ನಮಸ್ತೆ ಪ್ರೀತಿಯ ವೀಕ್ಷಕರೆ ಈ ಸಿನೆಮಾ ರಂಗದವರು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗ್ತಾನೆ ಇರ್ತಾರೆ. ಇನ್ನು ಮುಖ್ಯವಾಗಿ ನಟ ನಟಿಯರು ತಾವು ಆಡುವ ಮಾತಿನಿಂದ ಹಿಡಿದು ತೊಡುವ ಉಡುಗೆಗಳವರೆಗೂ ಯಾವಾಗಲು ಸುದ್ದಿಯಲ್ಲಿ ಇರ್ತಾರೆ. ಸಲೆಬ್ರೆಟಿಗಳ ಜೀವನದಲ್ಲಿ ಎನೆಲ್ಲಾ ನಡಿಯುತ್ತಿದೆ ಎಂದು ತಿಳಿದುಕೊಳ್ಳಲು ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಅವರ ನಟನೆ, ಶಿಕ್ಷಣ, ಲವ್ ಲೈಫ್, ಡೇಟಿಂಗ್ ಹಾಗೂ ಗಾಸಿಫ್ ಹೀಗೆ ಒಂದಲ್ಲ ಒಂದು ವಿಷಯಕ್ಕೆ ಟ್ರೋ’ಲ್ ಕೂಡ ಆಗ್ತಾ ಇರ್ತಾರೆ.
ಹಿಂದೆಯಷ್ಟೆ ನಾವು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಮಗಳು ಸುಹಾನಳಿಗೆ ಡೇಟಿಂಗ್ ಕುರಿತಾಗಿ ಸಲಹೆ ಹೇಳಿದ್ದಕ್ಕೆ ಬಾರಿ ಸುದ್ದಿಯಾಗಿದ್ದರು. ಅದೇ ರೀತಿಯಾಗಿ ಇದೀಗ ತಾವು ಆಡಿದ ಮಾತಿಗಳಿಂದ ಸುದ್ದಿಯಾಗಿದ್ದಾರೆ ಆ ನಟಿ ಯಾರು ಅಂತೀರಾ ಹಾಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ… ತಮ್ಮ ಅದ್ಭುತ ನಟನೆಯ ಮೂಲಕ ಈಡೀ ಭಾರತದ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ನಟಿ ಸಮಂತಾ. ಸೌತ್ ಸಿನೆಮಾದಿಂದ ವಾಲಿವುಡ್ ಅಂಗಳಕ್ಕೆ ಕಾಲಿಟ್ಟ ನಟಿ ಸಮಂತಾ ಒಂದಾದ ಮೇಲೊಂದರಂತೆ ಹಿಟ್ ಸಿನೆಮಾಗಳಲ್ಲಿ ನಟಿಸಿ ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಹಲವು ವರ್ಷಗಳಿಂದಲೇ ಸಿನೆಮಾ ಪ್ರಪಂಚದಲ್ಲಿ ಮಿಂಚುತ್ತಿರುವ ನಟಿ ಸಮಂತಾ ಪ್ರೀತಿಸಿ ಮದುವೆಯಾಗಿದ್ದು ಸ್ಟಾರ್ ನಟ ನಾಗಚೈತನ್ಯ ಅವರೊಂದಿಗೆ. ಪ್ರೀತಿಸಿ, ಮನೆಯ ಹಿರಿಯರನ್ನು ಒಪ್ಪಿಸಿ ಹೊಸ ಬದುಕಿಗೆ ಕಾಲಿಟ್ಟಿದ್ದರು. ತಾವು ಆಸೆ ಪಟ್ಟಂತೆ ಅದ್ದೂರಿಯಾಗಿ ಹಣವನ್ನು ಖರ್ಚು ಮಾಡಿ ಇವರು ಮದುವೆ ಮಾಡಿಕೊಂಡಿದ್ದರು. ಆದರೆ ಆ ಮದುವೆಯ ಬಂಧನ ಹಲವು ದಿನಗಳವರೆಗೆ ನಡೆಯಲಿಲ್ಲ. ಹೌದು ನಾಗಚೈತನ್ಯ ಹಾಗೂ ಸಮಂತಾ ಮದುವೆಯಾದ ನಾಲ್ಕು ವರ್ಷಗಳ ನಂತರ ವಿ’ಚ್ಛೇ’ದನ ತೆಗೆದುಕೊಂಡಿದ್ದರು. ಇವರ ವಿವಾಹ ಮುರಿದು ಬಿದ್ದಿದ್ದು ಟಾಲಿವುಡ್ ನಲ್ಲಿ ಬಾರಿ ಮಟ್ಟದ ಸುದ್ದಿಗೆ ಕಾರಣವಾಗಿತ್ತು.
ಹಲವು ಸುದ್ದಿಗಳು, ಟ್ರೋ’ಲ್ ಗಳ ಮಧ್ಯೆಯು ಸಮಂತಾ ಕುಗ್ಗದೆ ಮತ್ತೆ ತಮ್ಮ ಕರಿಯರ ಅತ್ತ ಮುಖ ಮಾಡಿದರು. ಮತ್ತೆ ಮೂವಿಗಳಲ್ಲಿ ನಟಿಸಲು ಕಾಲ್ ಶೀಟ್ಗಳಿಗೆ ಸಹಿ ಕೂಡ ಹಾಕಿದ್ದರು. ಹೀಗೆ ಮತ್ತೆ ಅವರು ಜೀವನದಲ್ಲಿ ಮೂವ್ ಆನ್ ಆಗಿದ್ದು ಮತ್ತೆ ಹಲವರ ಕೊಂಕು ಮಾತುಗಳಿಗೆ ಕೊಡ ಗುರಿಯಾಗಿದ್ದರು. ಹೀಗೆ ಅವರಗೆ ಟ್ರಾವೆಲಿಂಗ್ ಎಂದರು ಸಹ ತುಂಬಾ ಇಷ್ಟ ಹಾಗಾಗ ಅವರು ಪ್ರೀ ಇದ್ದ ಸಮಯದಲ್ಲಿ ವಿದೇಶಗಳಿಗೂ ಪ್ರಯಾಣ ಬೆಳೆಸುತ್ತಾರೆ.
