ಸ್ಯಾಂಡಲ್ವುಡ್ ನಲ್ಲಿ ಬಹುದೊಡ್ಡ ಯಶಸ್ಸುನ್ನು ಗಳಿಸಿ ಹೆಸರು ಮಾಡಿರುವ ಸಿನೆಮಾಗಳು ಸಾಕಷ್ಟಿವೆ. ಆದರೆ ಆ ಸಮಯದಲ್ಲಿ ಸೂಪರ್ ಹಿಟ್ ಆಗಿ ಎಲ್ಲ ದಾಖಲೆಗಳನ್ನು ಬೇರೆದಿದ್ದ ಸಿನೆಮಾ ಓಂ. 1995 ರಲ್ಲಿ ಡಾ. ಶಿವರಾಜ್ ಕುಮಾರ್ ನಟನೆಯ ಓಂ ಸಿನೆಮಾ ಭರ್ಜರಿ ಹಿಟ್ ಆಗಿ ಕನ್ನಡ ಸಿನೆಮಾರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಜೊತೆಗೆ ಸಾಕಷ್ಟು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ತೆರೆಗೆ ಬಂದ ಓಂ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದರು.
ಈ ಸಿನೆಮಾದಲ್ಲಿ ಶಿವಣ್ಣನವರ ಆಕ್ಟಿಂಗ್ ಹಾಗೂ ಲುಕ್ ಗೆ ಸಿನಿರಸಿಕರು ಇಷ್ಟ ಪಟ್ಟಿದ್ದರು. ಅಷ್ಟೇ ಅಲ್ಲದೇ ಕನ್ನಡ ಸಿನೆಮಾರಂಗದಲ್ಲಿ ಮತ್ತೊಮ್ಮೆ ಇಂತಹ ಸಿನೆಮಾಗಳು ತೆರೆಗೆ ಬರಲು ಸಾಧ್ಯನೇ ಇಲ್ಲ. ಮತ್ತೆ ಓಂ ಸಿನೆಮಾ ತೆರೆಗೆ ಬಂದರೆ ಹೇಗಿರಬಹುದು ಎಂದು ಕುತೂಹಲವಿರಬಹುದು. ಆದರೆ ಅಂತಹ ಸಿನೆಮಾವೊಂದು ಮತ್ತೊಂದು ಸಿನೆಮಾ ರಂಗದಲ್ಲಿ ಬರಲು ಸಾಧ್ಯನೇ ಇಲ್ಲ. ಆದರೆ ಈ ಸಿನೆಮಾದ ಕಥೆ ಕೇಳಿದ್ದ ಅಣ್ಣಾವ್ರು ನಿರ್ದೇಶಕ ಉಪೇಂದ್ರ ಅವರಿಗೆ ಕೊಟ್ಟ ಮುಂಗಡ ಹಣವೆಷ್ಟು ಗೊತ್ತಾ.? ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಅಂದಹಾಗೆ, ಈ ಸಿನೆಮಾವು ಶಿವಣ್ಣನವರ ಸಿನಿ ಬದುಕಿಗೆ ಅತ್ಯಂತ ಮಹತ್ವದ ಚಿತ್ರವಾಗಿದ್ದು ಅವರಿಗೆ ದೊಡ್ಡ ಬ್ರೇಕ್ ನೀಡಿದ ಸಿನೆಮಾಗಳಲ್ಲಿ ಇದು ಕೂಡ ಒಂದು. ಈ ಸಿನೆಮಾದ ಬಳಿಕ ಶಿವಣ್ಣನವರ ಬೇಡಿಕೆಯೂ ಹೆಚ್ಚಾಯಿತು. ಹೌದು, ಈ ಸಿನೆಮಾ ಬಹಳಷ್ಟು ಬಾರಿ ಅಭಿಮಾನಿಗಳ ಒತ್ತಾಯದ ಮೇಲೆ ರೀ ರಿಲೀಸ್ ಆಗಿತ್ತು. ಆದರ ಜೊತೆಗೆ ಓಂ 2 ಚಿತ್ರ ಮಾಡುವಂತೆ ಶಿವಣ್ಣ ಹಾಗೂ ಸಿನೆಮಾತಂಡದ ಜೊತೆಗೆ ಮನವಿ ಮಾಡಿಕೊಂಡಿದ್ದರು. ಆದರೆ ಆ ಕುರಿತು ಚಿತ್ರತಂಡವಾಗಲಿ ಹಾಗೂ ಶಿವಣ್ಣನವರಾಗಲಿ ಯೋಚನೆ ಮಾಡಿರಲಿಲ್ಲ.
