ನಮಸ್ತೆ ಪ್ರೀತಿಯ ವೀಕ್ಷಕರೇ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ತಮ್ಮ ಜೀವನದ ಕಷ್ಟಗಳನ್ನು ಅವರು ನಡೆದು ಬಂದ ಹಾದಿಯಲ್ಲಿ ಹೇಳಿಕೊಳ್ಳುವುದು ಹೊಸ ವಿಚಾರವೇನೂ ಅಲ್ಲ.. ಅಂತಹ ಸಂಚಿಕೆಗಳು ಪ್ರೇಕ್ಷಕರನ್ನು ಭಾವುಕಾರನ್ನಾಗಿ ಮಾಡಿಸೋದು ಸಹಜ. ಅದರಲ್ಲೂ ಸ್ಟಾರ್ ನಟರುಗಳು ಜೀವನದ ಕಷ್ಟದ ಕಥೆಗಳು ನಿಜಕ್ಕೂ ಕಣ್ಣೀರು ತರಿಸಿ ಬಿಡುತ್ತದೆ. ಅದೇ ರೀತಿ ಜೋಡಿ ನಂಬರ್ ಒನ್ ಶೋನಲ್ಲಿ ಇದೀಗ ಹಿರಿಯ ನಟ ಅಭಿಜಿತ್ ಅವರ ಹೆಂಡತಿ ತಮ್ಮ ಗಂಡನ ಸ್ಥಾನದ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಹೌದು 1980 ರಲ್ಲಿ ನಟನೆ ಆರಂಭಿಸಿದ ನಟ ಅಭಿಜಿತ್ ಅವರು 1990, 2000ರಲ್ಲಿ ಸಾಕಷ್ಟು ಸಿನೆಮಾಗಳಲ್ಲಿ ನಟಿಸಿದ್ದಾರೆ. ಈ ಸ್ಫೂರದ್ರುಪಿ ನಟನಿಗೆ ಒಳ್ಳೆಯ ಅವಕಾಶಗಳು ಸಿಗಲಿಲ್ಲ, ಆ ಸ್ಥಾನವು ಸಿಗಲಿಲ್ಲ ಎಂದು ಅವರ ಪತ್ನಿ ಜೋಡಿ ನಂಬರ್ ಒನ್ ಶೋ ನಲ್ಲಿ ಹೇಳಿದ್ದಾರೆ.
ಜೋಡಿ ನಂಬರ್ 1 ರಿಯಾಲಿಟಿ ಶೋನಲ್ಲಿ ಅಭಿಜಿತ್ ಅವರು ಪತ್ನಿ ರೋಹಿಣಿ ಜೊತೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟಗಳು, ಅವಕಾಶಗಳು ಇಲ್ಲದೆ ಮನೆಯಲ್ಲಿ ಬಡತನದ ಬಗ್ಗೆ ಹೇಳಿಕೊಂಡಿದ್ದರು. ಜೋಡಿ ನಂಬರ್ 1 ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗಳು ಮಹಾಸಂಗಮದಲ್ಲಿ ಅಭಿಜಿತ್ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು. ಅವರ ಡ್ಯಾನ್ಸ್, ಅವರ ಆ ಎನರ್ಜಿ ನೋಡಿ ಶಿವಣ್ಣ, ರಕ್ಷಿತಾ, ಅರ್ಜುನ್ ಜನ್ಯ, ಅಚ್ಚರಿ ಜೊತೆಗೆ ಖುಷಿ ವ್ಯಕ್ತಪಡಿಸಿದ್ದಾರೆ.
