ್ಸೇಷನ್ ಸ್ಟೋರಿ ಸಾಮಾನ್ಯವಾಗಿ ತಮಗೆ ತಿಳಿದಿರುತ್ತದೆ. ಹೀಗೆ ಈ ಸಿನಿಮಾ ಸಕ್ಸಸ್ ಕಂಡ ನಂತರ ತಮ್ಮದೇ ನಿರ್ದೇಶನದಲ್ಲಿ ಹಲವಾರು ಸಿನಿಮಾಗಳನ್ನು ತಂದಿದ್ದು ಸದ್ಯ ಕಾಂತರಾ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವಂತಹ ರಿಷಬ್ ಶೆಟ್ಟಿ 2007 ರಿಂದ 2012 ಈ ಅವಧಿಯಲ್ಲಿ ಪಟ್ಟಂತಹ ಕಷ್ಟ ಅಸ್ತಿಷ್ಟಲ್ಲ ಬಿಡಿ.
ಹೌದು ಸಿನಿಮಾಗಾಗಿ ಸಾಲ ಮಾಡಿಕೊಂಡು ಸಾಲ ತೀರಿಸಲಾಗದ ಬೆಂಗಳೂರಿನಲ್ಲಿ ಸಿಕ್ಕಸಿಕ್ಕ ಕೆಲಸಗಳನ್ನೆಲ್ಲ ಕೂಡ ಮಾಡಿದ್ದಾರೆ.
ಇನ್ನು ಜೀವನದಲ್ಲಿ ನಡೆದ ಕಹಿ ಸತ್ಯವನ್ನು ಸ್ವತಹ ನಟ ರಿಷಬ್ ಶೆಟ್ಟಿ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದು ಇಂತಹ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರ ಕೈ ಹಿಡಿದಿದ್ದು ರಕ್ಷಿತ್ ಶೆಟ್ಟಿ. ಹೌದು ತುಗ್ಲಕ್ ಎಂಬ ಸಿನಿಮಾದಲ್ಲಿ ಇವರಿಬ್ಬರ ಪರಿಚಯವಾಗಿದ್ದು ಆನಂತರ ಇವರಿಬ್ಬರ ಕಾಂಬಿನೇಷನ್ನಲ್ಲಿ ತೆರೆ ಕಂಡ ‘ಕಿರಿಕ್ ಪಾರ್ಟಿ’ ಸಿನಿಮಾ ಎಲ್ಲಾ ಯುವ ಜನರ ಅಚ್ಚುಮೆಚ್ಚಿನ ಸಿನಿಮಾ ಎಂದರೆ ತಪ್ಪಾಗಲಾರದು.
ಹೌದು ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡೆದುಕೊಂಡಂತಹ ರಿಷಬ್ ಶೆಟ್ಟಿಯವರು ಒಂದರ ಮೇಲೊಂದರಂತೆ ಹಿಟ್ಟು ಸಿನಿಮಾಗಳನ್ನು ನೀಡುತ್ತಾ ಸದ್ಯ ‘ಕಾಂತರಾ’ ಸಿನಿಮಾದಲ್ಲಿನ ಅತ್ಯದ್ಭುತ ನಟನಿಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೇವಲ 50 ರೂ ಗೆ ಕೆಲಸ ಮಾಡಿದ್ದ ಅವರು ಒಂದು ಸಿನಿಮಾಗೆ ಇದೀಗ ಬರೋಬ್ಬರಿ ಎರಡು ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ನಿಜಕ್ಕೂ ರಿಷಬ್ ಎಲ್ಲರಿಗೂ ಮಾದರಿ ಎನ್ನಬಹುದು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು