ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುವುದಿದೆ. ಹಣೆಯಲ್ಲಿ ಇಂತಹವರಿಗೆ ಇಂತಹವರು ಎಂದು ಈ ಮೊದಲೇ ದೇವರು ಬರೆದಿರುತ್ತಾರೆ, ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎನ್ನುವುದು ನಿಜ. ಹೌದು, ಭಿನ್ನ ಮನಸ್ಥಿತಿಯ ಎರಡು ವ್ಯಕ್ತಿಗಳು ಜೊತೆಯಾಗಿ ಹೊಂದಿಕೊಂಡು ಬದುಕುವುದೇ ಈ ಮದುವೆ. ಮದುವೆಯ ಬಂಧ ಏರ್ಪಟ್ಟ ಬಳಿಕ ಎರಡು ಕುಟುಂಬಗಳು ಒಂದಾಗಿ ಗಂಡು ಹೆಣ್ಣು ಜೊತೆಯಾಗಿ ನಡೆದರೆ ಸಂಬಂಧಗಳು ಶಾಶ್ವತ. ಇಲ್ಲಿ ಮುಖ್ಯವಾಗಿ ಬದುಕಬೇಕಾಗಿರುವುದು ಎರಡು ಜೀವಗಳು. ಸಂಸಾರ ಎಂಬ ಬಂಡಿ ಜೊತೆಯಾಗಿ ನಡೆಯಬೇಕೆಂದರೆ ಎರಡು ಮನಸ್ಸುಗಳು ಒಂದಾಗಿ ಬದುಕಬೇಕಾಗುತ್ತದೆ. ಈ ಸಂಸಾರ ಸಾಗಲು ಬಣ್ಣ, ಸಣ್ಣ, ದಪ್ಪ ಎಂಬುದು ವಿಷಯವಾಗುವುದಿಲ್ಲ ಎನ್ನುವುದು ಮಾತ್ರ ನಿಜ. ಆದರೆ ಇಲ್ಲೊಂದು ಮದುವೆಯ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತದೆ.
ಹೌದು ಮುಂಬೈನಲ್ಲಿ ಐಟಿ ಎಂಜಿನಿಯರ್ ಆಗಿರುವ ಅವಳಿ ಸಹೋದರಿಯರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ನಲ್ಲಿ ಒಬ್ಬನೇ ವ್ಯಕ್ತಿಯನ್ನೇ ಮದುವೆಯಾಗಿದ್ದಾರೆ. ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಐಟಿ ಇಂಜಿನಿಯರ್‌ಗಳಾಗಿದ್ದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅವಳಿ ಸಹೋದರಿಯರ ಹಾಗೂ ಹುಡುಗನ ಮನೆಯವರು ಈ ಮದುವೆ ಒಪ್ಪಿಗೆ ಸೂಚಿಸಿರುವುದು ವಿಶೇಷ. ಅಂದಹಾಗೆ, ಸೋಲಾಪುರ ಜಿಲ್ಲೆಯ ಅಕ್ಲುಜ್ ಗ್ರಾಮದಲ್ಲಿ ವಿವಾಹವನ್ನು ಅದ್ಧೂರಿಯಾಗಿ ಮಾಡಲಾಗಿದೆ.
ಈ ಅವಳಿ ಸಹೋದರಿಯರ ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಅವಳಿ ಸಹೋದರಿಯರ ಮದುವೆಗೆ ಶುಭಾಷಯ ಕೋರಿದ್ದಾರೆ. ಇನ್ನು ಕೆಲವರು ಮೀಮ್ಸ್ ಹಾಕಿ ಮದುವೆ ಬಗ್ಗೆ ತಮಾಷೆ ಮಾಡಿದ್ದಾರೆ. ಈ ಮದುವೆಯ ಕುರಿತು ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಕಾನೂನುಬದ್ಧವೇ ಅಥವಾ ನೈತಿಕವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಅವಳಿ ಸಹೋದರಿಯರು ತಮ್ಮ ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಅವಳಿ ಸಹೋದರಿಯಾಗಿರುವ ಕಾರಣ ಜೀವನದಲ್ಲಿಯೂ ಇಬ್ಬರೂ ಒಬ್ಬನೇ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದ್ದಾರೆ.. ಹೀಗಾಗಿ ಅತುಲ್‌ನ್ನು ಅವರ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಅವಳಿ ಸಹೋದರಿಯರನ್ನು ವರಿಸಿರುವ ಅತುಲ್ ಮಾತನಾಡಿ, “ಕೆಲ ದಿನಗಳ ಹಿಂದೆ ತಂದೆ ತೀರಿಕೊಂಡ ಬಳಿಕ ಯುವತಿಯರು ತಾಯಿಯೊಂದಿಗೆ ವಾಸವಾಗಿದ್ದರು. ಒಮ್ಮೆ ಇಬ್ಬರು ಸಹೋದರಿಯರು ಹಾಗೂ ಅವರ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅತುಲ್ ಅವರ ಕಾರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರ ಪರಿಚಯವಾಗಿದ್ದು, ಪ್ರೀತಿಯಾಗಿದೆ’ ಎಂದಿದ್ದಾರೆ. ಒಟ್ಟಿನಲ್ಲಿ ಹುಟ್ಟಿನಿಂದಲೇ ಜೊತೆಯಾಗಿ ಬೆಳೆದ ಅವಳಿ ಸಹೋದರಿಯರು ಬಿಟ್ಟಿರಲು ಆಗದೇ ಒಬ್ಬನ್ನನ್ನೇ ಮದುವೆಯಾಗಿರುವುದು ಅಚ್ಚರಿ ಮೂಡಿಸಿದೆ.