ಅಭಿಜಿತ್ ಡ್ಯಾನ್ಸ್ ನೋಡಿ ಮಾತನಾಡಿದ ರಕ್ಷಿತಾ ಪ್ರೇಮ್ ಅವರು ಸರ್, ನೀವು ನಮಗೆ ಸ್ಫೂರ್ತಿ ಎಂದಿದ್ದಾರೆ. ಶಿವರಾಜ್ ಕುಮಾರ್ ಅವರು, ಅಭಿಜಿತ್ ನಿಜವಾದ ಫೈಟರ್, ಜೀವನವಿಡೀ ಫೈಟ್ ಮಾಡ್ತಾರೆ ಎಂದಿದ್ದಾರೆ. ಅರ್ಜುನ್ ಜನ್ಯ ಅವರು ಕಲಾವಿದರಿಗೆ ಸಾವಿಲ್ಲ ಎಂದಿದ್ದಾರೆ. ಅದೇ ವೇಳೆ ಮಾತನಾಡಿದ ಅಭಿಜಿತ್ ಪತ್ನಿ ರೋಹಿಣಿ ಅವರು ಅಭಿಜಿತ್ ಒಳ್ಳೆಯ ನಟ, ಆದರೆ ಅವರಿಗೆ ದೇವರು ಒಳ್ಳೆಯ ಸ್ಥಾನವನ್ನು ನೀಡಲಿಲ್ಲ ಎಂದಿದ್ದಾರೆ.
ಅಭಿಜಿತ್ ಗೆ ಮಾತು ಕೊಟ್ಟ ಶಿವಣ್ಣ.. ನೀವು ನನ್ನ ಸಹೋದರ ಇದ್ದಂತೆ. ನನ್ನ ಮುಂದಿನ ಸಿನೆಮಾಗಳಲ್ಲಿ ನೀವು ಇರುತ್ತಿರಿ ಎಂದು ಶಿವಣ್ಣ ಇದೇ ಸಂದರ್ಭದಲ್ಲಿ ಅಭಿಜಿತ್ ಗೆ ಮಾತು ನೀಡಿದ್ದಾರೆ. ಆಗ ಅಭಿಜಿತ್, ನೀವು ನನ್ನ ಜೊತೆ ಇರುತ್ತಿರಿ ಎಂದಿದ್ದೆ ದೊಡ್ಡ ಖುಷಿ ಎಂದಿದ್ದಾರೆ. ಡಾ. ವಿಷ್ಣುವರ್ಧನ್ ನಟನೆಯ ತುಂಬಿದ ಮನೆ, ಯಜಮಾನ, ಕೋಟಿಗೊಬ್ಬ ಸಿನೆಮಾದಲ್ಲಿ ಡಾ. ರಾಜ್ ಕುಮಾರ್ ಜೊತೆಗೆ ಜೀವನ ಚೈತ್ರ ಸಿನೆಮಾದಲ್ಲಿ ಅಭಿಜಿತ್ ನಟಿಸಿದ್ದರು.
ವಿಷ್ಣು ಅವರ ಜೊತೆ ಅಭಿಜಿತ್ ಅವರಿಗೆ ಒಳ್ಳೆಯ ಬಾಂಧವ್ಯ ಇತ್ತು. ರೋಹಿಣಿ ಅವರನ್ನು ಪ್ರೀತಿಸಿ ಮದುವೆಯಾಗಿರುವ ಅಭಿಜಿತ್ ಗೆ ಮೂವರು ಮಕ್ಕಳು, ಮೊಮ್ಮಕ್ಕಳು ಕೂಡ ಇದ್ದಾರೆ. ಈ ಜೋಡಿ ಮದುವೆಯಾಗಿ 34 ವರ್ಷಗಳೆ ಕಳೆದಿವೆ. ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅಭಿಜಿತ್ ಅವರು ಅನುರಾಧ ಭಟ್, ಸಂಗೀತ ರವಿಶಂಕರ್ ಜೊತೆ ಅಕ್ಷರಮಾಲೆ ಎಂಬ ಶೋನ ಸಹನಿರೂಪಕರಗಿದ್ದರು.
ಉದಯ ವಾಹಿನಿಯಲ್ಲಿ ಈ ಶೋ 15 ವರ್ಷಗಳಿಗೂ ಅಧಿಕ ಸಮಯ ಪ್ರಸಾರ ಆಯ್ತು. ಸದ್ಯ ಜೀ ಕನ್ನಡ ವಾಹಿನಿಯ ಸತ್ಯ ಧಾರಾವಾಹಿಯಲ್ಲಿ ಅಭಿಜಿತ್ ನಟಿಸುತ್ತಿದ್ದಾರೆ. ಇವರನ್ನು ಮತ್ತೆ ತೆರೆಯ ಮೇಲೆ ನೋಡಿ ಅಭಿಮಾನಿಗಳು ತುಂಬಾ ಖುಷಿಯಾಗಿದ್ದರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.