ಯುರೋಪ್ ಪ್ರಯಾಣ ಬೆಳೆಸಿದ್ರು ನಟಿ ಸ್ಯಾಮ್ ಅವರು ಅದೇ ಪ್ರಯಾಣದ ವೇಳೆ ಸ್ಕೀಯಿಂಗ್ ಕೂಡ ಮಾಡಿ ಹೊಸ ಅನುಭವ ಪಡೆದುಕೊಂಡಿದ್ದಾರೆ ನಟಿ ಸಮಂತ. ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಆಕ್ಟಿವ್ ಆಗಿರುವ ಸಮಂತಾ ಈ ವಿಷಯದ ಬಗ್ಗೆ ಬರೆದುಕೊಂಡಿದ್ದಾರೆ. ‘ಸ್ಕಿಯಿಂಗ್ ನಲ್ಲಿ ನಾನು ಅಂಬೆಗಾಲಿಡುತ್ತಿದ್ದೇನೆ. ಸಾಕಷ್ಟು ಬಾರಿ ಬಿದ್ದಿದ್ದೇನೆ. ಮತ್ತೆ ಎದ್ದಿದ್ದೇನೆ. ನನಗೆ ಅತ್ಯುತ್ತಮ ತರಬೇತಿ ನೀಡಿದ ಕೇಟ್ ಅವರಿಗೆ ಧನ್ಯವಾದಗಳು ಅಂತ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಸಮಂತಾ ಬರೆದುಕೊಂಡಿದ್ದಾರೆ.
ಅದಷ್ಟೆ ಅಲ್ಲದೆ ಕೇಟ್ ಹಾಗೂ ಸ್ಕೀಯಿಂಗ್ ಇಲ್ಲದೆ ನಾನು ಬದುಕಲಾರೆ ಅಂತ ತಮಾಷೆಯಾಗಿಯೂ ಕೂಡ ಬರೆದುಕೊಂಡಿದ್ದು ಇದೀಗ ಸುದ್ದಿಗೆ ಕಾರಣವಾಗಿದೆ. ನಟಿ ಸಮಂತಾ ಸಿನಿಮಾ ಮಾತ್ರವಲ್ಲದೆ ಜಾಹೀರಾತುಗಳಲ್ಲಿಯೂ ಕೂಡ ಸಾಕಷ್ಟು ಕಾಣಿಸಿಕೊಳ್ಳುತ್ತಾರೆ. ಜೊತೆಗೆ ತಮ್ಮದೇ ಆದ ಸ್ವಂತ ಉದ್ಯಮದಲ್ಲಿಯೂ ಬಂಡವಾಳ ಹೂಡಿಕೆ ಮಾಡಿಕೊಂಡು , ಆ ಬ್ಯುಸಿನೆಸ್ ಕೂಡ ಯಾರ ಸಹಾಯವು ಇಲ್ಲದೆ ತಾವೊಬ್ಬರೆ ನಡೆಸಿಕೊಂಡಯ ಹೋಗುತ್ತಾರೆ.
ಸಮಂತಾ ಹಾಗೂ ನಾಗ ಚೇತನ್ಯ ವಿಚ್ಛೇದನ ಪಡೆದರು ಸಹ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದಾರೆ. ಇಬ್ಬರು ಪರಸ್ಪರ ಗೌರವಿಸುತ್ತಾರೆ ಎಂಬ ಹಲವು ಮಾತುಗಳನ್ನು ಸಹ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಸಮಂತಾ ಹಾಕಿಕೊಂಡಿರುವ ಟ್ಯಾಟು. ಹೌದು ಅವರು ಅವರ ಪಕ್ಕೆಲುಬಿನ ಮೇಲೆ ಹಾಕಿಕೊಂಡಿರುವ ಟ್ಯಾಟುವನ್ನು ವಿಚ್ಚೇದನ ವಾದರು ಸಹ ಅಳಸಿ ಹಾಕಿಲ್ಲ.
ಸಮಂತಾಳ ಸುದ್ದಿ ಒಂದು ಕಡೆಯಾದರೆ, ಇನ್ನು ನಾಗಚೈತನ್ಯ ಸಹ ಸಂದರ್ಶನ ಒಂದರಲ್ಲಿ ನಾನು ಸಮಂತಾ ಸಿಕ್ಕರೆ ಮಾತನಾಡುತೇನೆ, ಹಗ್ ಮಾಡುತ್ತೇನೆ,ಹಾಯ್ ಹೇಳುತ್ತೇನೆ ಎಂದು ಹೇಳಿಕೆಯನ್ನು ಸಹ ನೀಡಿದ್ದಾರೆ. ಇವೆಲ್ಲವು ಕಾರಣಗಳಿಂದ ಮತ್ತೆ ನಾಗಚೈತನ್ಯ ಹಾಗೂ ಸಮಂತಾ ಒಂದಾಗಬಹುದು ಎಂಬುವುದು ಅವರ ಅಭಿಮಾನಿಗಳ ಅಭಿಪ್ರಾಯ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