ಅಷ್ಟೇ ಅಲ್ಲದೇ, ಓಂ ಸಿನೆಮಾವನ್ನು ಮೀರಿಸುವಷ್ಟರ ಮಟ್ಟಿಗೆ ಓಂ 2 ಸಿನೆಮಾ ಮಾಡುವುದು ಸ್ವಲ್ಪ ಅಸಾಧ್ಯನೇ. ಅದಲ್ಲದೆ, ಶಿವರಾಜ್ ಕುಮಾರ್ ಸದ್ಯಕ್ಕೆ ವೃತ್ತಿ ಜೀವನದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಮುಖ್ಯ ತೀರ್ಪುಗರರಾಗಿ ಕಾಣಿಸಿಕೊಂಡಿದ್ದ ಶಿವಣ್ಣ, ಶೋನಲ್ಲಿ ಓಂ 2 ಸಿನೆಮಾ ಬಗ್ಗೆ ಶಿವಣ್ಣ ಮಾತನಾಡಿದ್ದರು. ಡಿಕೆಡಿ ಕಾರ್ಯಕ್ರಮದ ಮತ್ತೊಬ್ಬ ಜಡ್ಜ್ ಆಗಿರುವ ಚಿನ್ನಿ ಮಾಸ್ಟರ್ ಸಹ ಒಂದು ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದು, ಆ ಸಿನೆಮಾದಲ್ಲಿ ಅಭಿಯಿಸುತ್ತಿರುವ ಬಗ್ಗೆ ಶಿವಣ್ಣ ಮಾಹಿತಿಯನ್ನು ರಿವೀಲ್ ಮಾಡಿದ್ದರು.
ಈ ವಿಷಯದ ಕುರಿತು ಮಾತನಾಡಿದ ಶಿವಣ್ಣ, ಇನ್ನು ಈ ಸಿನೆಮಾಗೆ ಹೆಸರಿಟ್ಟಿಲ್ಲ, ಆದರೆ ಓಂ ರಿಟರ್ನ್ ಎಂದು ಟೈಟಲ್ ಇಡುವ ಬಗ್ಗೆ ಚಿಂತನೆ ನಡೆಸಲಾಗಿತ್ತಿದೆ ಎಂದಿದ್ದಾರೆ. ಆದರೆ, ಈ ಸಿನೆಮಾದ ಹೆಸರಿನಲ್ಲಿ ಮತ್ತೊಂದು ಸಿನೆಮಾ ಮಾಡಿದರೆ, ಅದಕ್ಕೆ ಚಿನ್ನಿ ಮಾಸ್ಟರ್ ನ್ಯಾಯ ಒದಗಿಸಲು ಸಾಧ್ಯವಿದೇಯ? ಎಂದು ಅಭಿಮಾನಿಗಳು ಪ್ರೆಶ್ನೆ ಮಾಡಿದ್ದಾರೆ. ಈ ಸಿನೆಮಾದಲ್ಲಿ, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಮೊದಲ ಬಾರಿ ನಿರ್ದೇಶಿಸುತ್ತಿರುವ ಸಿನೆಮಾದಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನೆಮಾಗೆ 45 ಎಂದು ಹೆಸರಿಟ್ಟಿದ್ದು, ಕಾರ್ಯಕ್ರಮದಲ್ಲಿ ಈ ಸಿನೆಮಾದ ಪೋಸ್ಟರ್ ಅನ್ನು ಬಿಡುಗಡೆಮಾಡಲಾಗಿದೆ.
ಹೌದು, ಶಿವಣ್ಣ ಪ್ರಕಾರ ಈ ಸಿನೆಮಾದ ಕಥೆ ಬಹಳ ವಿಭಿನ್ನವಾಗಿದ್ದು, ಅದ್ಭುತವಾಗಿರಲಿದೆ ಎನ್ನುವುದನ್ನು ಹೇಳಿದ್ದರು. ಈ ಸಿನೆಮಾವು ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನೆಮಾವಾಗಿರೋದು ವಿಶೇಷ. ಮತ್ತೆ ಕನ್ನಡ ಸಿನೆಮಾರಂಗದಲ್ಲಿ ಓಂ 2 ಸಿನೆಮಾ ಬಂದರೆ ಅಭಿಮಾನಿಗಳು ಖುಷಿ ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ಉಪೇಂದ್ರರವರು ಸಿನೆಮಾ ರಂಗದಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಅಣ್ಣಾವ್ರು ಉಪೇಂದ್ರ ಅವರಿಗೆ ಬಳಿ ಮುಂದಿನ ಸಿನೆಮಾ ಯಾವುದು ಎಂದಾಗ
ಓಂ ಸಿನೆಮಾದ ಕಥೆಯನ್ನು ಅಣ್ಣಾವ್ರು ಮುಂದೆ ಇಟ್ಟರು. ಓಂ ಸಿನೆಮಾದ ಕಥೆಯನ್ನು ಕೇಳಿ ಖುಷಿ ಪಟ್ಟ ಅಣ್ಣಾವ್ರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ 50ಸಾವಿರ ರೂಪಾಯಿ ಮುಂಗಡ ಹಣವನ್ನು ಕೊಟ್ಟಿದ್ದರು. ಹೀಗೆ ಎಲ್ಲರೂ ಅಂದುಕೊಂಡಿದ್ದಾಕಿಂತ ನೂರಾರಷ್ಟು ಸಿನೆಮಾ ಯಶಸ್ಸುನ್ನು ಕಂಡಿತು. ಇಂದಿಗೂ ಓಂ ಸಿನೆಮಾ ಎಂದರೆ ಜನರು ನೋಡುತ್ತಾರೆ. ಅಷ್ಟರ ಮಟ್ಟಿಗೆ ಕ್ರೀಜ್ ಹುಟ್ಟಿಸಿದ ಚಿತ್ರ ಇದು.