ಕನ್ನಡ ಸಿನೆಮಾರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಿನಿ ಬದುಕು ಎಲ್ಲರಿಗೂ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿನಿ ಕೇರಿಯರ್ ನಲ್ಲಿ ಬ್ಯುಸಿಯಾಗಿದ್ದು ಅಪ್ಪು ಎರಡು ಸಿನೆಮಾಗಳಲ್ಲಿ ನಟಿಸಿ ಸಿನೆಮಾ ಪೂರ್ಣ ಗೊಳ್ಳುವ ಮುನ್ನವೇ ಅರ್ಧಕ್ಕೆ ಇಹಲೋಕ ತ್ಯಜಿಸಿದರು. ಅಪ್ಪು ಲೂಸಿಯ ಪವನ್ ಕುಮಾರ್ ನಿರ್ದೇಶನದ ‘ದ್ವಿತ್ವ’ ಎಂಬ ಚಿತ್ರದಲ್ಲಿ ಅವರು ನಟಿಸಬೇಕಿತ್ತು. ಅದರೆ ಆ ಸಿನೆಮಾದ ಚಿತ್ರೀಕರಣ ಆರಂಭವಾಗಿರಲಿಲ್ಲ. ಅಷ್ಟೇ ಅಲ್ಲದೆ ಎರಡು ಸಿನೆಮಾಗಳಲ್ಲಿ ಪುನೀತ್ ರಾಜ್ ಕುಮಾರ್ ಬ್ಯುಸಿಯಾಗಿದ್ದರು.
ಅರದಲ್ಲಿ ಒಂದು ಜೇಮ್ಸ್ ಈ ಸಿನೆಮಾ ಶೋಟಿಂಗ್ ಮುಗಿದಿದ್ದು ಡಬ್ಬಿಂಗ್ ಕೆಲಸ ಬಾಕಿ ಇತ್ತು. ಈ ಸಿನೆಮಾ ತೆರೆಗೆ ಬಂದು ಯಶಸ್ಸುನ್ನು ಕಂಡಿತ್ತು. ಸೆಪ್ಟೆಂಬರ್ 9ರಂದು ಅಪ್ಪು ಅಭಿಮಾನಯದ ಲಕ್ಕಿಮ್ಯಾನ್ ಚಿತ್ರ ತೆರೆಗೆ ಬಂದಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಲಕ್ಕಿಮ್ಯಾನ್ ಸಿನೆಮಾವನ್ನು ಮನೆಯಲ್ಲಿಯೇ ನೋಡಿ ಏನು ಹೇಳಿದ್ದಾರೆ ಎಂದು ನಿಮಗೆ ಖಂಡಿತ ಆಶ್ಚರ್ಯಆಗುತ್ತದೆ. ಅಂದಹಾಗೆ, ಪ್ರಾರಂಭದಿಂದಲೂ ಲಕ್ಕಿಮ್ಯಾನ್ ಸಿನೆಮಾ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದರೆ ತೆರೆಗೆ ಬಂದು ಅಭಿಮಾನಿಗಳ ನಿರೀಕ್ಷೆಯನ್ನು ಸುಳ್ಳು ಮಾಡಿಲ್ಲ.
ಅದಲ್ಲದೆ, ಇತ್ತೀಚಿಗಷ್ಟೇ ಲಕ್ಕಿ ಮ್ಯಾನ್ ಸಿನೆಮಾದಲ್ಲಿ ಅಪ್ಪುವಿನ ಪಾತ್ರದ ಬಗ್ಗೆ ಮಾತನಾಡಿದ್ದ ನಿರ್ದೇಶಕ ನಾಗೇಂದ್ರ ಪ್ರಸಾದ್ ಉತ್ತರ ನೀಡಿದ್ದಾರೆ. ಲಕ್ಕಿಮ್ಯಾನ್ ಚಿತ್ರದಲ್ಲಿ ಅಪ್ಪು ಅತಿಥಿ ಪಾತ್ರ ಮಾಡಿದ್ದಾರೆ ಅಂದಕ್ಷಣ ಅದು ಚಿಕ್ಕ ಪಾತ್ರವಲ್ಲ. ಇಡೀ ಸಿನೆಮದಲ್ಲಿ ಅಪ್ಪು ಪಾತ್ರ ಬರುತ್ತದೆ. ಸಿನೆಮಾದ ಮುಖ್ಯ ಸನ್ನಿವೇಶದಲ್ಲಿ ಅಪ್ಪು ಬಂದು ಹೋಗುತ್ತಾರೆ. ಅವರನ್ನು ಸಿನೆಮಾದಲ್ಲಿ ಪ್ರೇಕ್ಷಕರು ಮಿಸ್ ಮಾಡಿಕೊಳ್ಳುವುದಿಲ್ಲ. ಒಟ್ಟಾರೆ ಇಡೀ ಸಿನೆಮಾದಲ್ಲಿ ಅವರ ಪಾತ್ರ 45 ನಿಮಿಷಗಳ ಕಾಲ ಇರಲಿದೆ.
ಒಂದು ಹಾಡು ಸೇರಿದಂತೆ ಒಟ್ಟಾರೆ 50 ನಿಮಿಷಕ್ಕೂ ಹೆಚ್ಚು ಕಾಲ ಪುನೀತ್ ಅವರ ಪಾತ್ರ ಸಿನೆಮಾದಲ್ಲಿ ಬರಲಿದೆ. ಲಕ್ಕಿ ಮ್ಯಾನ್ ಸಿನೆಮಾಕ್ಕೆ ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತ ಶೃಂಗೇರಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಸೆಪ್ಟೆಂಬರ್ 8ರಂದು ರಾಜ್ಯಾದ ಹಲವೆಡೆ ಲಕ್ಕಮ್ಯಾನ್ ಬಿಡುಗಡೆಯಾಗಿ ಎಲ್ಲಾ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿದ್ದವು, ಗುರುವಾರವೇ ಅಭಿಮಾನಿಗಳು ದೇವರ ರೂಪದಲ್ಲಿ ನೆಚ್ಚಿನ ನಟನನ್ನು ಕಂಡು ಭಾವುಕರಗಿದ್ದಾರೆ ಪುನೀತ್ ರಾಜ್ ಕುಮಾರ್ ಎಂಟ್ರಿ ಸೀನ್ ವೇಳೆ ಅಭಿಮಾನಿಗಳು ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಿ ಜೈಕಾರ ಹಾಕಿ ಸಂಭ್ರಮಸಿದ್ದರು.
ತೆರೆಯ ಮೇಲೆ ಅಪ್ಪು ಅವರನ್ನು ಕಂಡೊಡನೆ ಸಂತೋಷಕ್ಕೆ ಪಾರವೇ ಇರಲಿಲ್ಲ. ಹೌದು ಅಪ್ಪು ಅವರನ್ನು ತೆರೆಯ ಮೇಲೆ ದೇವರ ರೂಪದಲ್ಲಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸೆಪ್ಟೆಂಬರ್ 9ರಂದು ಲಕ್ಕಿಮ್ಯಾನ್ ಸಿನೆಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಈ ಸಿನೆಮಾವನ್ನು ನೋಡಿ ಖುಷಿಪಟ್ಟಿದ್ದು, ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ದೇವರಾಗಿ ಬಹಳ ವಿಶೇಷ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಲಕ್ಕಿಮ್ಯಾನ್ ಸಿನೆಮಾಕ್ಕೆ ಎಲ್ಲಕಡೆ ಒಳ್ಳೆಯ ರೆಸ್ಪೋನ್ಸ್ ಸಿಕ್ಕಿದ್ದು ಅಷ್ಟೇ ಅಲ್ಲದೆ ದೊಡ್ಮನೆ ಕುಟುಂಬದವರು ಕೂಡ ಪುನೀತ್ ಅವರನ್ನು ತೆರೆಯ ಮೇಲೆ ಕಂಡು ಭಾವುಕರಗಿದ್ದಾರೆ.
ಇನ್ನು ಲಕ್ಕಿಮ್ಯಾನ್ ಸಿನೆಮಾವನ್ನು ಮನೆಯಲ್ಲಿಯೇ ನೋಡಿದ್ದರೆ ಅಶ್ವಿನಿ ಯವರು ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ಈ ಸಿನೆಮಾದ ಬಗ್ಗೆ ಮಾತನಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ಮಾತನಾಡಿದ್ದು ಅಶ್ವಿನಿ, ಮೊದಲು ಈ ಸಿನೆಮಾವನ್ನು ನೋಡುವುದು ಬೇಡ ಎಂದುಕೊಂಡಿದ್ದರಂತೆ. ಸಿನೆಮಾ ನೋಡಿದ್ರೆ ಮತ್ತೆ ಅಪ್ಸೆಟ್ ಆಗ್ತೇನೆ ಅಂದುಕೊಂಡಿದ್ದರಂತೆ.
ಆದರೆ ನೋಡಿದ ಮೇಲೆ ಮನಸ್ಸಿಗೆ ಬೇಜಾರ್ ಅನಿಸಲಿಲ್ಲ. ಚಿತ್ರದ ಕಥೆನೆ ತುಂಬಾ ಚನ್ನಾಗಿದೆ. ಸಿನೆಮಾ ತುಂಬಾ ಎಂಜಾಯ್ ಮಾಡಿದೆ ಅಂದಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರು ಅಶ್ವಿನಿಯವರು ಹೇಳಿರುವ ಮಾತುಗಳನ್ನು ಮಧ್ಯಮದ ಮಿತ್ರರಿಗೆ ತಿಳಿಸಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.