ಕನ್ನಡ ಚಿತ್ರರಂಗದ ಬಿಕ್ಷುಕ ಪಾತ್ರದಾರಿ ಶಂಕರ್ ಬಿರಾದಾರ್ ಅವರು ಈಗ ಹೇಗಿದ್ದಾರೆ ಗೊತ್ತಾ; ಅವರ ಪರಿಸ್ಥಿತಿ ಹೇಗಿದೆ ಗೊತ್ತಾ..!?

shankar biradar lifestory

ನಮ್ಮ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಅದೆಷ್ಟು ಜನ ಕಲಾವಿದರು ನಟಿಸಿ ಬದುಕು ಕಟ್ಟಿಕೊಂಡವರಿದ್ದಾರೆ. ಇನ್ನು ಹಲವಾರು ಜನರು ನಮ್ಮನ್ನೆಲ್ಲಾ ಅಂದಿನ ಕಾಲದಲ್ಲಿ ನಗಿಸಿ ಇಂದು ಎಲ್ಲಿದ್ದಾರೆ ಎಂದು ಗೊತ್ತಿಲ್ಲದ ಇರುವಷ್ಟು ಮಟ್ಟಿಗೆ ಅಜ್ಞಾತವಾಸದಲ್ಲಿದ್ದಾರೆ. ಅದೆಷ್ಟು ಹಿರಿಯ ಕಲಾವಿದರು ಇಂದು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅಂಥವರಲ್ಲಿ ಒಬ್ಬರ ಕುರಿತಂತೆ ಈಗ ಮಾತನಾಡಲು ಹೊರಟಿದ್ದೇವೆ. ಒಂದು ಕಾಲದಲ್ಲಿ ತಮ್ಮ ಭಿಕ್ಷುಕನ ಪಾತ್ರದ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿರುವ ಕಲಾವಿದರಿವರು.

ಹೌದು ನಾವು ಮಾತನಾಡುತ್ತಿರುವುದು ಶಂಕರ್ ಬಿರಾದಾರ್ ಅವರ ಕುರಿತಂತೆ. ಇವರ ನಮಸ್ಕಾರ ಸಾರ್ ಹೇಗಿದ್ದೀರಿ ಎನ್ನುವ ಡೈಲಾಗ್ ಇಂದಿಗೂ ಕೂಡ ಕಿವಿಯಲ್ಲಿ ಅನುರಣಿಸುತ್ತದೆ. ಒಂದು ಲೆಕ್ಕದಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಬಿಕ್ಷುಕರ ಪಾತ್ರಕ್ಕೆ ಹೇಳಿಮಾಡಿಸಿದ ನಟ ಎಂದರೆ ಅದು ಇವರೊಬ್ಬರೇ ಎನ್ನುವಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದ್ದರು. ಅಂದಿನ ಕಾಲದಲ್ಲಿ ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ಶಂಕರ್ ಬಿರಾದಾರ್ ರವರು ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕನಸೆಂಬ ಕುದುರೆಯನೇರಿ ಎನ್ನುವ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಚಿತ್ರರಂಗದ ಅನಭಿಷಕ್ತ ದೊರೆ ಯಾಗಿರುವ ಅಮಿತಾ ಬಚ್ಚನ್ ರವರಿಗೆ ನ್ಯಾಷನಲ್ ಅವಾರ್ಡ್ ಸ್ಪರ್ಧೆಯಲ್ಲಿ ದೊಡ್ಡಮಟ್ಟದ ಕಾಂಪಿಟೇಶನ್ ನೀಡಿದ್ದರು.

ನಿಮಗೆ ಗೊತ್ತಿಲ್ಲದಿರಬಹುದು ಅದೇ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಅವರು ಶಂಕರ್ ಬಿರಾದಾರ್ ಅವರಿಗೆ ಕರೆ ಮಾಡಿ ಚಿತ್ರದಲ್ಲಿ ಅವರ ನಟನೆ ಕುರಿತಂತೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಇನ್ನು ಶಂಕರ್ ಬಿರಾದಾರ್ ರವರಿಗೆ ಹಲವಾರು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಕೂಡ ಹುಡುಕಿಕೊಂಡು ಬಂದಿವೆ. ಇಂತಹ ಮನೋಜ್ಞ ಅಭಿನಯವನ್ನು ತನ್ನ ಸಿನಿಮಾಗಳಲ್ಲಿ ತೋರ್ಪಡಿಸಿ ರುವ ಶಂಕರ್ ಬಿರಾದಾರ್ ಅವರು ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದು ಹಲವರಿಗೆ ತಿಳಿದಿಲ್ಲ. 1000ಕ್ಕೂ ಅಧಿಕ ನಾಟಕಗಳಲ್ಲಿ ಕಾಣಿಸಿಕೊಂಡಿರುವ 500ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಶಂಕರ್ ಬಿರಾದಾರ್ ಅವರು ಈಗ ಹೇಗಿದ್ದಾರೆ ಎನ್ನುವ ಕುರಿತಂತೆ ಯಾರಿಗೂ ಕೂಡ ಅರಿವಿಲ್ಲ ಹಾಗು ಅದನ್ನು ತಿಳಿಯುವ ಪ್ರಯತ್ನವನ್ನು ಕೂಡ ಯಾರೂ ಮಾಡುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಹೊಸ ಮಾದರಿಯ ಸಿನಿಮಾಗಳು ಹಾಗೂ ಸಿನಿಮಾ ನಿರ್ದೇಶಕರು ಬಂದಿರುವ ಕಾರಣದಿಂದಾಗಿ ಹಳೆಯ ಕಲಾವಿದರಿಗೆ ಯಾರು ಕೂಡ ಮನೆ ಹಾಕುತ್ತಿಲ್ಲ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರೇ ಶಂಕರ್ ಬಿರಾದಾರ್ ಅವರಿಗೆ ಪ್ರೋತ್ಸಾಹ ನೀಡಿ ಸಿನಿಮಾ ಸಿಗುವಂತೆ ಮಾಡಿದರು. ಕಾಶಿನಾಥ್ ಅವರ ಹಲವಾರು ಸಿನಿಮಾಗಳ ಮೂಲಕ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದ್ದರು ಶಂಕರ್ ಬಿರಾದಾರ್.

ಆದರೆ ಶಂಕರ್ ಬಿರಾದಾರ್ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ದೊಡ್ಡಮಟ್ಟದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಹಾಗೂ ನಟಿಸಿದರು ಕೂಡ ಕೇವಲ ನಿಮಿಷಗಳವರೆಗೆ ಸಿಗುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಚಿಕ್ಕ ಬಾಡಿಗೆ ಮನೆಯೊಂದರಲ್ಲಿ ಶಂಕರ್ ಬಿರಾದಾರ್ ಅವರು ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ಲಾಕ್ಡೌನ್ ಸಮಯದಲ್ಲಿ ಕೂಡ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದರು ಎನ್ನುವುದಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆದಷ್ಟು ಬೇಗ ಇವರ ಕಷ್ಟಕ್ಕೆ ಕನ್ನಡ ಚಿತ್ರರಂಗ ಸ್ಪಂದಿಸು ವಂತಾಗಲಿ ಎಂಬುದಾಗಿ ಹಾರೈಸೋಣ.

Leave a Reply

Your email address will not be published. Required fields are marked *