ಕನ್ನಡಿಗರು ಮೆಚ್ಚಿದ ಕಾಂತಾರ ಚಿತ್ರದ ಮೇಲೆ, ವಿವಾದ ಸೃಷ್ಟಿ ಮಾಡಿದ್ದ ಚೇತನ್ ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತೇ??

ಕಾಂತಾರ ಸಿನಿಮಾ ಇಂದು ದೇಶದ ಎಲ್ಲೆಡೆ ಒಳ್ಳೆಯ ಹೆಸರು ಪಡೆದುಕೊಳ್ಳುತ್ತಿದೆ, ಸಿನಿಮಾ ನೋಡಿದ ಎಲ್ಲರೂ ರಿಷಬ್ ಶೆಟ್ಟಿ ಅವರು ಬರೆದಿರುವ ಕಥೆ, ತುಳುನಾಡಿನ ಸಂಸ್ಕೃತಿ, ಭೂಕ ಕೋಲ, ದೈವಾರಾಧನೆ, ದೈವದ ಆಚರಣೆ ಇದೆಲ್ಲವನ್ನು ಸಹ ಮೆಚ್ಚಿಕೊಂಡಿದ್ದು, ಕರ್ನಾಟಕದಲ್ಲಿ ಇದ್ದರು ಈ ಆಚರಣೆಗಳ ಬಗ್ಗೆ ಗೊತ್ತಿರಲಿಲ್ಲ, ತುಳುನಾಡಿನ ಸಂಸ್ಕೃತಿ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ರಿಷಬ್ ಅವರಿಗೆ ಧನ್ಯವಾದಗಳು ಎಂದು ಹೇಳುತ್ತಿದ್ದಾರೆ. ಆದರೆ ಸ್ಯಾಂಡಲ್ ವುಡ್ ನಟ ಚೇತನ್ ಅವರು ಇದಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ಕೆಲ ಸಮಯದ ಹಿಂದೆ ರಿಷಬ್ ಶೆಟ್ಟಿ ಅವರು, ಭೂತಕೋಲ ನಮ್ಮ ಹಿಂದೂ ಸಂಸ್ಕೃತಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದರು..

ನಟ ಚೇತನ್ ಅವರು ಯಾವುದಾದರೂ ಒಂದು ವಿಚಾರದಿಂದ ವಿವಾದಗಳನ್ನು ಸೃಷ್ಟಿಸುತ್ತಾರೆ. ಅದೇ ರೀತಿ ಈಗ ಕಾಂತಾರ ಸಿನಿಮಾ ವಿಚಾರದಲ್ಲಿ ಕೂಡ ಹೇಳಿಕೆ ನೀಡಿ, ವಿವಾದ ಸೃಷ್ಟಿಸುತ್ತಿದ್ದಾರೆ. ಕಾಂತಾರ ಸಿನಿಮಾವನ್ನು ಎಲ್ಲಾ ಭಾಷೆಯ ಸಿನಿಮಾಪ್ರಿಯರು ಒಪ್ಪಿಕೊಂಡಿದ್ದಾರೆ, ಮುಗಿಬಿದ್ದು ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ, ನಮ್ಮ ಕರಾವಳಿ ಪ್ರದೇಶದ ದೈವದ ಬಗ್ಗೆ ತಿಳಿದು, ಸಂಸ್ಕೃತಿ ನಮ್ಮ ಮೂಲವನ್ನು ತಿಳಿದುಕೊಳ್ಳಬೇಕು ಎಂದು ಸಂತೋಷ ಪಡುತ್ತಿದ್ದಾರೆ. ಆದರೆ ನಟ ಚೇತನ್ ಅವರು ಈ ಆಚರಣೆ ಬಗ್ಗೆ ಹೇಳಿಕೆ ನೀಡಿದ್ದಾರೆ.

ಭೂತಕೋಲದ ಆಚರಣೆ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎನ್ನುವ ಹೇಳಿಕೆಯನ್ನು ನಟ ಚೇತನ್ ಅವರು ನೀಡಿದ್ದು, ಈ ಹೇಳಿಕೆಯ ಬಗ್ಗೆ ಈಗಾಗಲೇ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಚೇತನ್ ಅವರ ಈ ಹೇಳಿಕೆಗೆ ರಿಷಬ್ ಶೆಟ್ಟಿ ಅವರು ಸಹ ಪ್ರತ್ಯುತ್ತ ಹೇಳಿದ್ದಾರೆ. ರಿಷಬ್ ಅವರು ಈಗಾಗಲೇ ಹೇಳಿರುವ ಹಾಗೆ, ಚಿಕ್ಕ ವಯಸ್ಸಿನಿಂದ ಈ ಆಚರಣೆಗಳನ್ನು ನೋಡಿ, ಆಚರಿಸಿ ಬೆಳೆದಿರುವವರು ರಿಷಬ್. ಸಿನಿಮಾ ಚಿತ್ರೀಕರಣ ಮಾಡುವಾಗಲೂ ಸಹ ಅಲ್ಲಿನ ಮೂಲ ಜನರನ್ನು, ಕೋಲ ಮಾಡುವವರನ್ನು ಜೊತೆಯಲ್ಲಿ ಇರಿಸಿಕೊಂಡೇ, ದೈವದ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದು ಎಂದು ಹೇಳಿದ್ದಾರೆ ರಿಷಬ್. ಈ ವಿಚಾರದ ಬಗ್ಗೆ ಸಿನಿಮಾ ಮಾಡಬೇಕು ಎಂದುಕೊಂಡಾಗ ಜನರ ನಂಬಿಕೆಗೆ ಧಕ್ಕೆ ಬರಬಾರದು, ಯಾವುದೇ ತಪ್ಪು ನಡೆಯಬಾರದು ಎಂದು ಬಯಸಿದ್ದೇ..

ಎಲ್ಲಾ ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದೆ ಎಂದು ರಿಷಬ್ ಅವರು ಹೇಳಿದ್ದಾರೆ. ಪ್ರತಿಯೊಂದು ಶಾಟ್ ತೆಗೆದಾಗಲು ಸಹ, ಅಲ್ಲಿನ ಜನರಿಗೆ ತೋರಿಸುತ್ತಿದ್ದೆವು. ಅದರ ಬಗ್ಗೆ ಮಾತನಾಡಿರುವವರಿಗೆ ನಾನು ಏನು ಉತ್ತರ ಕೊಡುವುದಿಲ್ಲ, ನೋ ಕಮೆಂಟ್ಸ್. ಸಂಸ್ಕೃತಿ ಬಗ್ಗೆ ಮಾತನಾಡುವ ಅರ್ಹತೆ ನನಗೆ ಇಲ್ಲ. ಮಾತನಾಡಿರುವವರಿಗೆ ಆ ಅರ್ಹತೆ ಇದೆಯಾ ಎಂದು ನನಗೆ ಗೊತ್ತಿಲ್ಲ. ಆ ದೈವನರ್ತನ ಮಾಡುವವರು, ಕೋಲ ಮಾಡುವವರು ಮಾತ್ರ ಅದರ ಬಗ್ಗೆ ಮಾತನಾಡುವ ಅರ್ಹತೆ ಹೊಂದಿದ್ದಾರೆ..” ಎಂದು ಹೇಳಿ, ಚೇತನ್ ಅವರ ಮಾತಿಗೆ ಟಾಂಗ್ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ.

Leave a Reply

Your email address will not be published. Required fields are marked *