ಒಂದೂವರೆ ವರ್ಷದ ಪುಟ್ಟ ಕಂದಮ್ಮನನ್ನು ಬಿಟ್ಟು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ, ಕಾರಣವೇನು ಗೊತ್ತಾ?

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದುವೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಶೋ ಬಿಗ್ ಬಾಸ್ ಶೋ. ಕಿಚ್ಚ ಸುದೀಪ್ ಸಾರತ್ಯದಲ್ಲಿ ಈಗಾಗಲೇ ಬಿಗ್ ಬಾಸ್ ಕನ್ನಡ ಒಂಬತ್ತನೇ ಸೀಸನ್ ಆರಂಭವಾಗಿದೆ. ಸೀನಿಯರ್ಸ್ ಹಾಗೂ ಹೊಸಬರ ನಡುವಿನ ಜಟಪಟಿಯೂ ಶುರುವಾಗಿದೆ. ಬಿಗ್ ಬಾಸ್ ಕನ್ನಡ 9 ಕಾರ್ಯಕ್ರಮದಲ್ಲಿ 9ಮಂದಿ ಸೀನಿಯರ್ಸ್ ಹಾಗೂ 9 ಮಂದಿ ಹೊಸಬರು ಇದ್ದಾರೆ. ಹೀಗಾಗಿ ಬಿಗ್ ಬಾಸ್ ಸೀಸನ್ 9 ಸಾಕಷ್ಟು ಕುತೂಹಲವನ್ನು ಸೃಷ್ಟಿಮಾಡಿದೆ.

ಬಿಗ್ ಬಾಸ್ ಕನ್ನಡ 9 ಶೋಗೆ ‘ಅಶ್ವಿನಿ ನಕ್ಷತ್ರ’ ಸೀರಿಯಲ್ ನ ಖ್ಯಾತಿಯ ನಟಿ ಮಯೂರಿ ಭಾಗಿಯಾಗಿದ್ದಾರೆ. ಎರಡನೇ ಸ್ಪರ್ದಿಯಾಗಿ ನಟಿ ಮಯೂರಿ ಎಂಟ್ರಿಕೊಟ್ಟಿದ್ದಾರೆ. ಆದರೆ ನಟಿ ಮಯೂರಿಯವರಿಗೆ ಒಂದೂವರೆ ವರ್ಷದ ಮಗು ಇದ್ದು, ಇದರ ನಡುವೆಯೂ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಮೂಲಕ ಹೆಸರು ಮಾಡಿರುವ ನಟಿ ಮಯೂರಿ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಪರಿಚಯವಾದ ನಟಿ ಮಯೂರಿಯವರು ಪ್ರೇಕ್ಷಕರ ಮನಸ್ಸುನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.

ಅಶ್ವಿನಿ ನಕ್ಷತ್ರ ಧಾರಾವಾಹಿಯ ಬಳಿಕ ಅಜಯ್ ರಾವ್ ಜೊತೆ ಕೃಷ್ಣ ಲೀಲಾ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಯಶಸ್ಸು ಕಂಡಿತು. ಅದಾದ ನಂತರ, ಇಷ್ಟ ಕಾಮ್ಯ, ನಟರಾಜ ಸರ್ವಿಸ್, ಕರಿಯಾ 2, ಮೌನಂ ಹಾಗೂ ಪೊಗರು ಸಿನೆಮಾದಲ್ಲೂ ಅಭಿನಯ ಮಾಡಿದ್ದಾರೆ. ತಾಯಿಯಾಗಿರುವ ಸಂಭ್ರಮದಲ್ಲಿರುವ ನಟಿ ಮಯೂರಿಯವರು ತನ್ನ ಮಗುವಿನ ಲಾಲಾನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

ಅದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಆಕ್ಟಿವ್ ಅಗಿದ್ದು, ಆಗಾಗ ತಮ್ಮ ಫೋಟೋ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ತನ್ನ ಮಗನ ಮುದ್ದಾದ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮುಲಕ ಸುದ್ದಿಯಾಗುತ್ತಿರುತ್ತಾರೆ. ಬಹುಕಾಲದ ಗೆಳೆಯ ಅರುಣ್ ಅವರನ್ನು ಪ್ರೀತಿಸಿ ಮದುವೆಯಾದ ಮಯೂರಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ತನ್ನ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು ನಟಿ ಮಯೂರಿ.

ಆದರೆ ಇದೀಗ ಬಿಗ್ ಬಾಸ್ ಮನೆಗೆ ಮಯೂರಿ ಎಂಟ್ರಿಕೊಟ್ಟಿದ್ದಾರೆ. ವೇದಿಕೆಯಲ್ಲಿ ಮಾತನಾಡಿರುವ ಮಯೂರಿಯವರು, ತೆರೆಮೇಲೆ ಕಾಣಿಸಿಕೊಂಡಿದ್ದೇನೆ ನಾನು ಬಿಗ್ ಬಾಸ್ ವೇದಿಕೆಯಿಂದ ‘ಅಶ್ವಿನಿ ನಕ್ಷತ್ರ’ ಸೀರಿಯಲ್ ಪ್ರಮೋಷನ್ ಆಗಿದ್ದೇ ಈ ವೇದಿಕೆಯಿಂದ. ‘ಕೃಷ್ಣ ಲೀಲಾ’ ಕೂಡ ಪ್ರಮೋಷನ್ ಅಗಿದ್ದು ಬಿಗ್ ಬಾಸ್ ವೇದಿಕೆಯಿಂದಲೇ. ಆ ನಂಟಿನಿಂದ ನಾನು ಇಲ್ಲಿಗೆ ಬಂದಿದ್ದೇನೆ.

ನಾನು ತುಂಬಾ ಪ್ರೈವೈಟ್ ಪರ್ಸನ್. ಕೆಲಸ ಮತ್ತು ಫ್ಯಾಮಿಲಿ ಅಷ್ಟೇ ನನ್ನ ಪ್ರಪಂಚ. ನಾನು ಹುಬ್ಬಳ್ಳಿ ಹುಡುಗಿ. ನಮ್ಮದು ಸಾಧಾರಣ ಕುಟುಂಬ. ಚಿಕ್ಕವಯಸ್ಸಿನಿಂದಲೇ ಕಷ್ಟ ನೋಡಿದ್ದೇನೆ. ಸ್ಕೂಲ್ ಗೆ ಹೋಗುವಾಗಲೇ ಈವೆಂಟ್ಸ್ ಮಾಡುತ್ತಿದ್ದೆ. ಆ ಸಮಯದಲ್ಲಿ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ದೊಡ್ಡ ಆಸೆ ಇತ್ತು. ಅಲ್ಲಿಂದ ಬೆಂಗಳೂರಿಗೆ ಬಂದೆ. ನನ್ನ ಪತಿ ಅರುಣ್. ಮದುವೆಗೂ 10ವರ್ಷಗಳ ಹಿಂದೆಯಿಂದ ನಮ್ಮಿಬ್ಬರ ಪರಿಚಯ ಇತ್ತು.

ಈಗ ನನ್ನ ಮಗ ನನ್ನ ಜೀವನವನ್ನೇ ಬದಲಾಯಿಸಿದ್ದಾನೆ. ಈಗ ‘ಬಿಗ್ ಬಾಸ್’ ಹೊಸ ಚಾಲೆಂಜಿಂಗ್. ನನ್ನ ಪುಟ್ಟ ಮಗು.. ಆರವ್.. ಈಗ ಒಂದುವರೆ ವರ್ಷ ಅವನಿಗೆ. ಅವನನ್ನು ಬಿಟ್ಟು ಇರುವುದೇ ನನಗೆ ದೊಡ್ಡ ಚಾಲೆಂಜ್ ಆಗಿದೆ. ನನ್ನ ಪತಿ, ಅಮ್ಮ, ಅತ್ತೆ ಇದ್ದಾರೆ ಅನ್ನೋ ನಂಬಿಕೆ ಮೇಲೆ ಮಗುವನ್ನು ಬಿಟ್ಟು ನಾನು ‘ಬಿಗ್ ಬಾಸ್’ ಗೆ ಬಂದಿದ್ದೇನೆ. ಬಿಗ್ ಬಾಸ್ ನನಗೆ ಹೊಸ ಅನುಭವ ಆಗಿರಲಿದೆ. ನಾನು ಸ್ಕಿನ್ ಕ್ಲಿನಿಕ್ ಓಪನ್ ಮಾಡಿದ್ದೇನೆ. ಇಂದು ನಾನು ಏನಾಗಿದ್ದೇನೆ ಅದಕ್ಕೆ ನನಗೆ ಹೆಮ್ಮೆ ಇದೆ” ಎಂದು ನಟಿ ಮಯೂರಿ ಹೇಳಿದ್ದಾರೆ.

Leave a Reply

Your email address will not be published. Required fields are marked *