ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಕನಸಿನ ಸಿನೆಮಾ ‘ಗಂಧದ ಗುಡಿ’ ಚಿತ್ರ 28ರಂದು ರಾಜ್ಯಾದ್ಯಂತ ತೆರೆಯಲ್ಲಿ ಅದ್ದೂರಿಯಾಗಿ ಮೂಡಿದೆ. ಹಾಗೆಯೇ ಪರದೆ ಮೇಲೆ ಪರಮಾತ್ಮನನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡು ಭಾವುಕರಾದರು. ಬೆಳಗ್ಗೆಯಿಂದಲೇ ಸಿನಿಮಾ ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಗಂಧದ ಗುಡಿ ಮೊದಲ ಶೋ ವೀಕ್ಷಿಸಲು ಬೆಳಗ್ಗೆಯಿಂದಲೇ ಅಭಿಮಾನಿಗಳು ಟಿಕೆಟ್‌ಗಾಗಿ ಮುಗಿಬಿದ್ದರು. ಟಿಕೆಟ್ ಪಡೆಯಲು ಗಂಟೆ ಗಟ್ಟಲೆ ಹರಸಾಹಸವೇ ಪಡಬೇಕಾಯಿತು.
ಚಿತ್ರಮಂದಿರದ ಆವರಣದಲ್ಲಿ ಪುನೀತ್ ರಾಜ್‌ಕುಮಾರ್ ಅವರ 80ಅಡಿ ಎತ್ತರದ ಬೃಹತ್ ಕಟೌಟ್ ಹಾಕಲಾಗಿತ್ತು. ನಗರದ ಎಲ್ಲೆಡೆ ಅಪ್ಪು ಫೋಟೋಗಳು, ಗಂಧದಗುಡಿ ಸಿನಿಮಾದ ಭಾವಚಿತ್ರಗಳು ರಾರಾಜಿಸಿದವು. ಅಪ್ಪು ಅಗಲಿ ಒಂದು ವರ್ಷ ಕಳೆದರು ಕೂಡ ಅಭಿಮಾನಿಗಳ ಹೃದಯದಲ್ಲಿ ಶಾಶ್ಚತವಾಗಿ ನೆಲೆಸಿದ್ದಾರೆ. ಪವರ್ ಸ್ಟಾರ್ ಪರದೆ ಮೇಲೆ ಬರುತ್ತಿದ್ದಂತೆ ಅಪ್ಪು.. ಅಪ್ಪು.. ಮತ್ತೆ ಹುಟ್ಟಿಬನ್ನಿ ಎನ್ನುವ ಕೂಗು ಎಂತವರಿಗೂ ಮನಸ್ಸು ಕೂಡ ಕರಾಗುತ್ತೆ.
ಅಪ್ಪು ಅಮರ ಸೇರಿದಂತೆ ಹಲವು ಘೋಷಣೆಗಳು ಮೊಳಗಿದವು. ಕಾಡಿನ ಸಂಪೂರ್ಣ ಸುಂದರ ವೈಭವ ನೋಡಿದ ಅಭಿಮಾನಿಗಳು ಪುಳಕಿತಗೊಂಡರು. ಸಿನಿಮಾದಲ್ಲಿ ಪರಿಸರ, ಪ್ರಾಣಿ, ಬುಡಕಟ್ಟು ಜನರ ಸಂಪ್ರದಾಯ, ನೃತ್ಯ, ಸಮುದ್ರ, ನೀರಿನಲ್ಲಿ ಪುನೀತ್ ಹೋಗುವ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದ್ದು, ಅಭಿಮಾನಿಗಳ ಹರ್ಷೋದ್ದಾರಕ್ಕೆ ಕಾರಣವಾಯಿತು. ಪುನೀತ್ ರಾಜ್ ಕುಮಾರ್ ಪರದೆ ಮೇಲೆ ಬಂದಾಗಲಂತೂ ಅಭಿಮಾನಿಗಳ ಅಭಿಮಾನ ಎಲ್ಲೆ ಮೀರಿತ್ತು.
ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ ಆದ ಕಾರಣ ಎಲ್ಲಾ ಕಡೆ ಹೌಸ್ ಫುಲ್ ಬೋರ್ಡ್ ಕಾಣುತ್ತಿತ್ತು. ಎಷ್ಟೋ ಅಭಿಮಾನಿಗಳಿಗೆ ಟಿಕೆಟ್ ಸಿಕ್ಕದೆ ಬೇಸರದಲ್ಲಿಯೇ ಕೆಲವರು ಹಿಂದಿರುಗಿದ್ದಾರೆ. ಅಲ್ಲದೇ ಅಭಿಮಾನಿಗಳು ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ. ಇನ್ನು ಗಂಧದ ಗುಡಿ ಯ ಎರಡನೇಯ ದಿನದ ಗಳಿಕೆ 50 ಕೋಟಿ ಅನ್ನಲಾಗಿದೆ.
ಚಿತ್ರ ನೋಡಿ ಬಂದ ಎಲ್ಲರೂ ಭಾವುಕರಾಗಿದ್ದರು. ಸಿನಿಮಾ ನೋಡಲು ಇನ್ನು ಕೂಡ ಥಿಯೇಟರ್‌ಗೆ ಜನರು ಹರಿದುಬರುತ್ತಲೇ ಇದ್ದಾರೆ. ಆದರೆ ಟಿಕೆಟ್ ಸೋಲ್ಡ್ ಔಟ್ ಆಗಿದೆ ಎಂದು ಥಿಯೇಟರ್‌ನ ಮಾಲೀಕರು ಹೇಳುತ್ತಿದ್ದಾರೆ. ಆದರೂ ಕೂಡ ಅಭಿಮಾನಿಗಳು ಥಿಯೇಟರ್‌ನತ್ತ ಜನಸಾಗರವೇ ಬರುತ್ತಲೇ ಇದ್ದಾರೆ. ಒಟ್ಟಿನಲ್ಲಿ ಅಪ್ಪು ಅಗಲಿಕೆ ಅಭಿಮಾನಿಗಳಲ್ಲಿ ದುಃಖ ತಂದಿದೆ. ಗಂಧದಗುಡಿ ಸಿನಿಮಾ ಬಿಡುಗಡೆ ಹಬ್ಬದ ರೀತಿಯಲ್ಲಿ ವಾತಾವರಣ ಸೃಷ್ಟಿಸಿದೆ.
ಗಂಧದಗುಡಿ ಪ್ರತಿಯೊಬ್ಬರೂ ನೋಡುವಂತಹ ಸಿನಿಮಾವಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಸಹಜವಾದ ಮುಗ್ದ ನಗು ಮತ್ತೆ ಕಾಡುತ್ತದೆ. ಕಾಡಿನ ಸುಂದರ ವಿಹಂಗಮ ನೋಟ ಬಣ್ಣಿಸಲು ಆಗದು. ಪುನೀತ್ ರಾಜಕುಮಾರ್ ಶ್ರೀಗಂಧದ ನಾಡಿಗೆ ಗಂಧದಗುಡಿ ಎಂಬ ಅನರ್ಘ್ಯ ರತ್ನ ಕೊಟ್ಟು ಹೋಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.