ಅಂದು ಅಪ್ಪು ಜೊತೆ ನಟಿಸುವ ಅವಕಾಶ ಮೇಘನಾ ರಾಜ್ ಗೆ ಸಿಕ್ಕಾಗ, ಅವರ ತಂದೆ ನಿರಾಕರಿಸಿದ್ದು ಯಾಕೆ ಗೊತ್ತಾ? ವಾವ್ ನಿಜವಾಗ್ಲೂ ನೀವು ಗ್ರೇಟ್ ಅಂತೀರಾ!!

meghana raj rejected appu movie

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟ ನಟಿಯರು ಸಿನೆಮಾಗಳಲ್ಲಿ ನಟಿಸುವ ಅವಕಾಶಕ್ಕಾಗಿ ಹತೋರೆಯುತ್ತಿರುತ್ತಾರೆ. ಅಂತಾದ್ರಲ್ಲಿ ಕನ್ನಡದ ಒಬ್ಬ ಸ್ಟಾರ್ ನಟಿ ಕನ್ನಡದ ದೊಡ್ಡ ಸ್ಟಾರ್ ನಟನ ಜೊತೆ ನಟಿಸುವ ಅವಕಾಶವನ್ನು ಮಿಸ್ ಮಾಡಿಕೊಂಡು ಇಂದಿಗೂ ಕೊರಗುತ್ತಿದ್ದಾರೆ. ಹಾಗಾದರೆ ಬನ್ನಿ ಆ ನಟಿ ಯಾರು ಎಂದು ನೋಡೋಣ.

ಕನ್ನಡದ ಸಿನೆಮಾ ರಂಗದಲ್ಲಿ ಈ ಹಿಂದೆ ಡಾ. ರಾಜ್ ಕುಮಾರ್ ಜೊತೆ, ಡಾ. ವಿಷ್ಣುವರ್ಧನ್ ಜೊತೆ, ಅಂಬರೀಷ್ ಜೊತೆ, ರವಿಚಂದ್ರನ್ ಜೊತೆ ಹೀಗೆ ಅನೇಕರ ಜೊತೆ ನಟಿಸಲು ಅನೇಕ ನಟಿಯಾರು ಕಾಯುತ್ತಿದ್ದರು. ಈಗಿನ ಟ್ರೆಂಡ್ ನಲ್ಲಿರುವ ನಾಯಕರು ಡಿಬಾಸ್, ಯಶ್, ಸುದೀಪ್, ಶಿವಣ್ಣ, ಅದೇ ರೀತಿ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಲು ನಟಿಯರು ಕಾಯುತ್ತಿದ್ದರು.

ಆದರೆ ನಿಮಗೆ ಗೊತ್ತಾ.?! ಅಂದು ಮೇಘನಾ ರಾಜ್ ಅವರಿಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸುವ ಅವಕಾಶ ಬಂದಿತ್ತಂತೆ. ಆದರೆ ಅದನ್ನು ಮೇಘನಾ ರಾಜ್ ಅವರು ಆ ಅವಕಾಶವನ್ನು ಉಪಯೋಗಿಸಿಕೊಳ್ಳಲಿಲ್ಲವಂತೆ. ಯಂಥ ನಟಿಯಾದರೂ ದೊಡ್ಮನೆ ಕುಟುಂಬದ ಕುಡಿ ಅಪ್ಪು ಅವರ ಜೊತೆ ನಟಿಸುವ ಅವಕಾಶ ಸಿಕ್ಕರೆ ಸಾಕು ಹಿಂದೆ ಮುಂದೆ ನೋಡದೆ ಓಕೆ ಅನ್ನುತ್ತಾರೆ.

