Tamilnadubayyappa and roopa : ಮದುವೆ ಎನ್ನುವುದು ಅರ್ಥ ಕಳೆದುಕೊಳ್ಳುತ್ತಿದೆ. ಗಂಡ ಹೆಂಡತಿಯ ನಡುವೆ ವೈಮನಸ್ಸು ಮೂಡಿ ವಿಚ್ಛೇಧನದಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇನ್ನೊಂದೆಡೆ ವಿವಾಹತ್ತೆರ ಸಂಬಂಧಗಳು ನಾನಾ ರೀತಿಯ ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದೆ. ಗಂಡನ ಸಂಬಂಧಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಪತ್ನಿಯೋರ್ವಳು ತಮ್ಮ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿ ಗೆ ಎಂತಹ ಕೆಲಸ ಮಾಡಿದ್ದಾಳೆ ನೋಡಿ..
ಈ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿತ್ತು.ಕೃಷ್ಣಗಿರಿ ಜಿಲ್ಲೆ ಕೆಲಮಂಗಲದ ಉಣಿಸೆಟ್ಟಿ ಗ್ರಾಮದಲ್ಲಿ ಅಯ್ಯಪ್ಪ (37) ಅವರ ಪತ್ನಿ ರೂಪ (25) ಮೂವರು ಮಕ್ಕಳೊಂದಿಗೆ ವಾಸವಾಗಿದ್ದರು. ಅಯ್ಯಪ್ಪ ಟೆಂಪೋ ಡ್ರೈವರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೀಗಿರುವಾಗ ಜವುಳಗಿರಿ ಸಮೀಪದ ಮಂಚುಗಿರಿ ಗ್ರಾಮದಲ್ಲಿ ವಾಸವಿದ್ದ..
ಅಯ್ಯಪ್ಪ ಅವರ ಸಂಬಂಧಿ ತಂಗಮಣಿ (20) ಜೊತೆಗೆ ರೂಪಾ ವಿವಾಹೇತರ ಸಂಬಂಧ ಹೊಂದಿದ್ದಳು. ಬಳಿಕ ಅಯ್ಯಪ್ಪ ಅಲ್ಲಿಂದ ಉಣಿಸೆಟ್ಟಿ ಗ್ರಾಮಕ್ಕೆ ಸ್ಥಳಾಂತರಗೊಂಡರೂ ರೂಪ ಮತ್ತು ತಂಗಮಣಿ ನಡುವಿನ ಬಾಂಧವ್ಯ ಮುಂದುವರಿದಿತ್ತು. ಈ ಘಟನೆ ನಡೆಯುವ ಮೂರು ತಿಂಗಳ ಹಿಂದೆ ರೂಪ ಮನೆ ಬಿಟ್ಟು ಹೋಗಿದ್ದಳು. ಹತ್ತು ದಿನಗಳ ಹಿಂದೆ ಸಂಬಂಧಿಕರು ಅವರನ್ನು ಕರೆತಂದಿದ್ದರು.
ಅದಲ್ಲದೇ ಅಯ್ಯಪ್ಪ ತನ್ನ ಹೆಂಡತಿ ಹೊರಟು ಹೋಗಿದ್ದಾಳೆಂದು ಗ್ರಾಮದ ಎಲ್ಲರಿಗೂ ತಿಳಿದಿದ್ದರಿಂದ ಎರಡು ಬಾರಿ ಆತ್ಮ-ಹತ್ಯೆಗೆ ಯತ್ನಿಸಿದ್ದನು. ಈ ವಿಚಾರವಾಗಿ ರೂಪಾ ಗೆಳೆಯ ತಂಗಮಣಿ ಜೊತೆಗೆ ಸೇರಿ ಪತಿಯನ್ನು ಕೊ-ಲೆ ಮಾಡಲು ಯೋಜನೆ ರೂಪಿಸಿದ್ದಳು.ಅಕ್ಟೋಬರ್ 22 ರ ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಪತಿ ಅಯ್ಯಪ್ಪನನ್ನು ರೂಪ ಮತ್ತು ತಂಗಮಣಿ ಇಬ್ಬರೂ ಕ-ತ್ತು ಹಿಸುಕಿ ಜೀವ ತೆಗೆದಿದ್ದರು.
ಬೆಳಗ್ಗೆ ಪತಿ ಆತ್ಮ-ಹ-ತ್ಯೆ ಮಾಡಿಕೊಂಡಿದ್ದಾನೆ ಎಂದು ಇಡೀ ಗ್ರಾಮದಲ್ಲಿ ಸುದ್ದಿ ಹಬ್ಬಿಸಿ ಅಂ ತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದರು. ಪೊಲೀಸ್ ತನಿಖೆ ನಡೆಸ ಬೇಕು ಎಂದು ಊರಿನವರು ಹೇಳಿದರು ಪತ್ನಿ ಬೇಡ ಅಂದಳು .. ನಂತರ ಮ ರಣೋತ್ತರ ಪರೀಕ್ಷೆ ಅಲ್ಲಿ ಸತ್ಯ ಹೊರ ಬಿತ್ತು. ಇದರಿಂದ ಅನುಮಾನಗೊಂಡ ಸಂಬಂಧಿಕರು ರೂಪ ಮತ್ತು ತಂಗಮಣಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೂಪ ಮತ್ತು ತಂಗಮಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದರು. ಈ ಇಬ್ಬರೂ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದು, ತಂದೆ ಕೊ-ಲೆಯಾಗಿ ತಾಯಿ ಜೈಲು ಸೇರಿದ್ದರಿಂದ ಮೂವರು ಮಕ್ಕಳು ಅನಾಥರಾಗಿರುವುದು ನಿಜಕ್ಕೂ ವಿಪರ್ಯಾಸ.