ನಮಸ್ತೆ ಪ್ರೀತಿಯ ವೀಕ್ಷಕರೆ ಸರ್ಜಾ ಕುಟುಂಬದವರು ಹೊಸ ಅತಿಥಿಯ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಈ ಖುಷಿ ಸಂತೋಷ ಕಾತುರ ಸರ್ಜಾ ಕುಟುಂಬದ ಸದಸ್ಯರಲ್ಲಿದೆ. ದ್ರುವ ಸರ್ಜಾ ದಂಪತಿಗಳು ಚೋಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಧ್ರುವ ಸರ್ಜಾ ತಮ್ಮ ಬಾಲ್ಯದ ಗೆಳತಿಯನ್ನು ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಲಿಟ್ಟಿದ್ದರು. ಎಲ್ಲರಿಗೂ ತಿಳಿದಿರುವಂತೆ ಪ್ರೇರಣಾ ಸರ್ಜಾರವರು ಸರ್ಜಾ ಕುಟುಂಬದ ಎರಡನೇ ಸೊಸೆ ಸದ್ಯಕ್ಕೆ ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ ತಂದೆ ತಾಯಿಯಗುತ್ತಿರುವ ಸಂಭ್ರಮದಲ್ಲಿದ್ದು, ಈ ದಂಪತಿಗಳ ಬದುಕಿನಲ್ಲಿ ಹೊಸ ಅಧ್ಯಾಯವು ಆರಂಭವಾಗಲಿದೆ. ಹೌದು ಇತ್ತೀಚೆಗಷ್ಟೇ ಪ್ರೇರಣಾ ಸರ್ಜಾರವರು ಸೀಮಂತ ಶಾಸ್ತ್ರ ನಡೆದಿತ್ತು, ಆ ಸುಂದರ ಕ್ಷಣಗಳು ಹೇಗಿತ್ತು ನೋಡಿ ಬನ್ನಿ..
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಟ ಧ್ರುವ ಸರ್ಜಾರವರು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಹೌದು, ತಂದೆಯಾಗುತ್ತಿರುವ ವಿಚಾರವನ್ನು ಧ್ರುವ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲು ಮಗುವಿಗೆ ನಿರೀಕ್ಷೆಯಲ್ಲಿದ್ದಾರೆ. ಧ್ರುವ ಸರ್ಜಾ ದಂಪತಿಗಳು. ಇನ್ನು ಮಡದಿ ಪ್ರೇರಣಾ 9 ತಿಂಗಳು ತುಂಬಿದ್ದು, ಸೆಪ್ಟೆಂಬರ್ನಲ್ಲಿ ಸರ್ಜಾ ಕುಟುಂಬಕ್ಕೆ ಪುಟ್ಟ ಪುಟಾಣಿಯ ಆಗಮನವಾಗಲಿದೆ ಎಂದಿದ್ದಾರೆ. ಪ್ರೇರಣಾ ಅವರ ಬೇಬಿ ಬಂಪ್ ವಿಡಿಯೋ ಶೇರ್ ಮಾಡಿರುವ ಧ್ರುವ ಸರ್ಜಾ, ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ, ದೈವಿಕ ಪುಟಾಣಿ ಬೇಗ ಬರಲಿ ಎಂದು ಬರೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಅದರ ಜೊತೆಗೆ ಬೇಬಿ ಬಂಪ್ ಫೋಟೋಗಳು ಎಲ್ಲರ ಮನಸ್ಸನ್ನು ಗೆದ್ದುಕೊಂಡಿತು. ಹೌದು, ಸ್ವಲ್ಪ ಭಿನ್ನವಾಗಿಯೇ ಬೇಬಿ ಬಂಪ್ ಫೋಟೋ ಶೊಟ್ ಮಾಡಿಸಿದ್ದು ವಿಶೇಷವೇನ್ನಾಬಹುದು. ಈ ಬೇಬಿ ಬಂಪ್ ಫೋಟೋ ಶೂಟ್ ನಲ್ಲಿ ಮೊದಲು ಕಾಫಿ ಬಣ್ಣದ ಗೌನ್ನಲ್ಲಿ ಪ್ರೇರಣಾ ಮತ್ತು ಬ್ಲಾಕ್ ಸೂಟ್ ನಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಗುವಿನ ಸ್ಕ್ಯಾನ್ ಫೋಟೋವನ್ನು ತೋರಿಸಿದ್ದರು. ತಮ್ಮ ಮುದ್ದಿನ ಮಗುವನ್ನು ಸೆಪ್ಟೆಂಬರ್ ನಲ್ಲಿ ಬರಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಧ್ರುವ ತಮ್ಮ ಮುದ್ದಿನ ಮಡದಿಗೆ ಧ್ರುವ ಸರ್ಜಾರವರು ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿಸಿದ್ದಾರೆ. ಧ್ರುವ ತಂದೆ ತಾಯಿ, ಮಾವ ಅರ್ಜುನ್ ಸರ್ಜಾ, ಅತ್ತಿಗೆ ಮೇಘನಾ ರಾಜ್, ರಾಯನ್ ರಾಜ್ ಸರ್ಜಾ ಸೇರಿದಂತೆ ಕುಟುಂಬಸ್ಥರು, ಸ್ಯಾಂಡಲ್ವುಡ್ ನ ಆಪ್ತರ ಸಮ್ಮುಖದಲ್ಲಿ ಧ್ರುವ ಪತ್ನಿಯ ಸೀಮಂತ ಶಾಸ್ತ್ರ ಬಹಳ ಅದ್ದೂರಿಯಾಗಿ ನಡೆದಿತ್ತು. ಧ್ರುವ ಸರ್ಜಾ ಪತ್ನಿ ಪ್ರೇರಣಾ ಸರ್ಜಾರವರ ಸೀಮಂತದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈ’ರಲ್ ಆಗಿತ್ತು.
ಅದರ ಜೊತೆಗೆ, ಸೀಮಂತ ಶಾಸ್ತ್ರ ಮುಗಿಸಿ ತಾಯಿ ಮನೆಗೆ ಹೋಗಿದ್ದ ಪ್ರೇರಣಾ ಅವರನ್ನು ಸರ್ಜಾ ಕುಟುಂಬದವರು ಆರತಿ ಬೆಳಗಿ ದೃಷ್ಟಿ ತೆಗೆದು ತಮ್ಮ ಮನೆಗೆ ಬರ ಮಾಡಿಕೊಂಡಿದ್ದರು. ಧ್ರುವ ಸರ್ಜಾರವರ ಪತ್ನಿ ಪ್ರೇರಣಾ ಸರ್ಜಾರವರ ಸೀಮಂತ ಶಾಸ್ತ್ರವು ಹೇಗಿತ್ತು ಎಂದು ನೋಡಲು ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.