ಹೀಗಿರುವಾಗ ನಟಿ ಮೇಘನಾ ರಾಜ್ ಯಾಕೆ ಹೀಗೆ ಮಾಡಿದ್ದಾರೆ ಎಂದು ನೀವು ಅಚ್ಚರಿ ಪಡ್ತಿರಾ?! ಇದಕ್ಕೆ ಕಾರಣವೂ ಇದೇ. ಮೇಘನಾ ರಾಜ್ ಅವರಿಗೆ ಅಪ್ಪು ಜೊತೆ ಅಭಿನಯಿಸುವ ಅವಕಾಶ ಬಂದಾಗ ಅದನ್ನು ಮೇಘನಾ ರಾಜ್ ತಂದೆ ಸುಂದರ್ ರಾಜ್ ಅವರೇ ಬೇಡ ಅಂದಿದ್ದರಂತೆ. ಇದರ ಬಗ್ಗೆ ಇತ್ತೀಚಿಗೆ ಸುಂದರ್ ರಾಜ್ ಹೇಳಿಕೊಂಡಿದ್ದಾರೆ. ನಟಿ ಮೇಘನಾ ರಾಜ್ ಅವರಿಗೆ ಈ ಆಫರ್ ಬಂದಾಗ ಅವರಿಗೆ ಇನ್ನು ಒಂಭತ್ತನೇ ತರಗತಿ ಓದುತ್ತಿದ್ದರಂತೆ.

ಓದುವ ವಯಸ್ಸಿನಲ್ಲಿ ಸಿನೆಮಾ ನಟನೆ ಅಂತ ಹೋದರೆ ಅವಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಅಪ್ಪು ಜೊತೆ ನಟಿಸುವ ಆಫರ್ ಅನ್ನು ತಿರಸ್ಕರಿಸಿದ್ದಾರಂತೆ ಅವರ ತಂದೆ. ನಟಿ ಮೇಘನಾ ರಾಜ್ ಮಲಯಾಳಂ, ತೆಲುಗು, ಹಾಗೂ ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ವಿಭಿನ್ನ ಶೈಲಿಯ ಅಭಿನಯದಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಹಿರಿಯ ನಟ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಯ್ ಅವರ ಮುದ್ದಿನ ಮಗಳು ಮೇಘನಾ ರಾಜ್.

ಇವರು ಕನ್ನಡದಲ್ಲಿ ರಾಜಾಹುಲಿ, ಆಟಗಾರ, ಪುಂಡ, ಕುರುಕ್ಷೇತ್ರ, ಅಲ್ಲಮ್ಮ, ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರೆ. ನಟಿ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ವಿ’ಧಿ ಆಟ ಅವರು ಇಷ್ಟಪಟ್ಟಂತೆ ಅವರು ಜೊತೆ ಇರಲು ಬಿಟ್ಟಿಲ್ಲ. ಎರಡು ವರ್ಷಗಳ ಹಿಂದೆ ಚಿರು ಹೃ’ದ’ಯ’ಘಾ’ತವಾಗಿ ನಮ್ಮನ್ನೆಲ್ಲ ಬಿಟ್ಟು ದೂರ ಹೋದರು. ಆಗ ಮೇಘನಾ ರಾಜ್ ಅವರು ಐದು ತಿಂಗಳ ತುಂಬು ಗರ್ಭಿಣಿ ಆಗಿದ್ದರು.

ಪತಿ ಸಾ’ವಿನ ನಂತರ ಮನ ನೊಂದಿದ್ದ ನಟಿ ಮೇಘನಾ ರಾಜ್ ಮಗ ರಾಯನ್ ಹುಟ್ಟಿದ ನಂತರ ಮುದ್ದು ಮಗನ ತುಂಟಾಟ ದಿಂದ ತನ್ನೆಲ್ಲಾ ನೋವುಗಳನ್ನು ಮರೆತು ಮಗನಿಗಾಗಿ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಮತ್ತೆ ಮೊದಲಿನಂತೆ ಆಗಲು ಚಿತ್ರರಂಗಲ್ಲಿ ಹಾಗೂ ಕಿರುತೆರೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಮಗನ ಸಂತೋಷವೇ ನನ್ನ ಸಂತೋಷ ಎನ್ನುತ್ತಿದ್ದಾರೆ ನಟಿ ಮೇಘನಾ ರಾಜ್ ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *