ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಕ್ಷಿತ್ ಶೆಟ್ಟಿ ಎನ್ನುವ ಹೆಸರು ತನ್ನದೇ ಆದ ಛಾಪು ಮೂಡಿಸಿದೆ ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲದೆ ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಕೂಡ ರಕ್ಷಿತ್ ಶೆಟ್ಟಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ತೆರೆಕಂಡ ಚಾರ್ಲಿ 777 ಚಿತ್ರ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇತರ ಭಾಷಿಗರೂ ಕೂಡ ಮೆಚ್ಚಿ ಹೊಗಳುವಂತಹ ಸಿನಿಮಾ ಆಗಿತ್ತು. ಇದು ರಕ್ಷಿತ ಶೆಟ್ಟಿ ಅವರ ಸಾಧನೆಗೆ ಒಂದು ಸಾಕ್ಷಿ. ಇಂದು ಕೋಟ್ಯಾಂತರ ವ್ಯವಹಾರ ಮಾಡುವ ರಕ್ಷಿತ್ ಶೆಟ್ಟಿ, ಮೊದಲು ಹೇಗಿದ್ರು ಗೊತ್ತಾ? ಅದೆಷ್ಟು ಸೋಲು ನೋವು ಅನುಭವಿಸಿದ್ದಾರೆ ಗೊತ್ತಾ?
ನಟ ರಕ್ಷಿತ್ ಶೆಟ್ಟಿ ಮೂಲತಃ ಉಡುಪಿ ಅವರು. ಶ್ರೀಧರ್ ಶೆಟ್ಟಿ ಹಾಗೂ ಹಾಗೂ ರಂಜನಿ ಶೆಟ್ಟಿ ಅವರ ಮಗ. ಇವರು ಜನಿಸಿದ್ದು 1983ರಲ್ಲಿ. ಪ್ರಾಥಮಿಕ ಅಭ್ಯಾಸವನ್ನು ಉಡುಪಿಯಲ್ಲಿಯೇ ಮುಗಿಸುತ್ತಾರೆ. ಇವರಿಗೆ ಬಾಲ್ಯದಿಂದಲೂ ಹುಲಿ ವೇಷ ಧರಿಸುವುದು ಬಹಳ ಇಷ್ಟದ ಸಂಗತಿ ಹಾಗಾಗಿ ಚಿಕ್ಕ ವಯಸ್ಸಿನಿಂದಲೂ ನಲಿಕೆ ತಂಡದೊಂದಿಗೆ ರಕ್ಷಿತ್ ಶೆಟ್ಟಿ ಗುರುತಿಸಿಕೊಳ್ಳುತ್ತಿದ್ದರು. ನಂತರ ಇಂಜಿನಿಯರಿಂಗ್ ಪದವಿಯನ್ನು ಕೂಡ ರಕ್ಷಿತ್ ಶೆಟ್ಟಿ ಪಡೆಯುತ್ತಾರೆ. ಪದವಿ ಮುಗಿಸಿ ಇಂಜಿನಿಯರ್ ಆಗಿದ್ರು ಕೂಡ ರಕ್ಷಿತ್ ಅವರಿಗೆ ಸಿನಿಮಾ ನಿರ್ಮಾಣದ ಬಗ್ಗೆ ಹೆಚ್ಚು ಒಲವು ಇರುತ್ತೆ ಹಾಗಾಗಿ ಆಗಾಗ ಶಾರ್ಟ್ ಫಿಲಂ ಮಾಡುವ ಗಮನಹರಿಸುತ್ತಾರೆ ರಕ್ಷಿತ್.
ಮನೆಯಿಂದ ಒಂದು ರೂಪಾಯಿ ಕೂಡ ತೆಗೆದುಕೊಳ್ಳದೆ ಶಾರ್ಟ್ ಫಿಲಂ ಮಾಡುತ್ತಿದ್ದ ರಕ್ಷಿತಾ ಅವರಿಗೆ ಆರ್ಥಿಕ ನೆರವು ನೀಡಿದ್ದು ಅವರ ಸ್ನೇಹಿತರ ಬಳಗ. ಬೆಳ್ಳಿತೆರೆಯಲ್ಲಿ ಮಿಂಚಬೇಕು ಎಂದು ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಾರೆ ರಕ್ಷಿತ್. ಆರಂಭದಲ್ಲಿ ಕೆಲವು ಸಿನಿಮಾ ಮಾಡಿ ಸೋತರೂ ಸಿಂಪಲ್ ಸುನಿಯವರ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾದ ಮೂಲಕ ರಕ್ಷಿತ ಶೆಟ್ಟಿ ಕನ್ನಡಿಗರ ಎದುರು ನಿಲ್ಲುತ್ತಾರೆ.
