ಆಂಕರ್ ಮೇಲೆ ಗರಂ ಆದ ಡಿಬಾಸ್.. ವೇದಿಕೆಯಲ್ಲಿ ನಡೆದಿದ್ದೇ ಬೇರೆ ನೋಡಿ! ಡಿಬಾಸ್ ಅಸಲಿ ಮುಖ ಬೆಚ್ಚಿಬಿದ್ದ ಜನತೆ..

ಸ್ಯಾಂಡಲ್ವುಡ್ ನಲ್ಲಿ ಇದೀಗ ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗುತ್ತಿದೆ. ಅಂತೆಯೇ ಜಮೀರ್ ಅಹ್ಮದ್ ಮಗ ಜೈದ್ ಖಾನ್ ಅವರೂ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ತಮ್ಮ ಮೊದಲ ಸಿನಿಮಾಗಾಗಿ ಬಹಳಷ್ಟು ಶ್ರಮ ಪಡುತ್ತಿದ್ದಾರೆ. ಸಿನಿಮಾ ನವೆಂಬರ್ 4ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈಗಾಗಲೆ ಬಿಡುಗಡೆಯಾಗಿರುವ ಸಿನಿಮಾದ ಹಾಡು ಭಾರಿ ಸದ್ದು ಮಾಡಿದ್ದು, ಇತ್ತೀಚೆಗೆ ಚಿತ್ರದ ಟ್ರೈಲರ್ ಅನ್ನು ಕೂಡ ರಿಲೀಸ್ ಮಾಡಲಾಗಿತ್ತು.

ಈ ಸಿನಿಮಾದ ಟ್ರೈಲರ್ ಇದೀಗ ಉತ್ತಮ ರೆಸ್ಪಾನ್ಸ್ ಅನ್ನು ಪಡೆದುಕೊಳ್ಳುತ್ತಿದೆ. ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವ ಕಾರಣ ಸಿನಿಮಾದ ಪ್ರಚಾರ ಕಾರ್ಯ ಕೂಡ ಭರ್ಜರಿಯಿಂದ ಸಾಗುತ್ತಿದೆ. ಜಮೀರ್ ಅಹ್ಮದ್ ಖಾನ್ ಝೈದ್ ಖಾನ್ ನಟಿಸಿರುವ ಮೊದಲ ಸಿನಿಮಾ ‘ಬನಾರಸ್’ ನ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ಹುಬ್ಬಳ್ಳಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನಟ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಸಿನಿಮಾರಂಗದ ಕಲಾವಿದರು ಬಂದಿದ್ದಾರೆ. ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್, ಹಾಸ್ಯ ನಟ ಚಿಕ್ಕಣ್ಣ, ವಿನೋದ್ ಪ್ರಭಾಕರ್ ಎಲ್ಲರೂ ಬಂದಿದ್ದಾರೆ.. ಇವರ ಉಪಸ್ಥಿತಿಯಲ್ಲಿಯೇ ವಿವಿಧ ಕಾರ್ಯಕ್ರಮಗಳು ನಡೆಯಿತು. ಇನ್ನು‌ ವೇದಿಕೆ ಮೇಲೆ‌ ಆ್ಯಂಕರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ವೇದಿಕೆ ಮೇಲೆ ಕರೆದಾಗ ವಿನೋದ್ ಅವರನ್ನು‌ ಕರೆಯಿರಿ ಅಂತ ಗರಂ ಆಗಿ ಬಿಟ್ಟಿದ್ದಾರೆ.
ಹುಬ್ಬಳ್ಳಿ ಒಂದು ರೀತಿ ಸಿನಿಮಾ ಪ್ರೇಮಿಗಳ ಊರು. ಇಲ್ಲಿಗೆ ಸಿನಿಮಾ ಮಂದಿ ಬಂದು ಹೋಗ್ತಾರೆ. ತಮ್ಮ ಸಿನಿಮಾ ಬಗ್ಗೆ ಪ್ರೀತಿಯಿಂದಲೇ ಹೇಳಿ ಹೋಗ್ತಾರೆ. ಪ್ರಚಾರ ಮಾಡಿ ಹೊರಟು ಹೋಗ್ತಾರೆ. ಇದು ಕಾಮನ್ ಆಗಿಯೇ ಇಲ್ಲಿ ನಡೆಯೋ ಪ್ರಕ್ರಿಯೇನೆ ಆಗಿದೆ. ಅರಸು, ಇನ್ಸ್‌ಪೆಕ್ಟರ್‌ ವಿಕ್ರಮ್‌, ಗರಡಿ ಸಿನಿಮಾಗಳಲ್ಲಿ ದರ್ಶನ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಇದೀಗ ಅವರು ‘ಬನಾರಸ್‌’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು ಈ ವಿಚಾರವನ್ನು ಚಿತ್ರತಂಡ ಸರ್‌ಪ್ರೈಸ್‌ ಆಗಿಟ್ಟಿದೆ ಎನ್ನಲಾಗುತ್ತಿದೆ.

ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್‌ ಖಾನ್‌ ನಟನೆಯ ಮೊದಲ ಸಿನಿಮಾ ‘ಬನಾರಸ್‌’.ಜಮೀರ್‌ ಅಹ್ಮದ್‌ ಖಾನ್‌ ಹಾಗೂ ನಟ ದರ್ಶನ್‌ ಬಹಳ ಒಳ್ಳೆಯ ಸ್ನೇಹಿತರು ಆತ್ಮೀಯರು. ಈ ಸ್ನೇಹದಿಂದಲೇ ದರ್ಶನ್‌, ಝೈದ್‌ ಖಾನ್‌ ಮೊದಲ ಚಿತ್ರದಲ್ಲಿ ದರ್ಶನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಕಾರಣದಿಂದಲೇ ದರ್ಶನ್‌ ಪ್ರೀ ರಿಲೀ ಕಾರ್ಯಕ್ರಮಕ್ಕೆ ಗೆಸ್ಟ್‌ ಆಗಿ ಬಂದಿದ್ದಾರೆ. ಎಂಬ ಮಾಹಿತಿ ತಿಳಿದುಬಂದಿದೆ.
ಹಾಗೇ ದರ್ಶನ್‌, ಈ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ ನಂತರ ಸಂಭಾವನೆ ಪಡೆಯಲು ನಿರಾಕರಿಸಿದ್ದರಂತೆ. ಆದರೆ, ಏನಾದರೂ ಉಡುಗೊರೆ ಪಡೆಯಲೇಬೇಕೆಂದು ಮನವಿ ಮಾಡಿದ್ದರಿಂದ ಚಿತ್ರದ ನಿರ್ಮಾಪಕರು ತಮಗಾಗಿ ನೀಡಿದ ದುಬಾರಿ ವಾಚ್‌ವೊಂದನ್ನು ದರ್ಶನ್‌ ಪಡೆದಿದ್ದಾರೆ ಎಂಬ ಮಾತು ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಕೇಳಿಬರುತ್ತಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *