ಕಡಲ ತೀರದಲ್ಲಿ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಸೌಂದರ್ಯ ನೋಡಿ ಸುಸ್ತಾದ ಪ್ರವಾಸಿಗರು! ಅಬ್ಬಬ್ಬಾ ವಿಡಿಯೋ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ ನೋಡಿ!!

ಕೆಜಿಎಫ್ ಸರಣಿಯ ಸಿನಿಮಾ ಕನ್ನಡ ಸಿನಿಮಾರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ ಸಿನಿಮಾ. ಈ ಸಿನಿಮಾದಲ್ಲಿ ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ತೂಕವಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಶ್ರೀನಿಧಿ ಶೆಟ್ಟಿಯವರು ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಕೆಜಿಎಫ್ ಚಾಪ್ಟರ್ 1 ಮತ್ತು 2 ಎರಡರಲ್ಲೂ ತನ್ನ ನಟನೆಯಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ ಶ್ರೀನಿಧಿ ಶೆಟ್ಟಿ.

ಕೆಜಿಎಫ್ 1 ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಶ್ರೀನಿಧಿಯವರು ಅಷ್ಟೇನು ಫೇಮಸ್ ಆಗಿರಲಿಲ್ಲ. ಆದರೆ ಕೆಜಿಎಫ್ 2 ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಮಿಂಚಿದ್ದು ಇವರ ಬೇಡಿಕೆ ಕೂಡ ಡಬಲ್ ಆಗಿದೆ. ನಟಿ ಶ್ರೀನಿಧಿ ಶೆಟ್ಟಿಯವರ ಹಿನ್ನಲೆ ಗಮನಿಸುವುದಾದರೆ, 1992 ಅಕ್ಟೋಬರ್ 21ರಂದು ಮಂಗಳೂರಿನಲ್ಲಿ ಜನಿಸಿದ ಶ್ರೀನಿಧಿ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿಯಾಗಿದ್ದಾರೆ.

ಅಪ್ಪಟ ಮಂಗಳೂರಿನವರಾದರೂ ಶಿಕ್ಷಣವನ್ನು ಮುಗಿಸಿದ್ದು ಬೆಂಗಳೂರಿನಲ್ಲಿ. ವೃತ್ತಿ ಜೀವನವನ್ನು ಆರಂಭಿಸಿದ್ದು ಸಿನಿಮಾರಂಗದಲ್ಲಿ. ಬೆಂಗಳೂರಿನ ಜೈನ ವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. 2016 ರಲ್ಲಿ ಜರುಗಿದ ಮಿಸ್ ದಿವಾ ಸ್ಪರ್ಧೆಯ ವಿಜೇತೆಯಾಗಿ ಹೊರ ಹೊಮ್ಮಿದ್ದರು. ಕೆಲಕಾಲ ಬೆಂಗಳೂರಿನ ಖ್ಯಾತ ಸಾಫ್ಟವೇರ್ ಕಂಪನಿ `ಆಕ್ಸೆಂಚರ್’ ನ ಉದ್ಯೋಗಿಯಾಗಿದ್ದರು.

ಈ ಸಮಯದಲ್ಲಿ ಹಲವಾರು ಡಿಸೈನರ್‌ಗಳ ಜೊತೆಗೆ ಮಾಡೆಲ್ ಆಗಿ ಕೆಲಸ ಮಾಡಿದರು. ಹೀಗೆ ಹಲವಾರು ಸೌಂದರ್ಯ ಸ್ಫರ್ಧೆಗಳಲ್ಲಿ ಭಾಗವಹಿಸಿದ ಇವರು ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಸ್ಪರ್ಧೆಯ ವಿಜೇತೆಯೂ ಕೂಡ. ದುಬೈ, ಪ್ರಾನ್ಸ್, ಜಪಾನ್, ಸಿಂಗಾಪುರ್, ಥೈಲಾಂಡ್, ಪೊಲ್ಯಾಂಡ್ ದೇಶಗಳ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು.

ಇನ್ನು, ಬ್ಯೂಟಿ ಕಾಂಟೆಸ್ಟ್ ಸ್ಪರ್ಧಿಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಈ ಶ್ರೀನಿಧಿ ಶೆಟ್ಟಿಯವರು ಸಿನಿಮಾರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗಲೇ ನಿರ್ದೇಶಕ ಪ್ರಶಾಂತ್ ನೀಲ್ ಕಣ್ಣಿಗೆ ಬಿದ್ದ ನಟಿ ಶ್ರೀನಿಧಿ ಶೆಟ್ಟಿಯವರು ಬಿಗ್ ಬಜೆಟ್ ಸಿನಿಮಾದ ಮೂಲಕ ಚಂದನವನ ಪ್ರವೇಶಿಸಿದರು. ಸರಿಸುಮಾರು ಎಂಟು ವರ್ಷಗಳ ಕಾಲ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ.

ನಟಿಯರ ಮೈ ಮುಟ್ಟದೆ ಸಿನೆಮಾ ಮಾಡೋಕೆ ಬರಲ್ವಾ ಎಂದು ಕೇಳಿದ ಪ್ರಶ್ನೆಗೆ, ರವಿಮಾಮ ಕೊಟ್ಟ ಖಡಕ್ ಉತ್ತರ ಹೇಗಿತ್ತು ಗೊತ್ತಾ? ಇದು ಕಣ್ರೀ ಮಾತಂದ್ರೆ ನೋಡಿ!!

ಕೆಜಿಎಫ್ 2 ಸಿನಿಮಾ ಯಶಸ್ಸು ಕಂಡ ಮೇಲೆ ಶ್ರೀನಿಧಿಯವರ ಬೇಡಿಕೆಯೂ ಹೆಚ್ಚಾಗಿದೆ. ಇದೀಗ, ತಮಿಳಿನ ಚಿಯಾನ್ ವಿಕ್ರಂರವರೊಡನೆ ‘ಕೋಬ್ರಾ’ ಎಂಬ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಕೇವಲ 29 ವರ್ಷ ವಯಸ್ಸಿನ ಶ್ರೀನಿಧಿಯವರಿಗೆ ಸಿನಿಮಾಗಳಲ್ಲಿ ತುಂಬಾ ಆಫರ್ ಗಳು ಬರುತ್ತಿವೆ. ಆದರೆ ಇದೀಗ ನಟಿ ಶ್ರೀ ನಿಧಿ ಶೆಟ್ಟಿ ಹಾಟ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸಮುದ್ರ ತೀರದಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀ ನಿಧಿ ಶೆಟ್ಟಿ ಜಾಕೆಟ್ ತೆಗೆಯುತ್ತ ಸಮುದ್ರದ ಕಡೆಗೆ ನಡೆದುಕೊಂಡು ಹೋಗಿದ್ದಾರೆ. ಕೊನೆಗೆ ಜಾಕೆಟ್ ತೆಗೆದು ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದು, ನಟಿಯ ಹಾಟ್ ವಿಡಿಯೋವೊಂದು ವೈರಲ್ ಆಗಿದೆ. ನಟಿಯ ಹಾಟ್ ಉಡುಗೆಯ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದು, ಶಾಕ್ ಕೂಡ ಆಗಿದ್ದಾರೆ.

Leave a Reply

Your email address will not be published. Required fields are marked *