ಅವರ ಆ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಜೊತೆಗೆ ರಕ್ಷಿತ್ ಅವರಿಗೆ ಸಾಕಷ್ಟು ಅವಕಾಶಗಳನ್ನ ಕಲ್ಪಿಸಿ ಕೊಡುತ್ತದೆ. ರಕ್ಷಿತ್ ಅವರಂತೆ ಟ್ಯಾಲೆಂಟ್ ಇದ್ದು ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದ ರಿಷಬ್ ಶೆಟ್ಟಿ ಅವರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದರು. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದೇ ಕಿರಿಕ್ ಪಾರ್ಟಿ. ಕಿರಿಕ್ ಪಾರ್ಟಿ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಯ್ತು. ಅದೇ ರೀತಿ ಉಳಿದವರು ಕಂಡಂತೆ ಸಿನಿಮಾದ ಮೂಲಕವೂ ಹೊಸ ರೀತಿಯ ಹೊಸ ತಲೆಮಾರಿನ ನಿರ್ದೇಶಕ ರಕ್ಷಿತ್ ಶೆಟ್ಟಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಲಭ್ಯವಾಗಿದ್ದ.
ಸಿನಿಮಾ ಇಂಡಸ್ಟ್ರಿಯಲ್ಲಿ ಸುಲಭವಾಗಿ ಮೇಲೆ ಬರೋದಕ್ಕೆ ಸಾಧ್ಯವಿಲ್ಲ ಯಾರಾದರೂ ಅಷ್ಟೇ ಕಷ್ಟ ಪಡಬೇಕು ನಂತರವಷ್ಟೇ ಯಶಸ್ಸಿನ ಸಿಹಿಯನ್ನು ತಿನ್ನಬಹುದು ಕಿರಿಕ್ ಪಾರ್ಟಿ ಸಿನಿಮಾ ಮಾಡಿ ಅದರಲ್ಲಿ ಸಾನ್ವಿ ಪಾತ್ರವನ್ನು ನಿಭಾಯಿಸಿದ ರಶ್ಮಿಕ ಮಂದಣ್ಣ ಅವರ ಜೊತೆ ರಕ್ಷಿತ ಶೆಟ್ಟಿ ಅವರ ವಿವಾಹ ನಿಶ್ಚಿತಾರ್ಥವೂಆಗಿತ್ತು. ಆದರೆ ಇದು ಕೆಲವೇ ದಿನಗಳಲ್ಲಿ ಬ್ರೇಕ್ ಅಪ್ ಆಯ್ತು ಆದರೆ ಆ ಸಮಯದಲ್ಲಿ ಅನುಭವಿಸಿದ ನೋವು ಅವಮಾನ ರಕ್ಷಿತ್ ಶೆಟ್ಟಿ ಎಲ್ಲಿಯೂ ಯಾರ ಬಳಿಯೂ ಹೇಳಿಕೊಳ್ಳಲಿಲ್ಲ ಅದರ ಬದಲು ವೃತ್ತಿ ಜೀವನದ ಕಡೆಗೆ ಇನ್ನಷ್ಟು ತೊಡಗಿಕೊಂಡರು ಇಂದು ರಕ್ಷಿತ್ ಶೆಟ್ಟಿ ಸಾಕಷ್ಟು ಸಿನಿಮಾಗಳಲ್ಲಿ ಗೆದ್ದಿದ್ದಾರೆ ಕನ್ನಡಿಗರಿಗೆ ಮಾತ್ರವಲ್ಲದೆ ಇತರ ಭಾಷಾ ಸಿಮಿಪ್ರಿಯರಿಗೂ ರಕ್ಷಿತ ಶೆಟ್ಟಿ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಇಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿರುವ ರಕ್ಷಿತ್ ಶೆಟ್ಟಿ, ಇವತ್ತು ಬೆಂಗಳೂರಿನಲ್ಲಿ ತಮ್ಮ ಸ್ವಂತ ದುಡಿಮೆಯಿಂದ ಅರ್ಧ ಎಕರೆ ಜಾಗದಲ್ಲಿ 25 ಕೋಟಿಗೂ ಹೆಚ್ಚಿನ ಬೆಲೆಯ ಮನೆ ನಿರ್ಮಾಣ ಮಾಡುತ್ತಿದ್ದಾರೆ ಅಂದರೆ ಅದು ಅವರು ಪಟ್ಟ ಪರಿಶ್ರಮದ ಫಲ. ಅವರ ವೃತ್ತಿಯ ಬಗ್ಗೆ ಅವರಿಗಿದ್ದ ನಂಬಿಕೆ. ಸೋಲೇ ಗೆಲುವಿನ ಸೋಪಾನ ಅಂತಾರೆ. ಅದೇ ರೀತಿ ಸೋಲನ್ನ ಕಂಡ ರಕ್ಷಿತ್ ಶೆಟ್ಟಿ ಇಂದು ಗೆಲುವನ್ನ ನೋಡುತ್ತಿದ್ದಾರೆ ಅಂದ್ರೆ ಖಂಡಿತವಾಗಿಯೂ ಇದು ಅವರಲ್ಲಿರುವ ಸಾಮರ್ಥ್ಯವನ್ನು ಮತ್ತೆ ಮತ್ತೆ ಎತ್ತಿ ತೋರಿಸುತ್ತದೆ ಅಲ್ವೇ.